ಭಕ್ತಿ-ಜ್ಯೋತಿಷ್ಯ

ಸತಿಗೆ ಸೂತ್ರ

ಸಂತೋಷದಿಂದಿರುವುದು, ಮನೆಯ ಸದಸ್ಯರೊಂದಿಗೆ ಸಾಮರಸ್ಯದಿಂದಿರುವುದು ಈ ಅಲ್ಪಕಾಲೀನ ...

ಸಂತೋಷದಿಂದಿರುವುದು, ಮನೆಯ ಸದಸ್ಯರೊಂದಿಗೆ ಸಾಮರಸ್ಯದಿಂದಿರುವುದು ಈ ಅಲ್ಪಕಾಲೀನ ಜೀವನದಲ್ಲಿ ಅತ್ಯವಶ್ಯ. ಒಮ್ಮೊಮ್ಮೆ ಬೇಕಂತಲೇ ಸೋತು, ಕೆಲವೊಮ್ಮೆ ಅನಿವಾರ್ಯವಾಗಿ ಗೆದ್ದು ಜೀವನದಲ್ಲಿ ಮುನ್ನಡೆಯಬೇಕಾದದ್ದು ಎಲ್ಲರ ಕರ್ತವ್ಯ. ಅದರಲ್ಲೂ ದಂಪತಿಯ ನಡುವಿನ ವಿರಸ ಇಡೀ ಕುಟುಂಬದ ಮೇಲೆ ಪರಿಣಾಮ ಬೀರದಿರದು. ಇದಕ್ಕಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ...
ಕೋಪಕ್ಕೆ ಹೆದರದಿರಿ
ಕೋಪವೆಂಬುದು ಅನರ್ಥ ಸಾಧನ. ಪತಿಗೆ ಸಿಟ್ಟು ಬಂದಿದೆಯೆಂದು, ನೀವು ಮಾಡುವ ಕಾರ್ಯದಲ್ಲಿ ತನ್ಮಯತೆ ಕಳೆದುಕೊಳ್ಳದಿರಿ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಪತಿಯ ಮಾತಿಗೆ ಎದುರಾಡದೇ, ಸುಮ್ಮನಿದ್ದು ಬಿಡಿ.
ತಪ್ಪಿದ್ದರೆ ಒಪ್ಪಿಕೊಳ್ಳಿ
ಪತಿ ನಿಮ್ಮನ್ನು ಕೂಗಾಡಿ ಬಯ್ಯುವ ತಪ್ಪಿಗೆ ನೀವೇ ಹೊಣೆಗಾರರಾಗಿದ್ದರೆ ಖಂಡಿತಾ ಮೊದಲೇ ಒಪ್ಪಿಕೊಂಡು ಬಿಡಿ. ರಂಪಾಟಗಳೆಲ್ಲ ಮುಗಿದ ಮೇಲೆ ನೀವು ತಪ್ಪೊಪ್ಪಿಕೊಂಡರೆ ಅಪ್ರಯೋಜನ.
ಅಳುಮುಂಜಿ ಆಗಬೇಡಿ
ಪ್ರತಿ ವಿಚಾರದಲ್ಲೂ ಮಾತಿಗಿಂತ ಮುಂಚೆ ಅಳುವ ನಿಮ್ಮ ಸ್ವಭಾವ ಪತಿರಾಯನಲ್ಲಿ ಸಿಟ್ಟನ್ನು ಹೆಚ್ಚಿಸಬಹುದು. ಆದುದರಿಂದ ಮಾತು ಮಾತಿಗೆ ಅಳದೇ, ಎದುರಾದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ. ನಿಮ್ಮ ಅಳುಮುಂಜಿತನ ಪತಿಯಲ್ಲಿ ಕೋಪದ ರೀತಿಯಲ್ಲಿ ವ್ಯಕ್ತವಾಗುತ್ತದೆ ಎಂಬ ಸತ್ಯ ಮರೆಯದಿರಿ.
ಇಷ್ಟವಾದುದನ್ನು ಉಣಬಡಿಸಿ
ಕೆಲವೊಮ್ಮೆ ಗಂಡನಿಗೆ ಸಿಟ್ಟು ಬಂದು ತಾರಕಕ್ಕೇರಿರುತ್ತದೆ. ಆಗ ನೀವು ಯಾವುದೇ ಮಾತಿನಿಂದ ಸಂತೋಷಗೊಳಿಸಲಾರಿರಿ. ಆಗ ಅವರಿಗಿಷ್ಟವಾದ ಅಡುಗೆ ಅಥವಾ ಪದಾರ್ಥಗಳನ್ನು ಮಾಡಿ ಬಡಿಸಿ, ಪೂರ್ತಿ ತಿಂದ ಬಳಿಕ ಸಿಟ್ಟು ಮಾಯವಾಗಿರುವುದನ್ನು ಗಮನಿಸಿ.
ಭಾವನೆ ಗೌರವಿಸಿ
ಕೆಲವೊಮ್ಮೆ ಪತಿಯನ್ನು ಅಗೌರವದಿಂದ ಕಾಣುತ್ತೀರೆಂಬ ಭಾವನೆ ಆತನಲ್ಲಿ ಮೂಡಬಹುದು. ಅಂಥ ವೇಳೆ ಕೋಪದಿಂದ ಪದೇಪದೆ ನಿಮ್ಮನ್ನು ನಿಂದಿಸಬಹುದು. ಆಗ ನೀವು ನಿಮ್ಮ ಪತಿಗೆ ಎಷ್ಟು ಗೌರವ ನೀಡುತ್ತೀರೆಂದು ಸಾಬೀತುಪಡಿಸಿ. ಒಮ್ಮೆ ಪತಿಗೆ ಪತ್ನಿಯಿಂದ ಗೌರವ ಸದಾ ದೊರಕುತ್ತದೆ ಎಂದು ನಂಬಿಕೆ ಬಂದರೆ, ಪತಿಯ ಕೋಪ ಶಮನವಾಗುತ್ತದೆ.
ಅನಗತ್ಯ ವಾದ ಬೇಡ
ಪತಿಯೊಂದಿಗೆ ಅನಗತ್ಯ ವಾದ ಬೇಡ. ಪತಿ ದುಡಿದು ಮನೆಗೆ ಬಂದಾಗ ಅಥವಾ ಸ್ನೇಹಿತರೊಂದಿಗಿರುವಾಗಲೋ, ಪತಿಗಿಂತ ನಿಮಗೆ ಹೆಚ್ಚು ತಿಳಿವಳಿಕೆ ಇದೆ ಎಂಬುದನ್ನು ತೋರ್ಪಡಿಸಲು ಅನಗತ್ಯವಾಗಿ ಪತಿಯೊಂದಿಗೆ ವಾದಕ್ಕಿಳಿಯಬೇಡಿ. ಇದರಿಂದ ಸಂಸಾರದಲ್ಲಿ ಬಿರುಕುಂಟಾಗಬಹುದು.
ಬೆಳಗ್ಗೆಯೇ ವಾಗ್ವಾದ ಬೇಡ
ಬೆಳಗ್ಗೆದ್ದ ತಕ್ಷಣ ಹಿಂದಿನ ದಿನದ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಬೇಡಿ. ಮುಂಜಾನೆಯೇ ವಾಗ್ವಾದಗಳು ವಿಕೋಪಕ್ಕೆ ಹೋಗಬಹುದು.  ಬೆಳಗ್ಗೆ ಏಳುತ್ತಿರುವಂತೆಯೇ ಪತಿಯನ್ನು ಮುಗುಳ್ನಗೆಯಿಂದ ಸ್ವಾಗತಿಸಿ. ಅವರಿಗಿಷ್ಟದ ರೀತಿ ಬೆಳಗಿನ ಪಾನೀಯ ತಯಾರಿಸಿ ಕೊಡಿ. ಊಟ-ತಿಂಡಿ ತಿನ್ನುವ ಸಮಯದಲ್ಲಿ ಪತಿಗೆ ಇಷ್ಟವಿಲ್ಲದ ವಿಚಾರ ಪ್ರಸ್ತಾಪಿಸಬೇಡಿ. ಪ್ರಸ್ತಾಪಿಸಿದರೆ, ಕೆಲವೊಮ್ಮೆ ಮಾಡಿದ ಪದಾರ್ಥಗಳು ವ್ಯರ್ಥವಾಗುವ ಸಂಭವವಿರುತ್ತದೆ.
ಆರೋಗ್ಯ ಕಾಳಜಿ
ಪತಿಯ ದನಿಯಲ್ಲಿ ಕೊಂಚ ಏರಿಳಿತವಾದರೂ ಕಂಡುಹಿಡಿಯುವಷ್ಟರ ಮಟ್ಟಿಗೆ ನೀವು ಅವರನ್ನು ಅರ್ಥ ಮಾಡಿಕೊಂಡಿರಬೇಕು. ಕೆಲವೊಮ್ಮೆ ಪತಿಯ ಅನಾರೋಗ್ಯವೂ ಅನಗತ್ಯ ಕೋಪಕ್ಕೆ ಆಸ್ಪದ ನೀಡುತ್ತದೆ.
ಒಟ್ಟಿನಲ್ಲಿ ಗಂಡ- ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬಂತೆ, ಪತಿ ಸಿಟ್ಟಿನಿಂದ ಆಡಿದ ಮಾತುಗಳಿಗೆ ಬೇಸರಿಸದೇ, ಅವನಿಗೆ ಸಮಾಧಾನದಿಂದ ತಿಳಿಹೇಳಿ ಸಂಸಾರವನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯುವ ಸಾಮರ್ಥ್ಯ ಹೆಣ್ಣಿನಲ್ಲಿದೆ. ಆದರೆ ಆಕೆ ಮನಸ್ಸು ಮಾಡಬೇಕಷ್ಟೇ.

- ಭಾಗ್ಯ ನಂಜುಂಡಸ್ವಾಮಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