ಸೂರ್ಯನಿಂದ 149 ಮಿಲಿಯನ್ ಕಿ.ಮೀ. ದೂರದಲ್ಲಿದ್ದು, ಏಕಮಾನ ಚಂದಿರನನ್ನು ಹೊಂದಿರುವ ಪೃಥ್ವಿಯ ಮೇಲ್ಮೈ ಸಕಲ ಜೀವರಾಶಿಗಳ ಭೌತಿಕ ಗುಣಗಳಿಗೂ ಸೂರ್ಯ, ಚಂದ್ರ ಮತ್ತು ಇತರೆ ಗ್ರಹಗಳ ಚಲನ ಸಿದ್ಧಾಂತದಲ್ಲಿ ಸಂಭವಿಸುವ ನಭೋ ಪ್ರಭಾವಕ್ಕೂ ಅವಿನಾಭಾವ ಸಂಬಂಧವಿದೆ.
ಸೂರ್ಯನ ಚಲನಸಿದ್ಧಾಂತದ ಮೇರೆಗೆ ಖಗೋಳ ಶಾಸ್ತ್ರಜ್ಞರು ರಾಶಿ ಮತ್ತು ಮಾಸಗಳನ್ನು ದೃಢಪಡಿಸಿದರು. ಆ ಮಾಸಗಳಲ್ಲಿ ಸೂರ್ಯನ ಚಲನೆಯಿಂದಾಗಿ ಆಯಾ ಗ್ರಹಗಳ ಮೇಲೆ ಉಂಟಾಗುವ ಮತ್ತು ರಾಶಿಗಳ ಮೇಲೆ ಉಂಟಾಗುವ ಪ್ರಭಾವ ಮತ್ತು ರಾಶಿಗಳಿಂದ ಜೀವಿಗಳ ಮೇಲೆ ಉಂಟಾಗುವ ಪ್ರಭಾವಗಳನ್ನು ಜ್ಯೋತಿಷಿಗಳು ಪ್ರಸ್ತುತಪಡಿಸಿದರು. ಹೀಗೆ ಆಷಾಢ ಮಾಸದಲ್ಲಿಯೂ ರಾಶಿಗಳ ಪ್ರಭಾವವನ್ನು ಗುರುತಿಸಿದರು.
ರಾಶಿಫಲ
ಆಷಾಢಮಾಸದ ಜೂನ್ 28 ರಿಂದ ಜುಲೈ 25 ರ ಕಾಲಗಣನಾ ಚಕ್ರದಲ್ಲಿ ರವಿಯು ಕಟಕ ಮತ್ತು ಸಿಂಹ ರಾಶಿಗಳಲ್ಲಿ ಸಂಚರಿಸುವುದರಿಂದ (ಕ್ಷೀಣ ಮತ್ತು ವೃದ್ಧಿ ಚಂದ್ರ) ಸೂರ್ಯನ ನಭೋ ಪ್ರಭಾವ ಪೃಥ್ವಿಯ ಮೇಲೆ ಅಧಿಕವಾಗಿ ಬೀಳುತ್ತಲಿರುತ್ತದೆ.
ಆಷಾಢದಲ್ಲಿ ರವಿ ಮತ್ತು ಚಂದ್ರನ ಪ್ರಭಾವ ಹೆಚ್ಚಿರುತ್ತದೆ. ಈ ಕಾಲಮಾನದಲ್ಲಿ ಹಗಲು ಮತ್ತು ರಾತ್ರಿ ಜನಿಸಿದವರ ಗೋಚಾರ ಫಲಗಳು ವಿಭಿನ್ನವಾಗಿರುತ್ತವೆ. ಹಗಲು ಜನಿಸಿದವರು ದೃಢಕಾಯ ಶರೀರ, ಅಧಿಕ ಆಯಸ್ಸು, ಗ್ರಹ ದೋಷಗಳು, ಅಫಘಾತ ಮತ್ತು ಅವಘಡಗಳಿಂದ ದೂರ, ಸಾಹಸ ಪ್ರಿಯರು, ಬುದ್ಧಿ ಜೀವಿಗಳು, ಸಂಶೋಧಕರು, ಅಧಿಕ ಧನವಂತರಾಗುತ್ತಾರೆ.
