ಉದ್ಯೋಗ ತಾರೆ
(ಹಿಂದಿನ ವಾರದಿಂದ)
ಯಾವ ನಕ್ಷತ್ರದವರು ಯಾವ ವೃತ್ತಿ ಕೈಗೊಳ್ಳಬಹುದು? ಇಲ್ಲಿದೆ ಎರಡನೇ ಕಂತು.
ಪುನರ್ವಸು
ನಕ್ಷತ್ರದವರು ಬೋಧನೆ, ಖಜಾನೆ, ಸಂಶೋಧನೆ, ಲೆಕ್ಕಾಚಾರ, ಚಿನ್ನ, ಬೆಳ್ಳಿ ರತ್ನಗಳ ವ್ಯಾಪಾರ, ಹಳದಿ ಲೋಹಗಳ ವ್ಯಾಪಾರ, ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯದವರಿಗೆ ಸಲಹೆಗಾರರು, ಧಾರ್ಮಿಕ ದತ್ತಿ, ದೇವಸ್ಥಾನ ಆಡಳಿತ ಉದ್ಯೋಗಳಿಂದ ಹೆಚ್ಚು ಲಾಭ.
ಪುಷ್ಯ
ಕಬ್ಬಿಣದ ವ್ಯಾಪಾರ, ಕಂಬಳಿ, ರಗ್ಗು, ಟವೆಲ್ ವ್ಯಾಪಾರ, ಗೋಶಾಲೆ, ಕಿರಾಣಿ ಅಂಗಡಿ, ಮದ್ಯ ವ್ಯಾಪಾರ, ಜ್ಯೂಸ್ ಸೆಂಟರ್, ರಾಸಾಯನಿಕ ವಸ್ತುಗಳ ವ್ಯಾಪಾರ, ವಸ್ತ್ರ ವ್ಯಾಪಾರ, ಸೌಂದರ್ಯ ವರ್ಧಕ ವ್ಯಾಪಾರದಿಂದ ಲಾಭ.
ಆಶ್ಲೇಷಾ
ಹಾಲಿನ ವ್ಯಾಪಾರ, ಹಣ್ಣು, ಹೂ, ತರಕಾರಿ ವ್ಯಾಪಾರ, ಸೌಂದರ್ಯವರ್ಧಕ ವ್ಯಾಪಾರ, ಕಂಪ್ಯೂಟರ್ ಬಿಡಿ ಭಾಗಗಳ ವ್ಯಾಪಾರ, ವೀಡಿಯೋ ಸಿನೆಮಾ ಫೋಟೋಗ್ರಫಿ, ಸಂಗೀತ ಉಪಕರಣಗಳ ವ್ಯಾಪಾರ, ಡಿಜಿಟಲ್ ಕ್ಯಾಮೆರಾ ಹಾಗೂ ಗಡಿಯಾರಗಳ ವ್ಯಾಪಾರ, ಬೆಳ್ಳಿ ವಸ್ತುಗಳ ಮಾರಾಟದಲ್ಲಿ ತೊಡಗಿಕೊಳ್ಳಬಹುದು.
ಮಖಾ
ಧರ್ಮ ಸಂಸ್ಥೆಗಳ ಮುಖ್ಯಸ್ಥರಾಗಿ ಊದುಬತ್ತಿ ವ್ಯಾಪಾರ, ಹೊಗೆಸೊಪ್ಪು, ಆಟಿಕೆಗಳ ವ್ಯಾಪಾರ, ನೈಲಾನ್ ವಸ್ತುಗಳ ವ್ಯಾಪಾರ, ಒಣಗಿದ ಕಾಳು, ಹಣ್ಣುಗಳ ವ್ಯಾಪಾರ, ಬಾರ್ ಎಂಡಿ ರೆಸ್ಟೊರೆಂಟ್ ಖರೀದಿ ಮತ್ತು ಮಾರಾಟ, ಗುರುಗಳು, ಟೀಚರ್, ರಾಜಕೀಯದವರೊಂದಿಗೆ ಒಡನಾಟ ಇಟ್ಟುಕೊಂಡರೆ ಅಭಿವೃದ್ಧಿ.
ಹುಬ್ಬಾ
ನಾಟ್ಯ, ಕಲೆ, ಸಾಹಿತ್ಯ, ಸಂಗೀತ ಉಪಕರಣಗಳ ವ್ಯಾಪಾರ, ರಾಜಕೀಯ, ಶೃಂಗಾರ ವಸ್ತುಗಳ ವ್ಯಾಪಾರ, ರಾಜಕೀಯದವರಿಗೆ ಸಲಹೆ, ಬ್ಯೂಟಿ ಪಾರ್ಲರ್, ಕಟಿಂಗ್ ಶಾಪ್, ಬಟ್ಟೆಗಳ ವ್ಯಾಪಾರದಿಂದ ಲಾಭ.
ಉತ್ತರಾ
ರಾಜಕೀಯ ಸಂಘ ಸಂಸ್ಥೆಗಳ ಮುಖಂಡರು, ಹೋಲ್ಸೇಲ್ ಗಿರಣಿ ವ್ಯಾಪಾರ, ಎಲ್ಲಾ ತರಹದ ಎಣ್ಣೆ ವ್ಯಾಪಾರ, ಆಟೋಮೊಬೈಲ್ ಬಿಡಿ ಭಾಗಗಳ ಮಾರಾಟ, ಚಿಟ್ ಫಂಡ್, ಫೈನಾನ್ಸ್ ಮಾಡಬಹುದು. ಸುಡುಮದ್ದು ತಯಾರಿಕಾ ಕಾರ್ಖಾನೆಯಿಂದ ಲಾಭವಾಗುತ್ತದೆ. ಮಾಹಿತಿಗಾಗಿ 8553470343 ಸಂಪರ್ಕಿಸಿ.
(ಮುಂದುವರಿಯುವುದು)
-ಅಂಜನ್ ಕುಮಾರ್