ಭಕ್ತಿ-ಜ್ಯೋತಿಷ್ಯ

ನವರತ್ನ ನವೋಲ್ಲಾಸ

ಅಪೌರುಷೇಯ ವೇದಗಳ ಉಲ್ಲೇಖದಂತೆ ಋಗ್ವೇದ, ಗರುಡ ಪುರಾಣ ಮತ್ತು ಸ್ಕಂದ ಪುರಾಣಗಳು ರತ್ನಗಳ ...

ಅಪೌರುಷೇಯ ವೇದಗಳ ಉಲ್ಲೇಖದಂತೆ ಋಗ್ವೇದ, ಗರುಡ ಪುರಾಣ ಮತ್ತು ಸ್ಕಂದ ಪುರಾಣಗಳು ರತ್ನಗಳ ಮಾಯಾಲೋಕವನ್ನೇ ಸೃಷ್ಟಿಸಿವೆ. ರತ್ನಗಳ ಕೌತುಕಮಯ ಜಗತ್ತು ಮಾನವ ಜೀವನದಲ್ಲಿ ಬೆಸೆದುಕೊಂಡಿದೆ. ಪ್ರಾಚೀನ ಕಾಲದಿಂದಲೂ ರತ್ನಗಳ ಸಂಗ್ರಹ ಹವ್ಯಾಸ ಬೆಳೆದು ಬಂದು, ಅಲಂಕಾರ, ಅದೃಷ್ಟ ಮತ್ತು ಸಿರಿ ಸಂಪತ್ತುಗಳು ಹೆಚ್ಚಿಸಲು ಮೋಹಕ ರತ್ನಗಳ ಮಾಯಾಲೋಕಕ್ಕೆ ಮಾರುಹೋಗಿದ್ದಾರೆ.
ರತ್ನ, ಜ್ಯೋತಿಷ್ಯ, ಸಂಖ್ಯಾ, ರಾಶಿ ಮತ್ತು ನಕ್ಷತ್ರ ಶಾಸ್ತ್ರಗಳಿಗೆ ಸಂಬಂಧವಿದ್ದು, ಪ್ರತಿಯೊಂದು ರತ್ನಗಳೂ ವಿಶೇಷ ಪ್ರಭಾವ ಬೀರುವುದರಲ್ಲಿ ಸಂಶಯವಿಲ್ಲ.  
ಮಾಣಿಕ್ಯ (RED RUBY)
ಸೂರ್ಯನಿಗೆ ಪ್ರಿಯಕರ ರತ್ನ. ಕೆಂಪು ತಿಳಿ, ಕೆಂಪು ತಿಳಿ ನೇರಳೆಹಣ್ಣಿನ ರಸ ಮತ್ತು ಪಾರಿವಾಳದ ತಿಳಿ ರಕ್ತದಂತೆ ಬಣ್ಣಗಳಿರುವ ಮಾಣಿಕ್ಯವನ್ನು ವೃದ್ಧಿ ಚಂದ್ರ ರವಿವಾರ ಖರೀದಿಸಿ ರವಿವಾರ ಸೂರ್ಯೋದಯ ಸಮಯದಲ್ಲಿ ಧರಿಸಬೇಕು. ಇದರಿಂದ ಗ್ರಹ ದೋಷ ನಿವಾರಣೆ, ಕಂಕಣಭಾಗ್ಯ, ಅಧಿಕ ಜ್ಞಾಪಕ ಶಕ್ತಿ ಮತ್ತು ಆಯಸ್ಸು ವೃದ್ಧಿಸುತ್ತವೆ. ಮೇಷ, ಮಿಥುನ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ರಾಶಿಯವರು ಧರಿಸಬೇಕು.
ಮುತ್ತು (PEARL)
ಚಂದ್ರನಿಗೆ ಪ್ರಿಯಕರ ರತ್ನ. ಸೋಮವಾರ ಖರೀದಿಸಿ, ಸೋಮವಾರವೇ ಧರಿಸಬೇಕು. ಸೂರ್ಯೋದಯ ಮತ್ತು ಸೂರ್ಯೋತ್ಸವು ಸಮಯದಲ್ಲಿ ಧರಿಸಬೇಕು. ಸ್ತ್ರೀಯರ ಎಲ್ಲಾ ಅಲಂಕಾರ ಸಾಧನೆಗಳಲ್ಲಿ ಬಳಸಬಹುದು.  ಜಲ ಭೀತಿ ದೂರ. ಮೇಷ, ಮಿಥುನ, ಕಟಕ, ಕನ್ಯಾ, ತುಲ ಮತ್ತು ವೃಶ್ಚಿಕ ರಾಶಿಯವರು ಧರಿಸಬೇಕು.
