ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಭಕ್ತಿ-ಜ್ಯೋತಿಷ್ಯ

ಮೆದೌಸಾ

Vishwanath S
Updated On : 11 Jun 2014, 1:41 am

ಮೆದೌಸಾ ಗ್ರೀಕ್ ಪುರಾಣದ ಪ್ರಸಿದ್ಧ ರಕ್ಕಸಿ. ಗೊರ್ಗಾನ್ಸ್ ಎಂದು ಪ್ರಸಿದ್ಧರಾದ ಮೂವರು ಸಹೋದರಿಯರಲ್ಲಿ ಇವಳಿಗೆ ಮಾತ್ರ ಮರಣ (ಮಾರ್ಟಲ್). ಸ್ಥೆನೋ ಹಾಗೂ ಯುರೈಲ್ ಇನ್ನಿಬ್ಬರು ಇವಳ ಸಹೋದರಿಯರು. ಇವರಿಬ್ಬರು ಅಮರತ್ವ ಪಡೆದವರು. ಫೊರರಸ್ ಹಾಗೂ ಸೇಟೋ ಇವಳ ತಂದೆ ತಾಯಿ.
ಮೆದೌಸಾಗೆ ಭೀಕರ ಮುಖ, ತಲೆಯಲ್ಲಿ ಕೂದಲಿನ ಬದಲಿಗೆ ವಿಷ ಕಾರುವ ಕಾಳಸರ್ಪಗಳಿವೆ. ದೇಹದ ಮೇಲಿನ ಭಾಗ ಮನುಷ್ಯರದ್ದಾದರೆ ಕೆಳಗಿನ ಅರ್ಧ ಭಾಗ ಸರ್ಪ. ಮಹಾಮಾಯಾವಿಯಾದ ಇವಳು ಸುಂದರ ರೂಪವನ್ನು ಧರಿಸಿ ಜನರನ್ನು ತನ್ನ ಗುಹೆಗೆ ಆಕರ್ಷಿಸುತ್ತಾಳೆ. ಇವಳನ್ನು ನೇರವಾಗಿ ನೋಡಿದವರಾಗಲೀ ಅಥವಾ ಇವಳು ಬೇರೆಯವರನ್ನು ನೋಡಿದರಾಗಲೀ ಅಂಥವರು ತಕ್ಷಣ ಕಲ್ಲಾಗುತ್ತಾರೆ ಎಂಬುದು ನಂಬಿಕೆ. ಅವಳು ವಾಸಿಸುತ್ತಿದ್ದ ಗುಹೆಯ ತುಂಬ ಕಲ್ಲಾಗಿ ನಿಂತ ಮನುಷ್ಯರೇ ತುಂಬಿದ್ದಾರೆ. ಅವರನ್ನು ನೋಡುತ್ತಾ ಅವಳು ವಿಚಿತ್ರ ಆನಂದ ಅನುಭವಿಸುತ್ತಾಳೆ ಇದು ಅವಳ ದಿನಚರಿ. ಅಂಡ್ರೋಮೇಡಾ ಎಂಬ ದೇವಕನ್ನಿಕೆಯನ್ನು ಕ್ರಾಕೆನ್ ಎಂಬುವ ದೈತ್ಯ ಸಮುದ್ರ ಜೀವಿಗೆ ಬಲಿಕೊಡುವ ತಯಾರಿ ನಡೆದಿರುತ್ತದೆ. ಅದನ್ನು ತಡೆಯುವುದಕ್ಕಾಗಿ ಅವಳ ಪ್ರಿಯಕರ ಗ್ರೀಕ್ ದೇವಮಾನವ ಪರ್ಸಿಸ್, ಅಥೆನಾ ಅಥೆನಾ ಎಂಬ ದೇವತೆ ನೀಡಿದ ಅದ್ಭುತ ಖಡ್ಗ ಹಾಗೂ ಗುರಾಣಿಯೊಂದಿಗೆ ಮೆದೌಸಾ ವಾಸಿಸುತ್ತಿದ್ದ ಗುಹೆಯೊಳಗೆ ಹೋಗಿ, ಗುರಾಣಿಯಲ್ಲಿ ಮೆದೌಸಾಳ ಪ್ರತಿಬಿಂಬವನ್ನು ಗುರಿ ಹಿಡಿದು, ಅವಳನ್ನು ನೋಡದೇ ಅವಳಿಗೆ ಕಾಣಿಸದೇ, ಅವಳ ತಲೆ ಕತ್ತರಿಸಿ ಅದನ್ನೊಂದು ಚೀಲದಲ್ಲಿ ಕಟ್ಟಿಕೊಂಡು ಪೆಗಾಸಸ್ ಎನ್ನುವ ಹಾರುವ ಕುದುರೆ ಏರಿ ಹಾರಿ ಬರುತ್ತಾನೆ. ಅಷ್ಟೊತ್ತಿಗಾಗಲೇ ಸಮುದ್ರದಿಂದೆದ್ದು ಅಂಡ್ರೋಮೇಡಾಳನ್ನು ನುಂಗಲು ಬರುತ್ತಿದ್ದ ಕ್ರಾಕನ್‌ಗೆ ಮೆದೌಸಾಳ ತಲೆಯನ್ನು ತೋರಿಸುತ್ತಾನೆ. ಇನ್ನೂ ಜೀವ ಇದ್ದ ಆ ಶಿರ ತನ್ನ ಕಣ್ಣುಗಳನ್ನು ತೆರೆದು ಕ್ರಾಕೆನ್‌ನನ್ನು ನೋಡಿದ ತಕ್ಷಣ ಅದು ಕಲ್ಲಾಗಿ ಬಿಡುತ್ತದೆ. ಅಂಡ್ರೋಮೇಡಾ ಉಳಿಯುತ್ತಾಳೆ. ನಂತರ ಪಸಿರ್ಸ್ ಹಾಗೂ ಅವಳ ವಿವಾಹವಾಗುತ್ತದೆ. ಮುಂದೆ ಪರ್ಸಿಸ್ ನೀಡಿದ ಮೆದೌಸಾಳ ತಲೆಯನ್ನು ಅಥೆನಾ ತನ್ನೊಳಗೆ ಹುದುಗಿಸಿಕೊಳ್ಳುತ್ತಾಳೆ. ಅದು ದುಷ್ಟ ಶಕ್ತಿಗಳನ್ನು ದೂರವಿಡುವ ಗಾರ್ಗೋನಿಯನ್ ಢಾಲು ಎಂದು ಪ್ರಸಿದ್ಧವಾಯಿತು. ದೃಷ್ಟಿ ತಾಗದಂತಿರಲು ನಾವು ಮನೆಯ ಮುಂದೆ ರಕ್ಕಸದ ತಲೆಯ ಚಿತ್ರವನ್ನು ಹಾಕುವ ಸಂಪ್ರದಾಯದ ಸಾಮ್ಯತೆ ಇಲ್ಲಿದೆ.


-ಎಚ್.ಜಿ. ಮಳಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement