ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಭಕ್ತಿ-ಜ್ಯೋತಿಷ್ಯ

ಬೆರಳ್‌ಗೆ ಹರಳ್

Lingaraj Badiger
Updated On : 14 May 2014, 5:02 am

ಹರಳುಗಳು ಭವಿಷ್ಯವನ್ನು ಅಂದಗೊಳಿಸುತ್ತವೆ ಎಂಬ ನಂಬಿಕೆ ನಮ್ಮಲ್ಲಿದೆ. ಜನ್ಮದಿನದ ಆಧಾರದ ಮೇಲೆಯೇ ಈ ಚಮತ್ಕಾರ ನಡೆಯುತ್ತದೆ...

ಪೂರ್ವಜರು ಮಾನವ ಕಲ್ಯಾಣಕ್ಕಾಗಿ ಬಹಳ ಶ್ರಮಿಸಿದ್ದಾರೆ. ಕಷ್ಟಗಳಿಗೆ ಪರಿಹಾರವನ್ನೂ ಸೂಚಿಸಿದ್ದಾರೆ. ಅದೇ ರೀತಿ ಜನ್ಮದಿನದ ಆಧಾರದ ಮೇಲೆ ಯಾವ ಹರಳು ಧರಿಸಿದರೆ ಸಮಸ್ಯೆ ಸ್ವಲ್ಪವಾದರೂ ಪರಿಹಾರವಾಗಬಹುದು. ಜನ್ಮದಿನ ಆಧಾರದ ಮೇಲೆ ಇಲ್ಲೊಂದು ಹರಳುನೋಟವಿದೆ...

1,10, 28 ಆಗಿದ್ದರೆ...
1 ಮತ್ತು 10ನೇ ತಾರೀಖಿನಂದು ಜನಿಸಿರುವವರು ಸಂಪೂರ್ಣ ರವಿಯ ಅಧಿಪತ್ಯ ಹೊಂದಿರುತ್ತಾರೆ. ಇವರು ಮಾಣಿಕ್ಯ ಅಥವಾ ಪುಷ್ಪರಾಗದ ಹರಳು ಧರಿಸಬಹುದು. ಜನ್ಮದಿನ 28 ಆಗಿದ್ದರೆ ಅವರು ಚಂದ್ರ ಮತ್ತು ಶನಿಯ ಮಿಲನದೊಂದಿಗೆ ರವಿಯ ಆಧಿಪತ್ಯ ಹೊಂದಿರುತ್ತಾರೆ. ಇವರು ಮುತ್ತು ಅಥವಾ ಮಾಣಿಕ್ಯ ಧರಿಸಬಹುದು.

2,11,20 ಆಗಿದ್ದರೆ...
2ನೇ ತಾರೀಖು ಮತ್ತು 20ನೇ ತಾರೀಖಿನವರು ಚಂದ್ರನ ಅಧಿಪತ್ಯ ಹೊಂದಿದ್ದು ಮುತ್ತು ಅಥಲಾ ಚಂದ್ರನೀಲ ಮಣಿ ಧರಿಸಬಹುದು. ಜನ್ಮದಿನ 11 ಆಗಿದ್ದರೆ ಸಂಪೂರ್ಣ ರವಿಯ ಮಿಲನದಿಂದ ಚಂದ್ರನ ಅಧಿಪತ್ಯ ಹೊಂದಿದ್ದು, ಮಾಣಿಕ್ಯ ಅಥವಾ ಮುತ್ತು ಧರಿಸಬಹುದು.

3,12,21 ಆಗಿದ್ದರೆ...
3ರಂದು ಜನಿಸಿರುವವರಾಗಿದ್ದರೆ ಮಾಣಿಕ್ಯ, ಹವಳ ಅಥವಾ ಪುಷ್ಪರಾಗದ ಹರಳನ್ನು ಧರಿಸಬಹುದು. 12 ಅಥವಾ 21 ಆಗಿದ್ದರೆ ರವಿ ಮತ್ತು ಚಂದ್ರರ ಮಿಲನದಿಂದ ಕುಜನ ಅಧಿಪತ್ಯ ಹೊಂದಿದ್ದು ಮುತ್ತು, ಹವಳ, ಮಾಣಿಕ್ಯ ಧರಿಸಬಹುದು.

4,13,22,31 ಆಗಿದ್ದರೆ...
4ನೇ ತಾರೀಖಿನಂದು ಜನಿಸಿದವರು ರಾಹು ಅಧಿಪತ್ಯ ಹೊಂದಿದ್ದು, ಇವರು ಗೋಮೇಧಿಕ ಧರಿಸಬಹುದು. 13,31 ಆಗಿದ್ದರೆ ರವಿ ಮತ್ತು ಗುರುವಿನ ಮಿಲನದಿಂದ ರಾಹು ಗ್ರಹದ ಅಧಿಪತ್ಯ ಹೊಂದಿದ್ದು ನೀವು ಮಾಣಿಕ್ಯ, ಪುಷ್ಪರಾಗ ಅಥವಾ ಗೋಮೇಧಿಕ ಹರಳನ್ನು ಧರಿಸಬಹುದು. 22 ಆಗಿದ್ದರೆ ಸಂಪೂರ್ಣ ಚಂದ್ರನ ಮಿಲನದಿಂದ ರಾಹು ಅಧಿಪತ್ಯವನ್ನು ಹೊಂದಿದ್ದು, ಮುತ್ತು ಅಥವಾ ಗೋಮೇಧಿಕ ಧರಿಸಬಹುದು.