ಹವಳ (CORAL)
ಮಂಗಳ ಗ್ರಹಕ್ಕೆ ಪ್ರಿಯಕರ ರತ್ನ. ಈ ರತ್ನವನ್ನು ಯಾವುದೇ ದಿವಸ ಖರೀದಿಸಿ ಮಂಗಳವಾರ ಸೂರ್ಯಾಸ್ತದ ಆಕಾಶ ಕೆಂಪಾಗುವ ಸಮಯದಲ್ಲಿ ಧರಿಸಬೇಕು. ಸಿಂಧೂರ ಮತ್ತು ತಿಳಿ ಸಿಂಧೂರ ಬಣ್ಣಗಳ ಹವಳ ವಿಶಿಷ್ಟ ಗುಣಗಳನ್ನು ಹೊಂದಿರುತ್ತದೆ. ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮಕರ ರಾಶಿಯವರು ಧರಿಸಬೇಕು.
ವೈಡೂರ್ಯ (CAT'S EYE)
ಕೇತುವಿಗೆ ಪ್ರಿಯಕರ ರತ್ನ. ಶನಿವಾರ ಇಲ್ಲವೆ ಮಂಗಳವಾರಗಳಂದು ಖರೀದಿಸಿ ಶನಿವಾರ ರಾತ್ರಿ ಸಮಯದಲ್ಲಿ ಧರಿಸಬೇಕು. ವೃಷಭ, ಮಿಥುನ, ಕನ್ಯಾ, ತುಲಾ, ಧನಸ್ಸು ಮತ್ತು ಮಕರ ರಾಶಿಯವರು ಧರಿಸಬೇಕು.
ಗೋಮೇದ:  (SARDONYX)
ರಾಹುವಿಗೆ ಪ್ರಿಯಕರ ರತ್ನ. ಮಂಗಳವಾರ ಮತ್ತು ರವಿವಾರಗಳ ರಾತ್ರಿ ಸಮಯದಲ್ಲಿ ಖರೀದಿಸಿ ವೃದ್ಧಿ ಚಂದ್ರ ಎಲ್ಲಾ ದಿನಗಳ ರಾತ್ರಿ ಸಮಯದಲ್ಲಿ ಧರಿಸಬೇಕು. ಗ್ರಹದೋಷ, ದುಷ್ಟಶಕ್ತಿಗಳಿಂದ ದೂರ. ಕೆಟ್ಟ ಕನಸುಗಳಿಂದ ದೂರ. ಮಾಟ ಮಂತ್ರ, ದುಷ್ಟರ ನೇತ್ರದೃಷ್ಟಿ ದೂರ ಸರಿಯುತ್ತವೆ. ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ವೃಶ್ಚಿಕ ರಾಶಿಯವರು ಧರಿಸಬೇಕು.
ಪುಷ್ಪರಾಗ (TOPAZ)
ಗುರುಗ್ರಹಕ್ಕೆ ಪ್ರಿಯಕರ ರತ್ನ. ಗುರುವಾರ ಖರೀದಿಸಿ ಗುರುವಾರವೇ ಧರಿಸಬೇಕು. ಬಿಳಿ ಮತ್ತು ಹೊಳಪಿನ ಬಿಳಿ, ಅಧಿಕ ಜ್ಞಾಪಕ ಶಕ್ತಿ, ಸಿರಿವಂತಿಕೆ, ದುಷ್ಟರ ನೇರದೃಷ್ಟಿ ದೂರವಾಗುತ್ತದೆ. ಪುಷ್ಪರಾಗವನ್ನು ಪೌರ್ಣಮಿ ರಾತ್ರಿ ಧರಿಸಿದರೆ ಪ್ರಿಯತಮರು ಹೆಚ್ಚಿನ ಒಲವು ತೋರಿಸುತ್ತಾರೆ. ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನ ರಾಶಿಯವರು ಧರಿಸಬೇಕು.
