ನಮ್ಮ ಶರೀರಿದ ಬಹು ಮುಖ್ಯವಾದ ಅಂಗ ಹೃದಯ. ದೇಹದಲ್ಲಿರುವ ಕೆಲವು ಅಂಗಗಳು ದಿನದಲ್ಲಿ ಸ್ವಲ್ಪ ಸಮಯವಾದರೂ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ಆದರೆ ಈ ಹೃದಯ ಮಾತ್ರ ಜೀವ ಇರುವವರೆಗೂ ಅವಿಶ್ರಾಂತವಾಗಿ ಕಾರ್ಯ ನಡೆಸುತ್ತಿರುತ್ತದೆ. ಈ ಹೃದಯ ಬಿಡುವು ತೆಗೆದುಕೊಂಡರೆ ಇಹಲೋಕದಿಂದ ಪರ ಲೋಕಕ್ಕೆ ಹೋಗುತ್ತೇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರವಿ ಗ್ರಹವು ಹೃದಯ ಕಾರಕ ಗ್ರಹ. ಆದ್ದರಿಂದ ರವಿಯ ಆರಾಧನೆಯಿಂದ ಹೃದಯ ಸಂಬಂಧಿ ಖಾಯಿಲೆಗಳು ಕೊಂಚ ಕಡಮೆಯಾಗಬಹುದು.
ಹೃದಯಾಘಾತ ಯಾವಾಗ ಆಗುವುದು
ಜಾತಕದಲ್ಲಿ ರವಿ ಗ್ರಹ 8ನೇ ಮನೆಯಲ್ಲಿದ್ದು, ಅದಕ್ಕೆ ಕುಜ ಗ್ರಹದ ದೃಷ್ಟಿ ಇದ್ದರೆ ಹೃದಯಾಘಾತ ಆಗಬಹುದು. ಕುಜ ಲಗ್ನದಲ್ಲಿದ್ದು, ಅದಕ್ಕೆ ರವಿಗ್ರಹದ ದೃಷ್ಟಿಯಿದ್ದರೆ, ರಾಹು, ರವಿ ಮತ್ತು ಕುಜ ಗ್ರಹವು 8ನೇ ಮನೆಯಲ್ಲಿದ್ದರೆ ಅಥವಾ 8ನೇ ಮನೆಗೆ ದೃಷ್ಟಿ ಇದ್ದರೆ, ಚಂದ್ರ ಗ್ರಹ ಕುಜ ಜೊತೆಯಲ್ಲಿದ್ದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆಗಲೂ ಸಹ ಹೃದಯಾಘಾ ಆಗಬಹುದು.
ಚಂದ್ರ ಗ್ರಹ ಮನೋ ಕಾರಕ, ಹೆಚ್ಚು ಹೆಚ್ಚು ಕೆಟ್ಟ ಯೋಚನೆ ಮಾಡಿದಾಗ ಹೃದಯದ ಮೇಲೆ ತೊಂದರೆ ಆಗಬಹುದು. ರಕ್ತದ ಒತ್ತಡ (ಬಿಪಿ) ಹೆಚ್ಚಾಗಿ ತೊಂದರೆ ಆಗಿ ಹೃದಯಾಘಾತ ಆಗಬಹುದು. ರಕ್ತಕ್ಕೆ ಕುಜ ಗ್ರಹ ಅಧಿಪತಿ. ಈ ಗ್ರಹಕ್ಕೆ ಪಾಪಗ್ರಹಗಳ ದೃಷ್ಟಿ ಇದ್ದಾಗ ಹೃದಯಾಘಾತ ಆಗಬಹುದು.
ಹೃದಯಾಘಾತದಿಂದ ಪಾರಾಗುವಿಕೆ ಹೇಗೆ?
ರವಿ ಗ್ರಹವನ್ನು ಹೆಚ್ಚು ಪೂಜಿಸಬೇಕು, ಆದಿತ್ಯ ಹೃದಯ ಶ್ಲೋಕವನ್ನು ಪ್ರತಿದಿನ ಪಠಿಸಬೇಕು. ಆದಿತ್ಯ ಹೃದಯ ಹೋಮ ಮಾಡಬೇಕು, ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ಹೃದಯಾಘಾತದಿಂದ ಪಾರಾಗಬಹುದು.
ಒಂದು ಸಮೀಕ್ಷೆ ಪ್ರಕಾರ ಪ್ರತಿ ವರ್ಷ ವಿಶ್ವದಲ್ಲಿ ಸುಮಾರು 17.3 ದಶಲಕ್ಷ ಜನ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಹೆಚ್ಚು ಪುರುಷರೇ ಆಗಿದ್ದಾರೆ. ಹೃದಯಕ್ಕೆ ಸಂಬಂಧಿಸಿದಂತೆ ತೊಂದರೆ ಇರುವವರು ಈ ಕೆಳಗಿನ ಸ್ತೋತ್ರವನ್ನು ಹೇಳಿಕೊಂಡು ರವಿಗ್ರಹವನ್ನು ಪೂಜಿಸಿದರೆ ಒಳ್ಳೆಯದು.
ಗ್ರಹಣಾಮಾದಿರಾದಿತ್ಯೋಲೋಕರಕ್ಷಣಕಾರಕಃ
ವಿಷಮ ಸ್ವಾನ ಸಂಭೂತಾಂ ಪೀಡಾ ಹರತುಮೇ ರವಿ॥
= ಮಂಡಗದ್ದೆ ಪ್ರಕಾಶಬಾಬು ಕೆ.ಆರ್.