ನವಗ್ರಹಗಳಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ ಮತ್ತು ಗುರುವಿಗೆ ಸಂಖ್ಯಾಶಾಸ್ತ್ರದಲ್ಲಿ 3ರ ಸಂಖ್ಯೆಯಿಂದ ಗುರುತಿಸಿದ್ದಾರೆ. ಇಂತಹ ಗುರುವಿನ ಅನುಗ್ರಹ ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಗತ್ಯ. ಗುರುಬಲವಿಲ್ಲದಿದ್ದರೆ, ಅಂತಹ ರಾಶಿಯವರಿಗೆ ತೊಂದರೆಗಳು ಆಗಬಹುದು.
ಇದೀಗ ಗುರು ಕಟಕ ರಾಶಿಗೆ ಪ್ರವೇಶಿಸಿದ್ದು ಇದು ಗುರುವಿಗೆ ಉಚ್ಚಕ್ಷೇತ್ರ. ಹೀಗಾಗಿ ಕೆಲವು ರಾಶಿಯವರಿಗೆ ಗುರುಬಲವಿದ್ದರೆ, ಕೆಲವು ರಾಶಿಯವರಿಗೆ ಇರುವುದಿಲ್ಲ.
ಮೇಷ, ವೃಷಭ, ಕಟಕ, ಸಿಂಹ, ತುಲಾ, ಧನುಸ್ಸು, ಕುಂಭ ಇವರಿಗೆ ಈಗ ಗುರುಬಲವಿಲ್ಲ. ಮಿಥುನ, ಕನ್ಯಾ, ವೃಶ್ಚಿಕ, ಮಕರ, ಮೀನ ರಾಶಿಯವರಿಗೆ ಗುರುಬಲವಿರುತ್ತದೆ.
ಗುರುಬಲವಿರದ ರಾಶಿಯವರು ಏನು ಮಾಡಬೇಕು?
ಮೇಷ
4ನೇ ಮನೆಯಲ್ಲಿ ಗುರುವಿದ್ದು, ಸುಖಸ್ಥಾನಕ್ಕೆ ದಕ್ಕೆ ಬರಬಹುದು ಮತ್ತು ಕಾಲಪುರುಷನ ಅಂಗವಾದ ಹೃದಯ ಭಾಗಕ್ಕೆ ತೊಂದರೆಯಾಗಬಹುದು. ಪರಿಹಾರಕ್ಕಾಗಿ ಗುರುವಿಗೆ 108 ಕಡಲೆಕಾಳಿನ ಹಾರವನ್ನು ಗುರುವಾರದಂದು ಯಾವುದಾದರೂ ನವಗ್ರಹದ ದೇವಸ್ಥಾನಕ್ಕೆ ನೀಡಿ ಗುರುಶಾಂತಿ ಮಾಡಿಸಿಕೊಳ್ಳುವುದು.
ವೃಷಭ
3ನೇ ಮನೆಯಲ್ಲಿ ಗುರುವಿದ್ದು, ಬಂಧುಗಳಿಂದ ವ್ಯಾಜ್ಯಗಳಾಗಬಹುದು, ದಾಯಾದಿಗಳ ಕಲಹ ಸ್ನೇಹಿತರಿಂದ ತೊಂದರೆಯಾಗಬಹುದು. ಪರಿಹಾರಕ್ಕಾಗಿ ದಕ್ಷಿಣಾ ಮೂರ್ತಿ ದೇವಸ್ಥಾನಕ್ಕೆ ಪ್ರತಿ ಗುರುವಾರ ಹೋಗಿ ಅರ್ಚನೆ ಮಾಡಿಸಬೇಕು.
ಕಟಕ
ಜನ್ಮ ಗುರುವಾಗಿದ್ದು, ಇವರಿಗೆ ತಲೆಗೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಮಾನಸಿಕ ಕಿರಿಕಿರಿ ಇರುತ್ತದೆ. ಆಯವ್ಯಯಗಳ ಏರುಪೇರಿನಿಂದ ವ್ಯಾಜ್ಯಗಳಾಗುವ ಸಾಧ್ಯತೆ ಇರುತ್ತದೆ. ಪರಿಹಾರವಾಗಿ ಪ್ರತಿ ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಅರ್ಚನೆ, ಸಂಕಲ್ಪ ಮಾಡಿಕೊಂಡು ಮೃತ್ಯುಂಜಯ ಮಂತ್ರ ಜಪಿಸಬೇಕು.
ಸಿಂಹ
ಗುರು 12ನೇ ಮನೆಯಲ್ಲಿ ಇದ್ದು ವ್ಯಾಪಾರದಲ್ಲಿ ಸೋಲು ವಿನಾ ಕಾರಣ ಜಗಳಗಳಿಂದ ಕೋರ್ಟು ಕಛೇರಿಗಳಿಗೆ ಭೇಟಿ ಕೊಡುವ ಸಾಧ್ಯತೆ. ಪರಿಹಾರಕ್ಕಾಗಿ ಪ್ರತಿ ಗುರುವಾರ ದಕ್ಷಿಣಮೂರ್ತಿ ಮತ್ತು ರಾಘವೇಂದ್ರ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮತ್ತು ಪೂಜೆ ಮಾಡಿಸಿ ರಾಘವೇಂದ್ರ ಮಂತ್ರ ಜಪಿಸಬೇಕು.
ತುಲಾ
ಗುರು 10ನೇ ಮನೆಯಲ್ಲಿದ್ದು, ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ, ವ್ಯಾಪಾರದಲ್ಲಿ ಕುಂಠಿತ ಉದ್ಯೋಗಕ್ಕಾಗಿ ಪರಸ್ಥಳಕ್ಕೆ ಹೋಗಬೇಕಾಗಬಹುದು. ಪರಿಹಾರಕ್ಕಾಗಿ ಪ್ರತಿ ಗುರುವಾರ ರಾಯರ ದೇವಸ್ಥಾನದಲ್ಲಿ ಕಲ್ಲುಸಕ್ಕರೆ ಹಂಚಬೇಕು.
ಧನಸ್ಸು
8ನೇ ಮನೆಯಲ್ಲಿ ಗುರುವಿದ್ದು, ಹಣ ಎಷ್ಟು ಸಂಪಾದಿಸಿದರೂ, ತಮಗೆ ಅರಿವಿಲ್ಲದಂತೆ ಖರ್ಚಾಗಿ ಹೋಗುತ್ತದೆ ಮತ್ತು ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಪರಿಹಾರಕ್ಕಾಗಿ ಪ್ರತಿದಿನ ಅಶ್ವತ್ಥ ವೃಕ್ಷವನ್ನು ಸುತ್ತುವುದು, ಗುರುವಾರ ರುದ್ರಾಭಿಷೇಕ ಮಾಡಿಸಬೇಕು.
ಕುಂಭ
ಗುರು 6ನೇ ಮನೆಯಲ್ಲಿದ್ದು ಇವರಿಗೆ ಋಣಬಾಧೆ ಸಾಲ ಹೆಚ್ಚಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ. ಪರಿಹಾರಕ್ಕಾಗಿ ಗುರು ಶಾಂತಿ ಮಾಡಿಸುವುದು. ಸೋಮವಾರದಂದು ಏಕವಾರು ರುದ್ರಾಭಿಷೇಕ ಮಾಡಿಸುವುದು. ಗುರುವಾರದಂದು ಯಾವುದಾದರು ಮಠಕ್ಕೆ ಭೇಟಿ ನೀಡಬೇಕು. ಮಾಹಿತಿಗಾಗಿ ಮೊ.8553470343 ಸಂಪರ್ಕಿಸಿ.
= ಎನ್. ಅಂಜನ್‌ಕುಮಾರ್