ಬಿಳಿಯ ವಜ್ರ (DAIMOND)
ಶುಕ್ರ ಗ್ರಹಕ್ಕೆ ಪ್ರಿಯಕರ ರತ್ನ, ಬಿಳಿ, ಹೆಚ್ಚಿನ ಬಿಳಿ ಮತ್ತು ತಿಳಿ ನೀಲಿ ಬಣ್ಣದ ವಜ್ರವನ್ನು ಶುಕ್ರವಾರ ರವಿವಾರ ಮತ್ತು ಗುರುವಾರ ಖರೀದಿಸಿ ಶುಕ್ರವಾರದ ಸೂರ್ಯೋದಯ ಮುಂಚೆ ಧರಿಸಬೇಕು. ಸಿರಿವಂತಿಕೆ ವೃದ್ಧಿ. ಶತ್ರುಭಯದಿಂದ ದೂರ. ಕೆಡಕು ವಿದ್ಯೆಗಳಿಂದ ದೂರ ಧೈರ್ಯವಾಗಿ ವೃದ್ಧಿಸುತ್ತದೆ. ವೃಷಭ, ಮೀನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರು ಧರಿಸಬೇಕು.
ನೀಲಂ (SAPHIRE)
ಶನಿಗ್ರಹಕ್ಕೆ ಪ್ರಿಯಕರ. ಈ ರತ್ನವನ್ನು ಕ್ಷೀಣ ಚಂದ್ರ ದಿನಗಳಲ್ಲಿ ಖರೀದಿಸಿ, ಕ್ಷೀಣ ಚಂದ್ರ ಶನಿವಾರವೇ ಧರಿಸಬೇಕು. ರಾತ್ರಿ ವೇಳೆಯಲ್ಲಿ ಧರಿಸಿದರೆ ಶತ್ರು ಭಯ, ಸಾಲಗಳ ಭಾದೆಗಳಿಂದ ದೂರ. , ನೀಲಂ ರತ್ನವನ್ನು ಅಮಾವಾಸ್ಯೆ ಮತ್ತು ಪೌರ್ಣಮಿಗಳಂದು ಧರಿಸಬಾರದು. ಉತ್ತಮ ಆರೋಗ್ಯ ಧನಾಗಮನ ಸಂಭವಿಸುತ್ತವೆ. ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರು ಧರಿಸಬೇಕು.
ಮರಗಳು (EMARALD)
ಬುಧಗ್ರಹಕ್ಕೆ ಪ್ರಿಯಕರ ರತ್ನ. ಮರಕತ ರತ್ನದಲ್ಲಿ ವಿಶೇಷ ಗುಣಗಳಿವೆ. ಈ ರತ್ನವನ್ನು ವರ್ಷದ ಪೂರ್ತಿ ಧರಿಸಬಹುದು. ಬುಧವಾರ ಖರೀದಿಸಿ ಬುಧವಾರವೇ ಧರಿಸಬೇಕು. ಪ್ರಮುಖವಾಗಿ ಸ್ತ್ರೀಯರು ಪತಿ ಮತ್ತು ಮಕ್ಕಳನ್ನು ಅಮಿತಾನಂದದಿಂದ ನೋಡಿಕೊಳ್ಳುತ್ತಾರೆ. ಹಸಿರು ಮತ್ತು ತಿಳಿ ಹಸಿರು ಶ್ರೇಷ್ಠ. ವೃಷಭ, ಮಿಥುನ, ಸಿಂಹ, ಕನ್ಯಾ, ತುಲಾ ಮತ್ತು ಮಕರ ರಾಶಿಯವರು ಧರಿಸಬೇಕು.
ನವರತ್ನ ಉಂಗುರ ಹಾಗೂ ನವರತ್ನ ಮಾಲೆಗಳನ್ನು ಮೇಷ, ಮಿಥುನ, ಸಿಂಹ, ಕನ್ಯಾ, ವೃಶ್ಚಿಕ, ಮಕರ ಮತ್ತು ಮೀನ ರಾಶಿಯವರು ಧರಿಸಿದರೆ ಉತ್ತಮ ಫಲ ದೊರೆಯುವುದು. ಮಾಹಿತಿಗೆ ಮೊ. 9945605618.


- ವಿ. ನಾರಾಯಣ ಶೆಟ್ಟಿ ಪದ್ಮಶಾಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು