ಭಕ್ತಿ-ಜ್ಯೋತಿಷ್ಯ

ನಿಮಗುಂಟಾ ವಾಹನ ಯೋಗ?

ವಾಹನ, ಆಸ್ತಿಯನ್ನು ಎಲ್ಲರೂ ಖರೀದಿಸಲು ಆಗುವುದಿಲ್ಲ. ಏಕೆಂದರೆ ಇದಕ್ಕೆ ಯೋಗ ಬೇಕು. ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ನಾಲ್ಕನೇ ಭಾವ ವಾಹನ, ಆಸಿ ಪ್ರಾಪ್ತವಾಗುವ ಬಗ್ಗೆ ತಿಳಿಸುತ್ತದೆ. ನಾಲ್ಕನೇ ಅಧಿಪತಿ ಮತ್ತು ಲಗ್ನದಲ್ಲಿ ಶುಕ್ರನು ಬಲಯತನಾಗಿದ್ದರೆ ಇವರಿಗೆ ವಾಹನ, ಒಡವೆ, ಆಸ್ತಿ ಲಭ್ಯವಾಗುತ್ತದೆ.  
ನಾಲ್ಕನೇ ಅಧಿಪತಿ ಪಾಪಗ್ರಹಗಳೊಡನೆ ನಾಲ್ಕನೇ ಮನೆಯಲ್ಲಿ ಶನಿ ಇದ್ದರೆ ಇಂಥವರು ತಮ್ಮಲ್ಲಿರುವ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ಎರಡನೇ, ನಾಲ್ಕನೇ, ಹನ್ನೆರಡನೇ ಮನೆಯ ಅಧಿಪತಿಗಳು ಕೇಂದ್ರ ಕೋನಗಳಲ್ಲಿ ಇದ್ದರೆ ಇವರಿಗೆ ಆಸ್ತಿ, ಮನೆಯನ್ನು ಪಡೆಯುವುದಕ್ಕೆ ಬಹಳ ಸುಲಭವಾಗುತ್ತದೆ.
ನಾಲ್ಕನೇ ಮನೆಯ ಅಧಿಪತಿ ಲಗ್ನ ಅಥವಾ ಸಪ್ತಮದಲ್ಲಿ ಇದ್ದರೆ ಇವರಿಗೆ ಸುಲಭದಲ್ಲಿ ಮನೆಯಾಗುತ್ತದೆ. ನಾಲ್ಕನೇ ಮನೆಯ ಅಧಿಪತಿ ಅಷ್ಟಮದಲ್ಲಿ ಪಾಪಗ್ರಹಗಳೊಂದಿಗೆ ಇದ್ದರೆ ಅಥವಾ ನೀಚನಾಗಿದ್ದರೆ ಇವರು ಆಸ್ತಿ ಪಾಸ್ತಿ ಕಳೆದುಕೊಳ್ಳುತ್ತಾರೆ.
ನಾಲ್ಕನೇ ಮನೆ ಅಧಿಪತಿ ನೀಚನಾಗಿ ರವಿಯೊಂದಿಗಿದ್ದರೆ ಇವರ ಆಸ್ತಿ ಸಾಲದ ಮೂಲಕ ಹೋಗುತ್ತದೆ. ಲಗ್ನಾಧಿಪತಿ ಚತುರ್ಥದಲ್ಲಿದ್ದರೆ ಇವರಿಗೆ ಮನೆ, ಆಸ್ತಿ ಖರೀದಿಸುವ ಯೋಗ ಇದೆ. ನಾಲ್ಕನೇ ಮನೆಯ ಅಧಿಪತಿ ಆರು, ಎಂಟು, ಹನ್ನೆರಡನೇ ಮನೆಯಲ್ಲಿದ್ದರೆ ಇವರು ಎಷ್ಟು ಪ್ರಯತ್ನಿಸಿದರೂ, ಮನೆ, ಆಸ್ತಿ, ವಾಹನ ಖರೀದಿಸಲು ಸಾಧ್ಯವೇ ಇಲ್ಲ.
ನಾಲ್ಕನೇ ಅಧಿಪತಿ ಕೇಂದ್ರ ತ್ರಿಕೋಣಗಳಲ್ಲಿ ಶುಭ ಗ್ರಹಯುಕ್ತನಾಗಿದ್ದರೆ ಇವರು ಒಳ್ಳೆಯ ಮನೆ, ವಾಹನ  ಪಡೆಯುತ್ತಾರೆ. ನಾಲ್ಕನೇ ಮನೆಯ ಅಧಿಪತಿ ದಶಮ ಸ್ಥಾನದ ಅಧಿಪತಿಯೊಂದಿಗೆ ಶನಿ, ಚಂದ್ರ ಇದ್ದರೆ ಇವರು ಅಂತಸ್ತುಳ್ಳ ಮನೆ ಮಾಡುತ್ತಾರೆ. ಚತುರ್ಥದ ಅಧಿಪತಿ ತನ್ನ ಉಚ್ಚ ಸ್ಥಾನದಲ್ಲಿದ್ದು, ಆ ಸ್ಥಾನ ಪಂಚಮ ತ್ರಿಕೋಣವಾಗಿದ್ದರೆ ಬಹಳ ಒಳ್ಳೆಯ ಮನೆಯನ್ನು ಹೊಂದುತ್ತಾರೆ.
ತೃತೀಯದಲ್ಲಿ ಶುಭಗ್ರಹವಿದ್ದು, ಚತುರ್ಥಾಧಿಪತಿ ಮತ್ತು ತೃತೀಯಾಧಿಪತಿ ಬಲಿಷ್ಠವಾಗಿದ್ದರೆ ಇಂಥವರು ಒಳ್ಳೆಯ ಮನೆಯನ್ನು ಹೊಂದುತ್ತಾರೆ. ಶುಕ್ರನು ಚತುರ್ಥದಲ್ಲಿ ಚತುರ್ಥಾಧಿಪತಿಯೊಡನೆ ಇದ್ದರೆ ಅಥವಾ ಏಕಾದಶದಲ್ಲಿದ್ದರೆ, ಇಂಥವರು ವಾಹನ ಹೊಂದುತ್ತಾರೆ. ಗುರುವು ನಾಲ್ಕನೇ ಮನೆಯಲಿದ್ದು, ಅದರ ಜೊತೆಗೆ ಶುಕ್ರ ಇದ್ದರೆ ಅಥವಾ ಶುಕ್ರ ನಾಲ್ಕನೇ ಮನೆಯ ಅಧಿಪತಿಯೊಡನೆ ಇದ್ದರೆ, ಇವರು ಯೋಗ್ಯವಾದ ವಾಹನ ಹೊಂದುತ್ತಾರೆ.
ಚತುರ್ಥದಲ್ಲಿ ಶನಿ ಬಲಯುತವಾಗಿದ್ದರೆ ಇವರಿಗೆ ಹಿರಿಯರಿಂದ ಆಸ್ತಿ, ಹಣ ಸಿಗುತ್ತದೆ. ಕೇಂದ್ರದಲ್ಲಿ ಆಥವಾ ಕೋನದಲ್ಲಿ ಬಲಯುತವಾದ ನಾಲ್ಕನೇ ಅಧಿಪತಿಯಿಂದ ಆಸ್ತಿ ಕಾಣಿಕೆ ಮನೆ ಲಾಭ ಸುಖ ಇರುತ್ತದೆ. ಮಾಹಿತಿಗಾಗಿ 9611130860.

ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!