ಬೆಂಕಿಯಲ್ಲಿ ಸುಡದಿರುವ ವರ ಪಡೆದಿದ್ದ ಹೋಲಿಕಾ ಪ್ರಹ್ಲಾದನನ್ನು ತೊಡೆಮೇಲೆ ಕೂರಿಸಿಕೊಂಡು ಉರಿವ ಬೆಂಕಿಯಲ್ಲಿ ಕುಳಿತ ದಿನವನ್ನು ಹೋಳಿಯನ್ನಾಗಿ ಆಚರಿಸಲಾಗುತ್ತದೆ. ಪುರಾಣದ ಪ್ರಕಾರ ವಿಷ್ಣು ಪ್ರಹ್ಲಾದನ ರಕ್ಷಣೆಗೆ ಬಂದು ಹೋಲಿಕಾ ಅಗ್ನಿಯಲ್ಲಿ ಬೂದಿಯಾಗುವಂತೆ ಮಾಡಿ ಪ್ರಹ್ಲಾದನಿಗೆ ಏನೂ ಆಗದಂತೆ ನೋಡಿಕೊಳ್ಳುತ್ತಾನೆ.
ಪುರಾಣದ ಘಟನೆಗಳು ಅವುಗಳ ವರ್ಣನೆಯಿಂದ ಸಾಮಾನ್ಯ ಮನುಷ್ಯನಿಗೆ ಅತಿರಂಜಿತವೂ ಕಟ್ಟುಕತೆಯೂ ಅನಿಸಬಹುದು. ಆದರೆ ಅವುಗಳಿಗೆ ಸ್ಪಷ್ಟ ಹಿನ್ನೆಲೆಗಳಿವೆ. ಉದಾಹರಣೆಗೆ ಬೆಂಕಿಯಿಂದ ಸುಡದಿರುವಂತಾಗುವುದು ಹಾಗೂ ಅಂಥ ಶಕ್ತಿಯನ್ನು ಆವಾಹನೆ ಮಾಡಿಕೊಳ್ಳುವುದನ್ನೇ ವಿಷ್ಣು ಎನ್ನಲಾಗುತ್ತದೆ. ಪುರಾಣಗಳು ಈ ಭೂ ಗ್ರಹದಲ್ಲಿ ಸಾವಿರಾರು ವರ್ಷಗಳ ಹಿಂದೆ ನೆಲೆಸಿದ್ದ ನಮ್ಮ ಪೂರ್ವಜರ ಬದುಕಿನಲ್ಲಿ ನಡೆದ ನೈಜ ಘಟನೆಗಳ ಕಾಲಾನುಕ್ರಮದ ವರದಿಯೇ ಆಗಿದೆ.
ಈ ಪೂರ್ವಜರು ಅನ್ಯಗ್ರಹ ಜೀವಿಗಳೋ ಅತೀಂದ್ರಿಯ ಶಕ್ತಿಗಳೋ ಆಗಿರಲಿಲ್ಲ. ಅವರೂ ನಮ್ಮ ನಿಮ್ಮಂತೆಯೇ ಮನುಷ್ಯರಾಗಿದ್ದರು. ಆದರೆ ಅವರು ಮನುಷ್ಯನ ಒಳಗಿದ್ದ ಅಸಾಧಾರಣ ಶಕ್ತಿ ಸಾಮರ್ಥ್ಯವನ್ನು ಬಡಿದೆಬ್ಬಿಸುವ, ಜಾಗೃತಗೊಳಿಸುವ ತಾಕತ್ತುಳ್ಳವರಾಗಿದ್ದರು. ನಮ್ಮಲ್ಲಿ ಬಹಳಷ್ಟು ಮಂದಿ ಈ ಶಕ್ತಿಯನ್ನು ಹೊರತೆಗೆದು ಬಳಸದೆಯೇ ಹಾಗೇ ಹಿಡಿದಿಟ್ಟುಕೊಂಡು ವ್ಯರ್ಥ ಮಾಡಿಬಿಡುತ್ತೇವೆ.
ನಮ್ಮಲ್ಲಿ ಬಹುತೇಕರಿಗೆ ಪ್ರಪಂಚ ಕೇವಲ ನಾಲ್ಕು ಆಯಾಮಗಳಲ್ಲಿ ಗೋಚರಿಸುತ್ತದೆ. ಉದ್ದ, ಉಸಿರು, ಆಳ ಹಾಗೂ ಸಮಯ- ಇವೇ ಆ ನಾಲ್ಕು ಆಯಾಮಗಳು. (ಇಲ್ಲಿ ಸಮಯ ಅಂದರೆ ಎರಡು ಯೋಚನೆಗಳ ನಡುವಿನ ಅಂತರ)
ನಾವು ನೋಡುವ ಸ್ಪರ್ಶಿಸುವ, ಘ್ರಾಣಿಸುವ, ಕೇಳುವ, ರುಚಿನೋಡುವ ಕ್ರಿಯೆಗಳನ್ನು ಇದೇ ಆಯಾಮದಲ್ಲಿ ವಿವರಿಸುತ್ತೇವೆ. ಧ್ಯಾನ ಆಶ್ರಮದಲ್ಲಿ ಯೋಗ ಮತ್ತು ಸನಾತನ ಕ್ರಿಯೆಗಳನ್ನು ಅಭ್ಯಸಿಸುವವರಿಗೆ ಒಂದು ಮಟ್ಟಕ್ಕೆ ಆರನೇ ಅಥವಾ ಏಳನೆಯ ಆಯಾಮವನ್ನೂ ವಿವರಿಸುವ ಶಕ್ತಿ ಒಲಿದಿರುತ್ತದೆ. ಸೃಷ್ಟಿಯಲ್ಲಿ ಒಟ್ಟು ಹದಿನಾರು ಆಯಾಮಗಳಿವೆ ಹಾಗೂ ಮನುಷ್ಯನಿಗೆ ಈ ಹದಿನಾರೂ ಆಯಾಮಗಳನ್ನು ದಕ್ಕಿಸಿಕೊಳ್ಳುವ ಸಾಮರ್ಥ್ಯವಿದೆ.
ನಾವು ಬಹಳಷ್ಟು ಜನ ನಮ್ಮ ಜೀವನವನ್ನು ಮತ್ತು ಜನ್ಮವನ್ನು ಪಂಚೇಂದ್ರಿಯಗಳು ನೀಡುವ ಅರಿವಿಗಷ್ಟೇ ಸೀಮಿತಗೊಳಿಸಿಕೊಂಡು ತೃಪ್ತರಾಗಿಬಿಡುತ್ತೇವೆ. ಆದರೆ ಮನುಜನಿಗೆ ಹದಿನಾರು ಇಂದ್ರಿಯಗಳಿವೆ. ಇವೆಲ್ಲವನ್ನೂ ಜಾಗೃತಗೊಳಿಸುವುದನ್ನು ಯೋಗದ ಭಾಷೆಯಲ್ಲಿ ಸಿದ್ಧಿ ಎನ್ನಲಾಗುತ್ತದೆ.
ಅಂಧನಿಗೆ ಜಗತ್ತು ಕತ್ತಲಾಗಿ ಕಾಣಿಸಿದರೆ ಕಣ್ಣಿದ್ದಾತನಿಗೆ ಪ್ರಪಂಚ ಬಣ್ಣಬಣ್ಣವಾಗಿ ಬೆಳಕಿನಿಂದ ಕಾಣುತ್ತದೆ. ಹಾಗೆಯೇ ಇಂದ್ರಿಯಗಳು ಜಾಗೃತವಿಲ್ಲದಿದ್ದರೆ ನಮಗೆ ದಕ್ಕಬೇಕಾದ ಅನುಭವಗಳು ದಕ್ಕುವುದೇ ಇಲ್ಲ. ಪಂಚೇಂದ್ರಿಯಗಳಲ್ಲಿ ತೃಪ್ತನಾದವನ ಅನುಭವಕ್ಕೆ ಬರದಿರುವುದು ಆರನೇ, ಏಳನೇ, ಎಂಟನೆಯ ಇಂದ್ರಿಯಗಳನ್ನು ಜಾಗೃತಗೊಳಿಸಿಕೊಂಡಾತನ ಅನುಭವಕ್ಕೆ ಬರಬಹುದು.
ಧ್ಯಾನಿಸಲು ನೀವು ಕಣ್ಣುಗಳನ್ನು ಮುಚ್ಚಿಕೊಂಡಾಗ ಕೆಲವು ವಾಸನೆಗಳು, ಆಕೃತಿಗಳು, ಬಣ್ಣಗಳು, ಇತ್ಯಾದಿಗಳು ನಿಮ್ಮ ಒಳಮನಸಿನ ಅನುಭವಕ್ಕೆ ತಾಕುತ್ತವೆ. ಇದು ಮನಸಿನ ಮಾಯೆಯೋ ಅಥವಾ ನಿಜಕ್ಕೂ ಇವೆಲ್ಲ ಇವೆಯೋ ಎಂಬುದು ದ್ವಂದ್ವವೇ.
ಇದು ಮನಸಿನ ಮಾಯೆಯೇ ಅಂತಾದರೆ ಇದು ಪುರಾತನ ಕಾಲದಲ್ಲಿ ಪುರಾಣದಲ್ಲಿ ನಡೆದಿರುವ ಹಲವು ವಿಷಯಗಳಿಗೆ ಹೋಲಲು ಸಾಧ್ಯ? ಈ ಅನುಭವವು ಬೇರೆಯವರಿಗೂ ದಕ್ಕಿರಲು ಹೇಗೆ ಸಾಧ್ಯ? ಇದು ಖಂಡಿತಾ ಮಾಯೆಯಲ್ಲ. ಧ್ಯಾನದಲ್ಲಿ ನಿರತರಾದವರಿಗೆ ಇದು ಕಣ್ಮುಂದಿನ ಸತ್ಯ. ಅವೆಲ್ಲವೂ ಬೇರೆಯೇ ಆಯಾಮಗಳಲ್ಲಿ ನೆಲೆಸಿರುತ್ತವೆ. ಉನ್ನತ ಇಂದ್ರಿಯಗಳಿಂದ ಮಾತ್ರ ಅದು ಗ್ರಹಿಸಲ್ಪಡುತ್ತದೆ. ಸೂಕ್ಷ್ಮ ಶಕ್ತಿಗಳಾದ ವಿಷ್ಣುವಿನೊಂದಿಗೆ ಸಂವಾದಿಸುವುದು ಅಥವಾ ಅಗ್ನಿಯನ್ನು ಹತೋಟಿಯಲ್ಲಿಡುವುದು, ಇವೆಲ್ಲ ಆ ಉನ್ನತ ಶಕ್ತಿಗೆ ಮಾತ್ರ ಸಾಧ್ಯವಾದುದು.
ಕೆಲವು ವಿಶೇಷ ದಿನಗಳಲ್ಲಿ ನಕ್ಷತ್ರಪುಂಜಗಳ ಸ್ಥಾನಗಳು ಹೇಗಿರುತ್ತವೆಂದರೆ ಗುರುವಿನ ಮೂಲಕ ಬೋಧಿಸಲ್ಪಟ್ಟ ಮಂತ್ರ, ಕ್ರಿಯೆ ಹಾಗೂ ಯಜ್ಞಗಳಿಂದ ತುಂಬ ಸುಲಭವಾಗಿ ಈ ಉನ್ನತ ಇಂದ್ರಿಯಗಳ ಹಾಗೂ ಆಯಾಮಗಳ ದ್ವಾರಗಳನ್ನು ತೆರೆಸಿಬಿಡಬಹುದಾಗಿರುತ್ತದೆ. ಹೋಳಿ ಹಬ್ಬದ ರಾತ್ರಿ ಕೂಡ ಅಂತಹ ರಾತ್ರಿಗಳಲ್ಲಿ ಒಂದು. ಗುರುವಿನಿಂದ ಬೋಧಿಸಲ್ಪಟ್ಟ ಮಂತ್ರಗಳ ಮೂಲಕ ನಮ್ಮ ಬಯಕೆಗಳನ್ನು ಹಾಗೂ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಪ್ರಶಸ್ತ ಸಮಯ ಈ ಹೋಳಿ ಹಬ್ಬ. ಅಂದಹಾಗೆ Þ ಬಾರಿ ಮಾ. 16ರ ಭಾನುವಾರ ಹೋಳಿ ಹುಣ್ಣಿಮೆ ಆಚರಿಸಲಾಗುತ್ತದೆ.
-dhyan@dhyanfoundation.com
cell: 7406175228 <