ರಾತ್ರಿ ಸಮಯದಲ್ಲಿ ಜನಿಸಿದವರು ಹಠಮಾರಿ, ಸರ್ವಕಾರ್ಯಚತರು, ಉತ್ತಮ ಕ್ರೀಡಾಪಟು ಆಗುವರು. ಈ ಕಾಲಮಾನದ ಚಂದ್ರ ಮತ್ತು ಗುರು ದೆಸೆಯಲ್ಲಿ ಜನನವಾದರೆ, ಬ್ರಹ್ಮಜ್ಞಾನಿಗಳು, ಕಲಾವಿದರು, ಗಾಯಕರು, ವಿಜ್ಞಾನಿಗಳು, ಸಾಹಸಪ್ರಿಯರಾಗುತ್ತಾರೆ.
ಚಂದ್ರದೆಸೆ ಗೋಚಾರ ಫಲಗಳು
ಪೃಥ್ವಿಯಿಂದ 3,80,000 ಕಿಲೋಮೀಟರ್ ದೂರದಲ್ಲಿರುವ ಚಂದ್ರನು, ಜುಲೈ 12 ರ ಶನಿವಾರ ಆಷಾಢ ಪೌರ್ಣಮಿಯ ಶುಭ ದಿನದಂದು ದೈವಿಕ ಮತ್ತು ಆಧ್ಯಾತ್ಮಿಕ ವಿಶೇಷತೆಯನ್ನು ಹೊಂದಿದ್ದು, ಸೂಪರ್ ಮೂನ್ ಆಗಿ ಗೋಚರಿಸಲಿರುವನು.
ಇದರಿಂದ ಚಂದ್ರದೆಸೆಯಲ್ಲಿ ಜನಿಸಿದ್ದು, ಅಧಿಕ ನಕ್ಷತ್ರಗಳನ್ನು ಹೊಂದಿರುವ ಧನಸ್ಸು (65), ವೃಶ್ಚಿಕ (62), ಕನ್ಯಾ (58), ಕುಂಭ (56), ಸಿಂಹ (52), ಮೀನ (47) ಮತ್ತು ಮಿಥುನ (47) ರಾಶಿಗಳ ಮೇಲೆ ಚಂದ್ರನು ಅಧಿಕ ನಭೋ ಪ್ರಭಾವ ಎರಕ ಹೊಯ್ಯುವುದರಿಂದ ಅಂತಹ ರಾಶಿಯವರಿಗೆ ಆಗಸ್ಟ್ 29 ರಿಂದ ಸೆಪ್ಟೆಂಬರ್ ಕಾಲಮಾನದಲ್ಲಿ ಅಮೃತ ಸಿದ್ಧಿಯೋಗ, ರಾಜಯೋಗ, ಶುಕ್ರದೆಸೆ ಮತ್ತು ಗಜಕೇಸರಿ ಯೋಗಗಳು ಆರಂಭವಾಗಿ ಮುಂದಿನ ಮೂರು ವರ್ಷಗಳ ತನಕ ಇರುತ್ತವೆ.
ಈ ಕಾಲದಲ್ಲಿ ಬಂಡವಾಳ ಹೂಡಿಕೆ, ಹಣದ ಲೇವಾದೇವಿ, ವ್ಯಾಪಾರ, ವ್ಯವಹಾರ, ವಿದೇಶ ಪ್ರವಾಸ, ಸಂಶೋಧನೆ ಮತ್ತು ಭೂವ್ಯವಹಾರಗಳಲ್ಲಿ ಪ್ರಗತಿದಾಯಕವಾಗಿರುತ್ತದೆ. ಈ ಕಾಲಮಾನದಲ್ಲಿ (ಜುಲೈ 12 ರಿಂದ 26) ಜನಿಸಿದ ಮಕ್ಕಳಿಗೆ ಯಾವುದೇ ಗ್ರಹದೋಷಗಳು ಬರಲಾರವು. ಜ್ಞಾನ, ಛಲ, ವೀರ್ಯ ಐಶ್ವರ್ಯ, ಶಕ್ತಿ, ಸಾಹಸ, ಪರಾಕ್ರಮ, ಬುದ್ಧಿಬಲ ಮತ್ತು ತೇಜಸ್ಸುಗಳು ತಾವಾಗಿಯೇ ವೃದ್ಧಿಸುತ್ತವೆ. ಮಾಹಿತಿಗೆ 09945605618
= ವಿ.ನಾರಾಯಣ ಶೆಟ್ಟಿ ಪದ್ಮಸಾಲಿ