6,15,24 ಆಗಿದ್ದರೆ...
6ರಂದು ಜನಿಸಿದವರು ಶುಕ್ರನ ಅಧಿಪತ್ಯ ಹೊಂದಿದ್ದು ಇವರು ವಜ್ರ, ಪಚ್ಚೆ ಧರಿಸಬಹುದು. 15 ಆಗಿದ್ದರೆ ರವಿ ಮತ್ತು ಬುಧನ ಮಿಲನದಿಂದ ಶುಕ್ರನ ಅಧಿಪತ್ಯ ಹೊಂದಿದ್ದು ಸಹ ವಜ್ರ, ಪಚ್ಚೆ ಧರಿಸಬೇಕು. 24 ಆಗಿದ್ದರೆ ಚಂದ್ರ ಮತ್ತು ರಾಹುವಿನ ಮಿಲನದಿಂದ ಬುಧನ ಅದಿಪತ್ಯ ಹೊಂದಿದ್ದು, ಪಚ್ಚೆ ಅಥವಾ ಗೋಮೇಧಿಕ ಧರಿಸಬಹುದು.

7, 16, 25 ಆಗಿದ್ದರೆ...
7ರಂದು ಜನಿಸಿದವರು ಕೇತುವಿನ ಅಧಿಪತ್ಯ ಹೊಂದಿದ್ದು, ವೈಢೂರ್ಯ ಧರಿಸಬೇಕು. 16 ಆಗಿದ್ದರೆ ರವಿ ಮತ್ತು ಶುಕ್ರ ಗ್ರಹದ ಮಿಲನದಿಂದ ಕೇತುವಿನ ಅಧಿಪತ್ಯ ಹೊಂದಿರುತ್ತಾರೆ. ವೈಡೂರ್ಯ ಅಥವಾ ಬಿಳಿಹರಳು ಧರಿಸಬಹುದು. 25 ಆಗಿದ್ದರೆ ಚಂದ್ರ ಮತ್ತು ಬುಧನ ಮಿಲನದಿಂದ ಕೇತುವಿನ ಅಧಿಪತ್ಯ ಹೊಂದಿದ್ದು, ವೈಡೂರ್ಯ ಅಥವಾ ಪಚ್ಚೆ  ಧರಿಸಬಹುದು.

8, 17, 26 ಆಗಿದ್ದರೆ...
8ರಂದು ಜನಿಸಿದವರು ಸಂಪೂರ್ಣ ಶನಿಗ್ರಹದ ಅಧಿಪತ್ಯ ಹೊಂದಿದ್ದು ಇವರು ಇಂದ್ರ ನೀಲ, ಪಚ್ಚೆ ಧರಿಸಬಹುದು.  17 ಆಗಿದ್ದರೆ ರವಿ ಮತ್ತು ಕೇತುವಿನ ಮಿಲನದಿಂದ ಶನಿಯ ಅಧಿಪತ್ಯ ಹೊಂದಿದ್ದು, ಇಂದ್ರನೀಲ ಅಥವಾ ವೈಡೂರ್ಯ ಧರಿಸಬಹುದು. 26 ಆಗಿದ್ದರೆ ಚಂದ್ರ ಮತ್ತು ಶುಕ್ರ ಗ್ರಹದ ಮಿಲನದಿಂದ ಶನಿಯ ಅಧಿಪತ್ಯ ಹೊಂದಿದ್ದು, ವಜ್ರ, ಇಂದ್ರನೀಲ, ಪಚ್ಚೆ ಧರಿಸಬಹುದು.

9, 18, 27 ಆಗಿದ್ದರೆ...
9ನೇ ತಾರೀಖಿನವರು ಸಂಪೂರ್ಣ ಕುಜನ ಅಧಿಪತ್ಯ ಹೊಂದಿದ್ದು ಹವಳ, ಮಾಣಿಕ್ಯ, ಪುಷ್ಪರಾಗದ ಹರಳು ಧರಿಸಬಹುದು. ನಿಮ್ಮ ಜನ್ಮ 18ರಂದಾಗಿದ್ದರೆ ರವಿ, ಶನಿಯ ಮಿಲನದಿಂದ ಕುಜನ ಆಧಿಪತ್ಯ ಹೊಂದಿದ್ದು, ಮಾಣಿಕ್ಯ ಮತ್ತು ಹವಳ ಧರಿಸಬಹುದು. 27 ಆಗಿದ್ದರೆ ಚಂದ್ರ ಮತ್ತು ಕೇತುವಿನ ಮಿಲನದಿಂದ ಕುಜನ ಆದಿಪತ್ಯ ಹೊಂದಿದ್ದು ವೈಡೂರ್ಯ ಅಥವಾ ಹವಳ ಧರಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 85534 70343.

5, 14, 23 ಆಗಿದ್ದರೆ...
5ರಂದು ಜನಿಸಿದವರು ಬುಧನ ಅಧಿಪತ್ಯ ಹೊಂದಿದ್ದು, ಪಚ್ಚೆ ಅಥವಾ ಇಂದ್ರ ನೀಲ ಧರಿಸಬಹುದು. 14 ಆಗಿದ್ದರೆ ರವಿ, ರಾಹುವಿನ ಮಿಲನದಿಂದ ಬುಧನ ಆಳ್ವಿಕೆ ಹೊಂದಿದ್ದು ಮಾಣಿಕ್ಯ ಮತ್ತು ಪಚ್ಚೆ ಧರಿಸಬಹುದು. 23 ಆಗಿದ್ದರೆ, ಚಂದ್ರ ಮತ್ತು ಗುರುವಿನ ಮಿಲನದಿಂದ ಬುಧನ ಅಧಿಪತ್ಯ ಹೊಂದಿದ್ದು, ಪಚ್ಚೆಯನ್ನು ಮಾತ್ರ ಧರಿಸುವುದು.

-ಎನ್. ಅಂಜನ್ ಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement