ಭಕ್ತಿ-ಜ್ಯೋತಿಷ್ಯ

ಯಜ್ಞದ ಮಹತ್ವಗಳು

ಸೃಷ್ಟಿಯ ಧನಾತ್ಮಕ ಶಕ್ತಿಗಳೊಂದಿಗೆ ನಡೆಸುವ ನೇರ ಸಂವಹನವನ್ನು ಯಜ್ಞ ಎಂದು ಕರೆಯುತ್ತೇವೆ. ವೇದಕಾಲದ ಋಷಿಮುನಿಗಳು ನಡೆಸುತ್ತಿದ್ದ ಇಂಥ ಯಜ್ಞಗಳಿಗೆ ದೇವಾನುದೇವತೆಗಳು ಪಾಲ್ಗೊಳ್ಳುತ್ತಿದ್ದರು. ಅದೇ ರೀತಿ ಅಸುರರು ಕೂಡ ಯಜ್ಞ ನಡೆಯುವತ್ತ ಧಾವಿಸುತ್ತಿದ್ದರು. ಆದರೆ ಅವರು ಬರುತ್ತಿದ್ದುದು ಅದನ್ನು ತಡೆಯಲು ಹಾಗೂ ತೊಂದರೆ ಕೊಡಲು. ಸೃಷ್ಟಿಯೇ ಹಾಗಲ್ಲವೇ? ಅದು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಸಂಗಮ. ಅವೆರಡೂ ಇದ್ದ್ದರೆ ಮಾತ್ರ ಸಮತೋಲನ ಸಾಧ್ಯ.
ಪ್ರತಿ ಸೃಷ್ಟಿಯಲ್ಲೂ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಇದ್ದೇ ಇರುತ್ತದೆ. ಜಗತ್ತಿನ ಯಾವ ವಸ್ತುವೂ, ಯಾವ ಜಾಗವೂ, ಯಾವ ಕಾಲವೂ ಕೇವಲ ಧನಾತ್ಮಕ ಅಥವಾ ಕೇವಲ ಋಣಾತ್ಮಕ ಅನ್ನುವ ಹಾಗೇ ಇಲ್ಲ. ಕೆಲವುಗಳಲ್ಲಿ ಧನಾತ್ಮಕ ಅಂಶಗಳು ಹೆಚ್ಚಿದ್ದರೆ ಕೆಲವುಗಳಲ್ಲಿ ಋಣಾತ್ಮಕ ಅಂಶಗಳು ಹೆಚ್ಚಿರುತ್ತವೆ. ತೇಜಸ್ಸಿನಿಂದ ಹೊಳೆಯುವ ಶರೀರ ಧನಾತ್ಮಕ ಅಂಶ ಹೆಚ್ಚು ಹೊಂದಿದೆ ಎಂದರ್ಥ. ರೋಗ ರುಜಿನದ, ವೃದ್ಧಾಪ್ಯ ತಗುಲಿದಂಥ ದೇಹಗಳು ಋಣಾತ್ಮಕ ಅಂಶ ಹೆಚ್ಚಿಕೊಂಡಿವೆ ಅಂತ ಅರ್ಥ.
ಅದೇ ರೀತಿ, ಮಾಲಿನ್ಯಯುತ ವಾತಾವರಣ ಋಣಾತ್ಮಕ ಶಕ್ತಿಯ ಸಂಕೇತವಾದರೆ ಮಾಲಿನ್ಯರಹಿತ ಪರಿಸರ ಧನಾತ್ಮಕ ಶಕ್ತಿಯನ್ನು ಸೂಚಿಸುತ್ತದೆ. ಸತ್ಯಯುಗದಲ್ಲಿ  ದೇವಾನುದೇವತೆಗಳು, ಋಷಿಮುನಿಗಳು ಭೂಮಿಯ ಮೇಲೆ ಸಂತೋಷವಾಗಿ ಆರಾಮದಿಂದ ಸುತ್ತಾಡುತ್ತಿದ್ದರು. ಯಾಕಂದ್ರೆ ಧನಾತ್ಮಕತೆ ಎಂಬುದು ಆಗ  ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದರೆ ಈಗ ಹಾಗಿಲ್ಲ. ಈ ಕಲಿಯುಗದಲ್ಲಿ ಋಣಾತ್ಮಕ ಅಂಶಗಳೇ ಹೆಚ್ಚಾಗಿ ತುಂಬಿಕೊಂಡಿದ್ದು ಯೋಗಿಗಳು ಮತ್ತು ಗುರುಗಳು ಕಡಿಮೆಯಾಗುತ್ತಿದ್ದಾರೆ. ದೇವರನ್ನು ದೇವತೆಗಳನ್ನು ಒಲಿಸಿಕೊಳ್ಳಲು ಬೇಕಾದ ಸುಪ್ತ ಶಕ್ತಿಗಳು ಜಗತ್ತಿನ ಮಾಲಿನ್ಯದಿಂದಾಗಿ ಅಸಾಧ್ಯವಾಗುತ್ತಿವೆ. ಇಂಥ ಸಮಯದಲ್ಲಿ ಯೋಗ ಅಭ್ಯಾಸಗಳು ಮತ್ತು ಕೆಲವು ಧಾರ್ಮಿಕ ಕ್ರಿಯೆಗಳು, ದಾನಧರ್ಮಗಳು ಮತ್ತು ಸೇವೆಗಳು ದೈವಶಕ್ತಿಯನ್ನು ಒಲಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತವೆ.
ಸನಾತನ ಕ್ರಿಯೆ ಯಜ್ಞದ ಬಗೆಗಿನ ನೀತಿನಿಯಮಗಳನ್ನು ಹಾಗೂ ಮಹತ್ವಗಳನ್ನು ವಿವರವಾಗಿ ತಿಳಿಸಿಕೊಡುತ್ತದೆ ಹಾಗೂ ಸನಾತನ ಕ್ರಿಯೆಯ ಮೂಲಕ ಸುತ್ತಲಿನ ಪರಿಸರದಲ್ಲಿ ಪಾಸಿಟಿವ್ ಶಕ್ತಿಯ ನಿರ್ಮಾಣವಾಗುತ್ತದೆ. ಕೆಲವು ತೇಜಸ್ಸುಭರಿತ ಮಂತ್ರಗಳಿಂದ ಆ ವಾತಾವರಣ ಸೃಷ್ಟಿಯಾಗುತ್ತದೆ. ಇದರ ಮೂಲಕ ಜೀವರಾಶಿ ಮತ್ತು ಪರಿಸರದ ಮೇಲೆ ಹತೋಟಿ ಸಾಧಿಸಬಹುದು. ಯಜ್ಞದ ಮೊದಲು ಮಾಡುವ ಸಂಕಲ್ಪ ನಾವು ಏನನ್ನು ಮಾಡಬಯಸಿದ್ದೇವೆ ಎಂಬುದನ್ನು ಸೂಚಿಸಿದರೆ, ನಂತರದ ಆವಾ ಹನಾ ಕ್ರಿಯೆಯಲ್ಲಿ ದೇವ ದೇವತೆಗಳನ್ನು ಒಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಯಜ್ಞಗಳು ಗುರುವಿನ ಸಮ್ಮುಖ ಮತ್ತು ನಿರ್ದೇಶನದಲ್ಲಿ ನಡೆದರೆ ಅದರ ಫಲ ಸಾಧ್ಯ. ಜೊತೆಗೆ ನಮ್ಮ ಯೋಚನೆಗಳಲ್ಲಿ ಶುದ್ಧತೆ, ಸ್ಪಷ್ಟ ಮಂತ್ರಗಳು, ಪ್ರಶಾಂತ ವಾತಾವರಣ ಇವೆಲ್ಲವೂ ಮುಖ್ಯ. ನಮ್ಮ ಸುತ್ತ ಪಾಸಿಟಿವ್ ಶಕ್ತಿಯನ್ನು ನಿರ್ಮಿಸಿಕೊಳ್ಳುವುದರಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.
ವಿ.ಸೂ: ಯೋಗಿ ಅಶ್ವಿನಿಯವರು ಜುಲೈ ತಿಂಗಳ 18 ಮತ್ತು 19ರಂದು ಬೆಂಗಳೂರಿನಲ್ಲಿ ಇರಲಿದ್ದಾರೆ. ಯಜ್ಞ, ಮಂತ್ರ ಕಲಿಕೆಗೆ ಮತ್ತು ತತ್ವಶುದ್ಧಿ ಶಿಬಿರಗಳಿಗೆ ನೊಂದಾಯಿಸಿಕೊಳ್ಳುವ ಆಸಕ್ತಿ ಇರುವವರು 9448335830/7406175228 ನಂಬರ್‌ಗೆ ಕರೆ ಮಾಡಬಹುದು ಅಥವಾ dhyan@dhyanfoundation.com  ವಿಳಾಸಕ್ಕೆ ಇಮೇಲ್ ಮಾಡಬಹುದು.

= ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು