ಲಗ್ನದಿಂದ ದಶಮ ಸ್ಥಾನವನ್ನು ಕರ್ಮ ಸ್ಥಾನವೆಂದು ಕರೆಯುತ್ತಾರೆ. ಇದು ಜಾತಕ ಮಾಡುವ ಕೆಲಸವನ್ನು ಸೂಚಿಸುತ್ತದೆ. ಈ ಸ್ಥಾನದಲ್ಲಿ ಯಾವ ಗ್ರಹ ಇದ್ದರೆ ಜಾತಕ ಯಾವ ಕ್ರಿಯಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದು ತಿಳಿಯಬಹುದು.
ರವಿ ದಶಮ ಸ್ಥಾನದಲ್ಲಿ
ಇದ್ದರೆ ಇವರು ಬಹಳ ಪ್ರಯತ್ನ ಮಾಡಿ ಮುಂದೆ ಒಳ್ಳೆಯವರಾಗಬೇಕು ಎಂದು ಪರಿಶ್ರಮ ಪಡುತ್ತಾರೆ. ಒಳ್ಳೆಯ ಉದ್ಯೋಗ ಸಿಗುತ್ತದೆ. ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಸ್ಥಾನಮಾನ, ಗೌರವ ಸಿಗುತ್ತದೆ. ವಿದ್ಯೆಯಲ್ಲಿ ಪದವಿ ಪಡೆಯುತ್ತಾರೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ತನ್ನ ಬಂಧುಗಳೊಡನೆ ಕಲಹ ಮಾಡುತ್ತಾರೆ. ಜೀವಮಾನದ ಅಂತ್ಯದಲ್ಲಿ ಕೆಲವು ಸಮಸ್ಯೆ ಎದುರಾಗುತ್ತದೆ.
ಕುಜ ಗ್ರಹ ದಶಮದಲ್ಲಿ ಇದ್ದರೆ
ಧೈರ್ಯವಂತರೂ, ಅಧಿಕಾರದಲ್ಲಿ ಜಾಣರಿದ್ದು, ಯಾರಿಗೂ ಬಿಟ್ಟು ಕೊಡುವುದಿಲ್ಲ. ಸುಖ ಅನುಭವಿಸಿ, ಕೀರ್ತಿ ಸಂಪಾದಿಸುತ್ತಾರೆ. ಯಾವುದೇ ಕೆಲಸದಲ್ಲಿ ಪ್ರಗತಿ ಹೊಂದುತ್ತಾರೆ. ಕಷ್ಟದ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ. ಕೆಲಸಕ್ಕೆ ತಕ್ಕಂತಹ ಬೆಲೆ ಸಿಗುವುದಿಲ್ಲ.
ಶನಿ ದಶಮದಲ್ಲಿದ್ದರೆ
ಇವರು ಶೂರರಾಗಿ ಕಾರ್ಮಿಕ ಮುಖಂಡರಾಗಿ ಜನಾನುರಾಗಿಯಾಗುತ್ತಾರೆ. ಹೀನ ಕೆಲಸದಲ್ಲಿ ಭಾಗಿಯಾಗುತ್ತಾರೆ. ಕೃಷಿ ಕೆಲಸದಲ್ಲಿ ಒಳ್ಳೆಯದಾಗುತ್ತದೆ. ಆದರೆ ಹಣಕಾಸಿನ ಬಗ್ಗೆ ವ್ಯತ್ಯಾಸವಾಗುತ್ತದೆ. ಬಹಳ ಪ್ರಯತ್ನದ ದುಡಿಮೆ. ಸಂತಾನಕ್ಕೂ ಅಡೆತಡೆಯಾಗುತ್ತದೆ.
ರಾಹು ದಶಮದಲ್ಲಿದ್ದರೆ
ಇವರು ಹಣವಂತರಾಗುತ್ತಾರೆ. ಜನರೊಂದಿಗೆ ಮಿತ್ರರಾಗಿರುತ್ತಾರೆ. ಭೋಗವಂತರಾಗುತ್ತಾರೆ. ವಿಲಾಸೀ ಜೀವನ ನಡೆಸುತ್ತಾರೆ. ಬೇಡವಾದ ಕೆಲಸಗ ಮಾಡುತ್ತಾರೆ. ಗುತ್ತಿಗೆ ಕೆಲಸ ಮಾಡಬಹುದು. ಮಕ್ಕಳು ಆಗದ ಚಿಂತೆ ಇರುತ್ತದೆ.
