ಭಕ್ತಿ-ಜ್ಯೋತಿಷ್ಯ

ಮಂತ್ರಶಕ್ತಿ ಶಬ್ದಗಳ ಪೂರ್ವಜ ಓಂ

ಜಗತ್ತಿನ ಪ್ರತಿ ವಸ್ತುವಿಗೂ ಅದಕ್ಕೆ ಸಂಬಂಧಿಸಿದ್ದೊಂದು ಶಬ್ದವಿದೆ. ಸಹಸ್ರಾರು ವರ್ಷಗಳ ಹಿಂದೆ ಜೀವಿಸಿದ್ದ ನಮ್ಮ ...

ಜಗತ್ತಿನ ಪ್ರತಿ ವಸ್ತುವಿಗೂ ಅದಕ್ಕೆ ಸಂಬಂಧಿಸಿದ್ದೊಂದು ಶಬ್ದವಿದೆ. ಸಹಸ್ರಾರು ವರ್ಷಗಳ ಹಿಂದೆ ಜೀವಿಸಿದ್ದ ನಮ್ಮ ಪೂರ್ವಜರಿಗೆ ವಿಶ್ವದ ಪ್ರತಿ ರಹಸ್ಯಗಳ ಅರಿವೂ ಇತ್ತು. ಪ್ರಪಂಚದ ಪ್ರತಿ ಗ್ರಹಿಸಬಲ್ಲ ಹಾಗೂ ಗ್ರಹಿಸಲಾಗದ ವಸ್ತುವಿನಲ್ಲೂ ಅದಕ್ಕೆ ಸಂಬಂಧಪಟ್ಟ ಒಂದು ಶಬ್ದ ಇದ್ದೇ ಇರುತ್ತದೆ ಎಂಬ ನಂಬಿಕೆ ಪೂರ್ವಜರಲ್ಲಿತ್ತು. ವಾಸ್ತವದಲ್ಲಿ, ಧ್ವನಿಯೇ ಭೌತಿಕ ಕ್ರಿಯೆಯ ಮೊದಲ ಹೆಜ್ಜೆ. ಈ ವಿಶ್ವದ ಮೊದಲ ಶಬ್ದವೇ 'ಓಂ'. ಅದು ಶಿವನ ಡಮರುಗದಿಂದ ಉತ್ಪತ್ತಿಯಾದ ಶಬ್ದ. ಆ ಶಬ್ದ ಹುಟ್ಟುವ ಮೊದಲು ಪ್ರಪಂಚ ನಿಶ್ಶಬ್ದದಿಂದ ಕೂಡಿತ್ತು. ಓಂಕಾರ ಜನಿಸುವ ಮೊದಲು ಪ್ರಪಂಚದಲ್ಲಿ ಚಲನಶೀಲತೆ ಅಥವಾ ಕಂಪನಗಳೇ ಇರಲಿಲ್ಲ.
ಶಬ್ದ ಅಥವಾ ಧ್ವನಿ ಎಂಬುದು ಒಂದು ಶಕ್ತಿಶಾಲಿ ಅಸ್ತ್ರ. ಭೌತಿಕ ವಸ್ತುವಿನ ಅಥವಾ ವ್ಯಕ್ತಿಯ ಮೇಲೆ ಅದರ ಆಳ ಪರಿಣಾಮವಿದೆ. ಅತಿಯಾದ ಶಬ್ದಗಳು ವಸ್ತುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದರೆ ಸೂಕ್ಷ್ಮ ಶಬ್ದಗಳು ದೇಹ ಮತ್ತು ವಸ್ತುವಿನ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಶಬ್ದದ ಪ್ರಮಾಣ ಕಮ್ಮಿ ಇದ್ದರೂ, ಶಬ್ದದ ಅವಧಿ ಕಮ್ಮಿ ಇದ್ದರೂ ಪರಿಣಾಮ ಮಾತ್ರ ಅಗಾಧ ಮತ್ತು ದೀರ್ಘ. ದೊಡ್ಡ ಪ್ರಮಾಣದ ಶಬ್ದಗಳು ಕಿವಿಗಳಿಗಷ್ಟೇ ಪರಿಣಾಮಕಾರಿ ಅನಿಸುವುದು. ದೇಹದ ಒಳಇಂದ್ರಿಯಗಳ ಮೇಲೆ ಅವುಗಳ ಪರಿಣಾಮ ಅತಿ ಕಡಿಮೆ. ಪರಿಣಾಮ ಇದ್ದರೂ ಅವು ಋಣಾತ್ಮಕವೇ ಸರಿ. ಮಂತ್ರಘೋಷಗಳ ಶಬ್ದಗಳು ಎಷ್ಟೇ ಯಾವುದೇ ಪ್ರಮಾಣದಲ್ಲಿದ್ದರೂ ಅವು ಮನುಷ್ಯನ ಮೇಲೆ ಉದಾತ್ತ ಪರಿಣಾಮಗಳನ್ನೇ ಬೀರುತ್ತದೆ. ನಿಮಗೆ ಗೊತ್ತಿರೋ ಹಾಗೆ, ಭಾರಿ ಶಬ್ದಗಳು ಮನುಷ್ಯನಿಗೆ ಭಯ ಹುಟ್ಟಿಸುತ್ತವೆ. ಅದು ಮಣಿಪೂರಕ ಚಕ್ರದ ಮೇಲೆ ಮತ್ತು  ಹೊಕ್ಕಳುಬಳ್ಳಿಯ ಮೇಲೆ ಒತ್ತಡ ತಂದು ಘಾಸಿಗೊಳಿಸುತ್ತದೆ. ಆ ಶಬ್ದದಿಂದ ಆಘಾತಗೊಂಡವರು ಸದಾ ಭಯಭೀತರಾಗಿರುತ್ತಾರೆ. ಅವರಲ್ಲಿ ಹೊಟ್ಟೆಗೆ, ಜೀರ್ಣಕ್ರಿಯೆಗೆ ಹಾಗೂ ವಿಸರ್ಜನಾಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.   
ಯೋಗ ಎಂಬುದು ಶಕ್ತಿಯ ರೂಪ. ಧ್ಯಾನಾಶ್ರಮದಲ್ಲಿ ಸಾಧಕರು ಈ ಶಕ್ತಿಯನ್ನು ಗುರುತಿಸಿ ಹಿಡಿದಿಟ್ಟುಕೊಳ್ಳುವ ಬಗ್ಗೆಯೇ ಅಭ್ಯಾಸ ನಡೆಸುತ್ತಿರುತ್ತಾರೆ. ಶಬ್ದ ಕೂಡ ಅಂತ ಶಕ್ತಿಗಳಲ್ಲಿ ಒಂದು. ಸನಾತನ ಕ್ರಿಯೆಯ ಅಭ್ಯಾಸದ ಮೂಲಕ, ಈ ಧ್ವನಿ ಅಥವಾ ಶಬ್ದ ಎಂಬ ಶಕ್ತಿಯನ್ನು ಆರೋಗ್ಯ, ವ್ಯವಹಾರ, ಸಂಬಂಧ ಅಥವಾ ಇನ್ಯಾವುದೇ ಲೌಕಿಕ ವಿಷಯಗಳತ್ತ ನಿರ್ದೇಶಿಸಿ ಅವುಗಳ ಪರಿಣಾಮವನ್ನು ಬದಲಿಸಬಹುದು. ಶಬ್ದಗಳ ಬಳಕೆಯನ್ನು  ಪರಿಣಾಮಕಾರಿಯಾಗಿಸೋದ್ರಲ್ಲಿ ಮಂತ್ರಗಳ ಪಾತ್ರ ಪ್ರಮುಖ.
ತಪ್ಪದಿರಲಿ ಮಂತ್ರ
ಮಂತ್ರ ಅಂದರೆ ಹಾಡಲ್ಲ. ನೀವು ಟಿವಿ ಧಾರಾವಾಹಿಗಳಲ್ಲಿ ಕೇಳುವ ಮ್ಯೂಸಿಕ್ ಥರ ಅಲ್ಲ. ಟಿವಿಯಲ್ಲಿ ಹಲವು ಭಕ್ತಿ ವಾಹಿನಿಗಳಲ್ಲಿ ಕೇಳಿ ಬರುವ ಹಿನ್ನೆಲೆ ಸಂಗೀತಗಳನ್ನೂ ಮಂತ್ರ ಅನ್ನಲಾಗುವುದಿಲ್ಲ. ಮಂತ್ರ ಎನ್ನುವುದು ಪ್ರಪಂಚಕ್ಕೆ ಶಕ್ತಿಯನ್ನು ತುಂಬಬಲ್ಲ, ಶಕ್ತಿಯನ್ನು ಮಾರ್ಪಡಿಸಬಲ್ಲ ಒಂದು ಶಬ್ದ. ಅದು ಸಾಧ್ಯವಾಗಿಸದ ಶಬ್ದವನ್ನು ಅದೆಷ್ಟೇ ಇಂಪಾಗಿದ್ದರೂ, ಕಿವಿಗೆ ಬಡಿಯುವಂತೆ ಇದ್ದರೂ ಮಂತ್ರ ಅನ್ನಲಾಗುವುದಿಲ್ಲ. ಮಂತ್ರ ಬರಿ ಶಬ್ದವಲ್ಲ. ಅದು ಶಬ್ದಗಳ ಗುಚ್ಛ. ಮಂತ್ರವನ್ನು ಉಚ್ಚರಿಸುವಾಗ ಏರಿಳಿತಗಳ ಅರಿವಿರಬೇಕು. ಭಕ್ತಿ ಭಾವಗಳು ಅದರಲ್ಲಿ ತುಂಬಿರಬೇಕು. ಒಂದು ನೆನಪಿಡಿ. ತಪ್ಪಾಗಿ ಉಚ್ಚರಿಸುವ ಮಂತ್ರಗಳು ದೇಹ ಮತ್ತು ಬದುಕಿನ ಮೇಲೆ ಅಡ್ಡ ಪರಿಣಾಮ ಉಂಟುಮಾಡುವುದು ಖಂಡಿತ.
9448335830 /7406175228.
www.dhyanfoundation.com

-ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