ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಭಕ್ತಿ-ಜ್ಯೋತಿಷ್ಯ

ಯೋಗ ಅಂದ್ರೆ ಗುರು

Lingaraj Badiger
Updated On : 21 May 2014, 4:40 am

ನಾನೊಮ್ಮೆ ಆಕ್ಸ್‌ಫರ್ಡ್ ವಿವಿಯಲ್ಲಿ ಉಪನ್ಯಾಸ ನೀಡುತ್ತಿದ್ದಾಗ, ಪತ್ರಕರ್ತರೊಬ್ಬರು 'ಯೋಗ ಅಂದ್ರೇನು?' ಎಂದು ಕೇಳಿದರು. ನಾನು 'ಯೋಗ ಅಂದ್ರೆ ಗುರು' ಎಂದಷ್ಟೇ ಉತ್ತರಿಸಿ ಸುಮ್ಮನಾದೆ. ಅವರು ಆ ಉತ್ತರಕ್ಕೆ ಪ್ರತಿಕ್ರಿಯಿಸಿ, 'ನೀವು ಹೀಗೆ ಮಾತನಾಡಿದರೆ ನಾವು ನಿಮ್ಮ ಈ ಉಪನ್ಯಾಸದ ಬಗೆಗಿನ ವರದಿಯನ್ನು ಪ್ರಕಟಿಸುವುದಿಲ್ಲ. ಯಾಕಂದ್ರೆ ನಮ್ಮ ದೇಶದಲ್ಲಿ ಈ ಗುರು ಎಂಬ ಪದದಲ್ಲಿ ನಂಬಿಕೆ ಇಲ್ಲ.' ಎಂದರು. ನನ್ನಲ್ಲಿ ಒಂದು ಮುಗುಳ್ನಗುವಿನ ಹೊರತಾಗಿ ಪ್ರತಿಕ್ರಿಯಿಸಲು ಬೇರೆ ಮಾರ್ಗವಿರಲಿಲ್ಲ. 'ನಾವು ನೂರು ಕೋಟಿ ಭಾರತೀಯರಿದ್ದೇವೆ. ನೀವು ಕೇಳಿದರೆ ಯೋಗವನ್ನು ನೂರು ಕೋಟಿ ವಿಧಗಳಲ್ಲಿ ನಿಮಗೆ ತಿಳಿಸಿಕೊಡಬಲ್ಲೆವು. ಆದರೆ ಯೋಗ ಅಂದರೇನು ಅಂತ ಕೇಳಿದ್ರೆ ಅದಕ್ಕಿರೋದು ಇದೊಂದೇ ಉತ್ತರ. ಯೋಗ ಅಂದ್ರೆ ಗುರು. ಅದನ್ನು ನಾನಾಗಲೀ ನೀವಾಗಲೀ ಬದಲಿಸಲು ಅಸಾಧ್ಯ' ಎಂದು ಅವರಿಗೆ ಹೇಳಿದೆ.
ಇದು ಬರೀ ಪಾಶ್ಚಿಮಾತ್ಯರ ಸಮಸ್ಯೆ ಅಲ್ಲ. ಇದು ಈ ಕಲಿಯುಗದ ಸಮಸ್ಯೆ. ಇತ್ತೀಚೆಗೆ ಒಬ್ಬರು 'ಇಷ್ಟೆಲ್ಲ ಆವಿಷ್ಕಾರಗಳನ್ನು ಮಾಡಿ ಕ್ರಾಂತಿ ನಡೆಸಿದ ಹೆಮ್ಮೆ ದೇಶಕ್ಕಿದ್ದರೂ, ವಿಜ್ಞಾನ ಇಷ್ಟೊಂದು ಮುಂದುವರಿದಿದ್ದರೂ, ಸಾಂಸ್ಕೃತಿಕವಾಗಿ ಎತ್ತರಕ್ಕೆ ಬೆಳೆದಿದ್ದರೂ, ದೇಶ ಕಳೆಗುಂದಿದಂತೆ ಆಗಿದೆಯಲ್ಲ ಯಾಕೆ?' ಎಂದು ಕೇಳಿದರು. ಗುರುವನ್ನು ಅಗೌರವಿಸಿದ್ದೇ ದೇಶ ಕಳಾಹೀನವಾಗಲು ಕಾರಣ. ಗುರುವನ್ನು ಗೌರವಿಸಿ. ಮತ್ತೆ ದೇಶ ನಳನಳಿಸುತ್ತದೆ ಅಂದೆ.
