ಭಕ್ತಿ-ಜ್ಯೋತಿಷ್ಯ

ನೆಮ್ಮದಿಗೆ ಬೇಕೊಂದು ಕಾಯಕ

'ಮಾನವನ ಸುಖವು ಜೀವನದಲ್ಲಿದೆ, ಇನ್ನು ಜೀವನವು ಪರಿಶ್ರಮದಲ್ಲಿದೆ' ಎಂಬ ಗಾದೆ ಮಾತು ಪರಿಶ್ರಮದ ಮಹತ್ವವನ್ನು ಸಾರಿ ಹೇಳುತ್ತದೆ...

'ಮಾನವನ ಸುಖವು ಜೀವನದಲ್ಲಿದೆ, ಇನ್ನು ಜೀವನವು ಪರಿಶ್ರಮದಲ್ಲಿದೆ' ಎಂಬ ಗಾದೆ ಮಾತು ಪರಿಶ್ರಮದ ಮಹತ್ವವನ್ನು ಸಾರಿ ಹೇಳುತ್ತದೆ. ಇದನ್ನೇ ಬಸವಣ್ಣನವರು 'ಕಾಯಕವೇ ಕೈಲಾಸ'ವೆಂದು ಸಾರಿದ್ದರು. ಜೊತೆಗೆ ಆ ಮಾತಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಕಾಯಕದಲ್ಲಿ ಮಗ್ನರಾದ ಜನ ಜೀವನದ ಸಮಾಜವನ್ನು ಕಟ್ಟಲು ಶ್ರಮಿಸಿದರು'. ಮಹಾನ್ ಕಾಯಕ ಯೋಗಿ ಎಂಬ ಬಿರುದು ಪಡೆದರು.
ಕೆಲಸಕ್ಕೆ ಆನಂದ ನೀಡುವ ಗುಣವಿದೆ. ಇದರಿಂದ ಸ್ವಸಂತೋಷ ಪಡೆಯಬಹುದಲ್ಲದೇ, ಸಂತೃಪ್ತಿಯನ್ನೂ  ಗಳಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು.
ನಾವು ಮಾಡುವ ಕೆಲಸದಿಂದಲೇ ಸಮಾಜದಲ್ಲಿ ನಮ್ಮ ಗೌರವ ಹಾಗೂ ಸ್ಥಾನಮಾನ ನಿರ್ಧರಿತವಾಗುವುದು.
ಮಹಾನ್ ಸಾಧಕರೇನೂ ಜನ್ಮತಃ ಪ್ರತಿಭಾವಂತರಲ್ಲ. ಕೆಲಸ ಮಾಡುತ್ತಾ ಮಾಡುತ್ತಾ ತಮ್ಮ ಕ್ಷೇತ್ರದಲ್ಲಿ ಪಳಗಿದವರು. ಅದೇ ಅವರನ್ನು ವಿಶೇಷ ಸಾಧಕರನ್ನಾಗಿಸಿತು. ಅಂದರೆ ಪರಿಶ್ರಮವೇ ಸಾಧನೆಗೆ ಭದ್ರ ಬುನಾದಿ ಎಂದಂತಾಯಿತು.
ಪ್ರಯತ್ನ ಮಾಡುವವರಿಗೆ, ಪರಿಶ್ರಮ ಪಡುವವರಿಗೆ ಮಾತ್ರ ಜೀವನದಲ್ಲಿ ಗೆಲುವು ಸಾಧ್ಯ. ಸೋಮಾರಿಗಳಿಗೆ ಕಷ್ಟಗಳ ಸರಮಾಲೆ ಖಚಿತ. ಪರಿಶ್ರಮವು ಜೀವನವನ್ನು ಸವಾಲೆಂದು ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ. ಆದರೆ ಸೋಮಾರಿತನ ಸಮಾಜಕ್ಕೆ ಅಂಟಿಕೊಂಡ ರೋಗ. ಈ ರೋಗ ನಿವಾರಣೆಗೆ ಕಾಯಕವೇ ಮದ್ದು. ಸೋಮಾರಿತನ ಸಮಸ್ಯೆಗಳ ಸರಣಿಯನ್ನು ಆಹ್ವಾನಿಸುತ್ತದೆ.
ಸಮಸ್ಯೆಗಳ ಸುಳಿಯಲ್ಲಿ ಬಿದ್ದು ಒದ್ದಾಡಿ ಜೀವನ ಹಾಳು ಮಾಡಿಕೊಳ್ಳುವವರನ್ನು ನೋಡಿಯೇ ಕನಕದಾಸರು 'ಮಾನವ ಜೀವನ ದೊಡ್ಡದು, ಇದು ಹಾಳು ಮಾಡಿಕೊಳ್ಳಲು ಬೇಡಿ ಹುಚ್ಚಪ್ಪಗಳಿರಾ!' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
'ಪ್ರಯತ್ನಪೂರ್ವಕ ಪ್ರಯತ್ನದಿಂದ ತನ್ನನ್ನು ತಾನೇ ಉದ್ಧರಿಸಿಕೊಳ್ಳುವ ಪ್ರಶ್ನಾತೀತ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇದೆ ಎಂಬ ಸತ್ಯಕ್ಕಿಂತ ಉತ್ಸಾಹ ನೀಡುವ ವಿಷಯ ಬೇರೆ ಇಲ್ಲ' ಎನ್ನುತ್ತಾನೆ ಹೆನ್ರಿ ಡೆವಿಡ್ ಥೋರೊ. ಆದ್ದರಿಂದ ಕಾರ್ಯದಲ್ಲಿ ಮಗ್ನರಾಗಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು ಒಳಿತು.
ನಮ್ಮಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಗುರುತಿಸಿಕೊಂಡು ಸೂಕ್ತ ಪರಿಶ್ರಮ ಪಟ್ಟಿದ್ದೇ ಆದರೆ ನಾವು ಜಯಶಾಲಿಗಳಾಗುತ್ತೇವೆ. ಜಯ ಮನುಷ್ಯನಲ್ಲಿ ಹೊಸ ಹುಮ್ಮಸ್ಸು ಮತ್ತು ಹೊಸ ವಿಚಾರ ತರುವುದು ಮತ್ತೆ ಹೊಸ ಸಾಧನೆಗೆ ದಾರಿ ಮಾಡಿಕೊಡುವುದು.
ಹೀಗೆ ಹಲವು ಗೆಲುವುಗಳಿಗೆ ನಾಂದಿ ಹಾಡುವ ಕೆಲಸವನ್ನೇ ದೇವರೆಂದು ತಿಳಿದು ನಮ್ಮ ಸರ್ವ ಶಕ್ತಿಯನ್ನೂ ನಮಗೆ ಅನ್ನ ನೀಡುವ ವೃತ್ತಿಯಲ್ಲಿ ತೊಡಗಿಸಿ 'ಕಾಯಕದಲ್ಲಿಯೇ ದೇವರನ್ನು ಕಾಣುವ ತತ್ವವನ್ನು ಪಾಲಿಸಿ, ಕಾಯಕದಿಂದಲೇ ಸುಂದರ ಸದೃಡ ಸಮಾಜ ಕಟ್ಟಲು ಅಣಿಯಾಗೋಣ.

- ಜಯಶ್ರೀ ಅಬ್ಬಿಗೇರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