ಭಕ್ತಿ-ಜ್ಯೋತಿಷ್ಯ

ಮತ್ಸ್ಯಕನ್ಯೆ

ಮರ್ಮೇಡ್ ಅಥವಾ ಮತ್ಸ್ಯಕನ್ಯೆ ಮತ್ತೊಂದು ಜನಪ್ರಿಯ ಪೌರಾಣಿಕ ಹಾಗೂ ಜಾನಪದ ಪಾತ್ರ....

ಮರ್ಮೇಡ್ ಅಥವಾ ಮತ್ಸ್ಯಕನ್ಯೆ ಮತ್ತೊಂದು ಜನಪ್ರಿಯ ಪೌರಾಣಿಕ ಹಾಗೂ ಜಾನಪದ ಪಾತ್ರ. ಬಹುತೇಕ ಜಗತ್ತಿನ ಸಂಸ್ಕೃತಿಗಳ ಮಾನಸ ಸಮುದ್ರದಲ್ಲಿ ಇವಳು ಈಜಾಡಿದವಳೇ. ದೇಹದ ಸೊಂಟದ ಮೇಲಿನ ಭಾಗ ಮನುಷ್ಯಳದ್ದೂ ಹಾಗೂ ಸೊಂಟದ ಕೆಳಗಿನ ಭಾಗ ಮೀನಿನದ್ದು.
ಮುತ್ತಿನಂತೆ ಹೊಳೆಯುವ ಬೆಳ್ಳನೆಯ ದೇಹ. ಯಾರಾದರೂ ಮೋಹಿಸಬಹುದಾದ ಸುಂದರ ಸೌಷ್ಟವ, ಮುಖ. ದಟ್ಟ, ಉದ್ದನೆಯ ಕಪ್ಪು ಮೇಘದಂತಹ ಹೊಳೆಯುವ ಉದ್ದನೆಯ ಕೇಶರಾಶಿಯನ್ನು ಒಣಗಿಸುತ್ತಾ ಸಮುದ್ರದ ತಟದಲ್ಲಿಯ ಬಂಡೆಗಲ್ಲಿನ ಮೇಲೆ ಕೂತಿರುವ ಮರ್ಮೇಡ್‌ಗಳನ್ನು ನೋಡಿದ್ದಾಗಿ ಆಗಿನ ಅನೇಕ ನಾವಿಕರು ಕಥೆಗಳನ್ನು ಹೇಳುತ್ತಿದ್ದರು.
ದಾರಿ ತಪ್ಪಿದ ನಾವಿಕರಿಗೆ ಮಾರ್ಗದರ್ಶನ ಮಾಡಿದ್ದ ಮರ್ಮೇಡ್‌ಗಳ ಬಗ್ಗೆಯೂ ಕಥೆಗಳಿವೆ. ಅವಳ ಸೌಂದರ್ಯಕ್ಕೆ ಮಾರು ಹೋದ ನಾವಿಕರು ಅವಳನ್ನು ಮೋಹಿಸಿ ಅವಳ ಹಿಂದೆಯೇ ಹೋದವರು ತಿರುಗಿ ಊರು ಸೇರುತ್ತಿರಲಿಲ್ಲವಂತೆ.  
ಮರ್ಮೇಡ್‌ಳಿಗೆ ಹೋಪಾಹೆ ಎನ್ನುತ್ತಾರೆ. ಜಪಾನೀಯರ ಸಮುದ್ರದೇವತೆ ಬೆಂಟೆನ್ ಕೂಡಾ ಒಂದು ರೀತಿ ಮರ್ಮೇಡ್. ಅವಳಿಗೆ ಎಂಟು ಕೈಗಳು. ಅವಳು ಡ್ರ್ಯಾಗನ್ ರಾಜನ ಮಗಳು. ಸಾಮಾನ್ಯವಾಗಿ ಅವಳು ಒಂದು ಸಮುದ್ರ ಸರ್ಪದ ಮೇಲೋ ಅಥವಾ ಡ್ರ್ಯಾಗನ್ ಮೇಲೋ ಸವಾರಿ ಮಾಡುತ್ತಾಳೆ. ಅವಳನ್ನು ಪ್ರೇಮ ದೇವತೆಯನ್ನಾಗಿಯೂ ಮಕ್ಕಳ ಹಾಗೂ ನಾವಿಕರ ರಕ್ಷಕಿಯನ್ನಾಗಿಯೂ ಚಿತ್ರಿಸಲಾಗಿದೆ.

- ಎಚ್.ಜಿ.ಮಳಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