ಕೇತುಗ್ರಹ ದಶಮದಲ್ಲಿ
ಇದ್ದರೆ ಇವರು ಬಹಳ ಜಾಣರೂ, ಬುದ್ಧಿವಂತರೂ ಆಗಿದ್ದು, ಒಳ್ಳೆಯ ಲಕ್ಷಣವಂತರಾಗಿ ಮಾನಸಿಕ ನೆಮ್ಮದಿಗೆ ಭಂಗ, ಇದ್ದು, ಪಾಪ ಕೃತ್ಯ ಮಾಡುತ್ತಾರೆ. ಪರಸ್ತ್ರೀಯರಲ್ಲಿ ಆಸಕ್ತಿ ಹೊಂದುತ್ತಾರೆ. ಕೆಲಸ ಕಾರ್ಯದಲ್ಲಿ ಪರಿಣತರಾಗಿರುತ್ತಾರೆ. ಇವರ ಕೆಲಸ ಕಾರ್ಯಗಳಲ್ಲಿ ಅಡೆತಡೆಯಾಗುತ್ತದೆ. ಮಾತಾ ಪಿತೃ ಸುಖ ಇಲ್ಲದವರಾಗುತ್ತಾರೆ.
ಚಂದ್ರ ದಶಮದಲ್ಲಿ
ಇವರು ಧನವಂತರಾಗುತ್ತಾರೆ. ಬಹಳ ಬುದ್ಧಿವಂತರೂ, ನ್ಯಾಯ ಧರ್ಮದಲ್ಲಿ ನಡೆಯುವವರೂ, ಪ್ರಭಾವಿ ವ್ಯಕ್ತಿಗಳೂ ಆಗುತ್ತಾರೆ. ಬಂಧು ಬಾಂಧವರ ಸುಖ ಇರುತ್ತದೆ. ಕೆಲಸ ಕಾರ್ಯದಲ್ಲಿ ಸಿದ್ಧಿಯಾಗುತ್ತದೆ. ಸ್ಥಾನಮಾನ, ಗೌರವ ಸಿಗುತ್ತದೆ. ಬುದ್ಧಿವಂತರಾಗುತ್ತಾರೆ.
ಬುಧ ದಶಮದಲ್ಲಿದ್ದರೆ
ಇವರು ಪ್ರಭಾವಿಗಳೂ, ಬಲಿಷ್ಠರೂ, ಶೂರರೂ, ಸುಖವಂತರೂ ಆಗುತ್ತಾರೆ. ವಿವಿಧ ಮೂಲಗಳಿಂದ ಹಣಕಾಸಿನ ಲಾಭ ಇರುತ್ತದೆ. ಪ್ರೀತಿಗೆ ಪಾತ್ರರಾದವರೂ, ದಯಾವಂತರೂ, ತನ್ನ ಸಂಪಾದನೆಯಿಂದ ಹಣ ಸಂಪಾದಿಸುತ್ತಾರೆ.
ಗುರು ದಶಮದಲ್ಲಿ
ಇವರು ಧನವಂತರಾಗುತ್ತಾರೆ. ಭಾಗ್ಯವಂತರಾಗಿ ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಧಾರ್ಮಿಕ ವಿಷಯದಲ್ಲಿ ಕೀರ್ತಿ ಹೊಂದುತ್ತಾರೆ. ಅಧಿಕಾರ, ಕೀರ್ತಿ ಲಭ್ಯವಾಗುತ್ತದೆ. ಎಲ್ಲದರಲ್ಲೂ ಯಶಸ್ಸು ಹೊಂದುತ್ತಾರೆ.
ಶುಕ್ರ ದಶಮದಲ್ಲಿ
ಹಣಕಾಸು, ಸಂಪತ್ತು, ವಾಹನ, ಆಸ್ತಿ ಹೊಂದುತ್ತಾರೆ. ಪ್ರಭಾವಿ ವ್ಯಕ್ತಿಯಾಗುತ್ತಾರೆ. ಅಧಿಕಾರ ಸಿಗುತ್ತದೆ. ಕೀರ್ತಿ, ಸ್ಥಾನಮಾನ, ಗೌರವ ಎಲ್ಲಾ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. ಮಾಹಿತಿಗಾಗಿ ಮೊ. 9448490860
= ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್