ಪ್ರಪಂಚದಾದ್ಯಂತ ಇರುವ ಹದಿನೆಂಟರಿಂದ ಎಂಬತ್ತರ ತನಕದ ಯಾರನ್ನೇ ಗಮನಿಸಿನೋಡಿ. ಇಲ್ಲಿ ಯಾರೊಬ್ಬರೂ ಗುರುವನ್ನು ಒಪ್ಪಿಕೊಳ್ಳಲು ತಯಾರೇ ಇಲ್ಲ. ಅದೇ ಕಾರಣಕ್ಕೆ ಅವರು ಯಾವ ದಿಕ್ಕಿನತ್ತ ಪಯಣಿಸುತ್ತಿದ್ದಾರೆ ಎಂಬುದೇ ಅವರಿಗೆ ಗೊತ್ತಿಲ್ಲವಾಗಿದೆ.
ಇತ್ತೀಚೆಗೆ ನೀವು ಟೀವಿಯಲ್ಲಿ ಯಾವುದೇ ಚಾನೆಲ್‌ನಲ್ಲಿ ನೋಡಿದರೂ ನಟನಟಿಯರು ಯಂತ್ರಗಳ ಬಗ್ಗೆ ತಂತ್ರಗಳ ಬಗ್ಗೆ ಮಾತನಾಡುತ್ತಾ ಕೆಲವು ಆ ಸಂಬಂಧಿ ಉತ್ಪನ್ನಗಳ ಬಗೆಗೆ ಜಾಹೀರಾತು ನೀಡುತ್ತಿರುತ್ತಾರೆ. ಯೋಗ ಮತ್ತು ವೇದವಿಜ್ಞಾನದ ಹೆಸರಿನಲ್ಲಿ ಅಪದ್ಧದ ಜಾಹೀರಾತುಗಳು ಬರಲಾರಂಭಿಸಿವೆ. ಇದರಿಂದಾಗಿ ಈ ವಿಷಯಗಳ ಬಗೆಗಿನ ಮೌಲ್ಯ ಕಮ್ಮಿ ಆಗುತ್ತಿದೆ. ಗುರುವಿನ ಶಕ್ತಿಯ ಬಗೆಗೂ ಅವಗಣನೆ ಶುರುವಾಗಿದೆ.
ನಿಮಗೆ ಗುರು ಬಗ್ಗೆ ಚಿಕ್ಕದಾಗಿ ವಿವರಿಸುತ್ತೇನೆ. ಗುರು ಅಂದ್ರೆ ಒಂದು ದೊಡ್ಡಕಪ್ಪು ಗಡ್ಡದ ವೇಷಧಾರಿ ಅಲ್ಲ, ಮರಸುತ್ತಿ ಕುಣಿಯುವವನಲ್ಲ. ಕೋತಿಯಂತೆಲ್ಲ ಉಸಿರಾಡಿ ಏನೋ ಪವಾಡ ನಡೆಸಿದಂತೆ ಮಾಡಿ ನಿಮ್ಮ ಕಾಯಿಲೆ ಗುಣ ಪಡಿಸುತ್ತೇನೆ ಎಂದು ದುಡ್ಡು ಕೀಳುವ ಕಪಟಿ ಅಲ್ಲ.

ಆತನೊಬ್ಬ ಜ್ಞಾನದಾತ. ಆತ ನಿಮ್ಮನ್ನು ನಿಮ್ಮದೇ ಅನುಭವದ ಮೂಲಕ ಬೆಳೆಸುವಾತ. ನಿಮ್ಮ ಪಂಚೇಂದ್ರಿಯಗಳ ಶಕ್ತಿಯ ಅರಿವು ಮೂಡಿಸುವಾತ ಗುರು. ಯೋಗದ ಮೂಲಕ ನಿಮ್ಮೊಳಗಿನ ಬ್ರಹ್ಮಾನಂದವನ್ನು ಅರಿವಿಗೆ ತರುವಾತನೇ ಗುರು.

-ಯೋಗಿ ಅಶ್ವಿನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement