ಭಕ್ತಿ-ಜ್ಯೋತಿಷ್ಯ

ಸೆಂಟಾರೆಸ್

ಗ್ರೀಕ್ ಪುರಾಣಗಳಲ್ಲಿ ಬರುವ ಅತ್ಯಂತ ಜನಪ್ರಿಯ ಪ್ರಾಣಿ ಎಂದರೆ ಸೆಂಟಾರೆಸ್. ಇದು ಸೊಂಟದ...

ಗ್ರೀಕ್ ಪುರಾಣಗಳಲ್ಲಿ ಬರುವ ಅತ್ಯಂತ ಜನಪ್ರಿಯ ಪ್ರಾಣಿ ಎಂದರೆ ಸೆಂಟಾರೆಸ್. ಇದು ಸೊಂಟದ ಮೇಲೆ ಮಾನವ ದೇಹ, ಕೆಳಗೆ ಕುದುರೆಯ ದೇಹದ ಎರಡು ಕೈ ನಾಕು ಕಾಲುಗಳ ಕುದುರೆಯ ಕಿವಿಗಳನ್ನು ಹೊಂದಿದ ವಿಚಿತ್ರ ಪ್ರಾಣಿ.  (ಹಿಂದೂ ಪುರಾಣಗಳಲ್ಲಿ ಬರುವ ಕಿನ್ನರ ಜಾತಿಗೆ ಸೇರಿದ್ದು!) ಮೇಲಿನ ಭಾಗ ಮಾನವನದ್ದಾದ್ದರಿಂದ ಅದು ನಮ್ಮ ನಿಮ್ಮಂತೆಲ್ಲಾ ವ್ಯವಹರಿಸುತ್ತದೆ. ಇದಕ್ಕೆ ವೈನ್  ಮತ್ತು ಹೆಂಗಸರೆಂದರೆ ಬಲು ಪ್ರೀತಿ. ಅಸಹಾಯಕ ಹೆಣ್ಣು ಮಕ್ಕಳ ಸಹಾಯಕ್ಕೆ ಸದಾ ಸಿದ್ಧ. ಪ್ರಾಗೈತಿಹಾಸಿಕ ಏಶಿಯಾದ ಅಶ್ವಾರೋಹಿ ಸೈನಿಕರನ್ನು ನೋಡಿರದ ಗ್ರೀಸಿನ ಜನ ಸೆಂಟಾರಸನ್ನು ಮಾನವಾಶ್ವವನ್ನಾಗಿ ಕಲ್ಪಿಸಿಕೊಂಡಿರುವ ಸಾಧ್ಯತೆಯೂ ಇದೆ.
ನಂತರ ಈ ಪ್ರಾತ್ರಗಳು ಗ್ರೀಕ್ ಪುರಾಣಗಳಲ್ಲಿ ಸ್ಥಾನ ಪಡೆದಿರಬಹುದು. ಲೈಂಗಿಕ ಶಕ್ತಿಯ ಪ್ರತೀಕ.
ದಂತಕತೆಯ ಪ್ರಕಾರ ಗ್ರೀಸಿನ ಅತ್ಯಂತ ಪ್ರಾಚೀನ ಬುಡಕಟ್ಟು ಥೆಸ್ಸಲೆಯ ರಾಜ ಲೆಕುಶಿಯ ಹಾಗೂ ನೆಫೆಲ್ ದಂಪತಿಯ ಮಗ. ಒಂದು ಪ್ರಸಿದ್ಧ ನಂಬಿಕೆ ಪ್ರಕಾರ ಸೆಂಟಾರೆಸ್‌ಗಳು ಅಪೋಲೋ ಹಾಗೂ ಸ್ಟಿಲ್ಬೆ ದಂಪತಿಯ ಸಂತತಿ.
ಕ್ರಾನಿಕಲ್ಸ್ ಮುಂತಾದ ಹಾಲಿವಡ್ ಇಂಗ್ಲೀಷ್ ಚಲನಚಿತ್ರಗಳಲ್ಲಿ ಈ ಸೆಂಟಾರೆಸ್ ಪಾತ್ರಗಳು ಬರುತ್ತವೆ. ಪ್ರಾಚೀನ ಗ್ರೀಸಿನ ಮೆಗ್ನೆಶಿಯಾ ಪ್ರಾಂತ್ಯದಲ್ಲಿ ಇವರದ್ದೇ ಕಾರುಬಾರು. ರೋಮನ್ ಸಂಸ್ಕೃತಿ ಹಾಗೂ ಸಾಹಿತ್ಯದಲ್ಲೂ ಸೆಂಟಾರೆಸ್‌ಗಳು ಪ್ರಧಾನವಾಗಿವೆ. ಕಾನ್ಸ್ಟಂಟೀನ್ ಎಂಬ ಪೌರಾಣಿಕ ಪಾತ್ರದ ರಥವನ್ನು ಎಳೆಯುವ ವಿವರಣೆಗಳು ರೋಮನ್ ಪುರಾಣ ಕಥೆಗಳಲ್ಲಿ ಬರುತ್ತವೆ. ಸೆಂಟಾರೆಸ್‌ಗಳು ಮಹಾಬಲಶಾಲಿಗಳು. ದಾನವರ ವಿರುದ್ಧದ ಯುದ್ಧಗಳಲ್ಲಿ ಮಾನವರಿಗೆ ಹಾಗೂ ದೇವತೆಗಳಿಗೆ ಸಹಾಯ ಮಾಡುತ್ತಿದ್ದವಂತೆ.

-ಎಚ್.ಜಿ. ಮಳಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