ಮಾನವನಾಗಿ ಹುಟ್ಟಿದ ಮೇಲೆ ಸದಾಕಾಲ, ಸಕಲ ಕಾರ್ಯಗಳಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಮತ್ತು ತಾನೊಂದು ಮನೆಯನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕೆ ಜ್ಯೋತಿಷದ ಪ್ರಕಾರ ಜಾತಕನಿಗೆ ಧನಯೋಗ ಮತ್ತು ಗೃಹಯೋಗಗಳಿರಬೇಕು.
ಯಾವಾಗ ಗೃಹಯೋಗ?
ಜಾತಕ ಕುಂಡಲಿಯಲ್ಲಿ ಎರಡನೇ ಮನೆಯ ಅಧಿಪತಿ ಲಾಭಾಧಿಪತಿಯೊಡನೆ (ಹನ್ನೊಂದನೇ ಮನೆಯ ಅಧಿಪತಿ) ಸೇರಿ, ಎರಡನೇ ಮನೆಯಲ್ಲಾಗಲೀ, ಹನ್ನೊಂದನೇ ಮನೆಯಲ್ಲಾಗಲೀ ಇದ್ದರೆ, ಆ ಜಾತಕ ವಿಶೇಷ ಧನವಂತನಾಗುತ್ತಾನೆ.
ಎರಡನೇ ಮನೆಯ ಅಧಿಪತಿ, ಲಾಭಾಧಿಪತಿಗಳು ಸ್ವಕ್ಷೇತ್ರ, ಮಿತ್ರಕ್ಷೇತ್ರಗಳಲ್ಲಿ ಉಚ್ಚ ಸ್ಥಾನದಲ್ಲಿ ಇದ್ದರೆ, ಧನಕಾರಕ ಗುರು ಎರಡನೇ ಮನೆಯ ಅಧಿಪತಿಯೊಂದಿಗೆ, ಬುಧನೊಂದಿಗೆ ಸೇರಿದ್ದರೆ, ಎರಡನೇ ಮನೆಯ ಅಧಿಪತಿ ಎರಡನೇ ಮನೆಯಲ್ಲಿ, ಐದನೆಯ ಮನೆಯ ಅಧಿಪತಿ ಐದನೇ ಸ್ಥಾನದಲ್ಲಿ ಇದ್ದರೆ ಆ ಜಾತಕ ಧನವಂತನಾಗುತ್ತಾನೆ. ಲಗ್ನಾಧಿಪತಿ ಲಗ್ನದಲ್ಲಿ, ಎರಡನೆಯ ಮನೆಯ ಅಧಿಪತಿ ಎರಡನೇ ಸ್ಥಾನದಲ್ಲಿ ಇದ್ದರೆ, ಲಗ್ನಾಧಿಪತಿ ಎರಡನೇ ಸ್ಥಾನದಲ್ಲಿ, ಎರಡನೆಯ ಮನೆಯ ಅಧಿಪತಿ ಲಗ್ನದಲ್ಲಿ ಇದ್ದರೆ, ಧನಕಾರಕನಾದ ಗುರು ಎರಡನೇ, ಹನ್ನೊಂದನೇ ಮನೆಯಲ್ಲಿದ್ದರೆ, ಹನ್ನೊಂದನೇ ಮನೆಯ ಅಧಿಪತಿ ಎರಡನೇ ಮನೆಯಲ್ಲಿ ಇದ್ದರೆ ಆ ಜಾತಕನು ಧನವಂತನಾಗುತ್ತಾನೆ.
ಲಗ್ನದಲ್ಲಿ ಚಂದ್ರ, ಗುರು, ಶುಕ್ರ ಇದ್ದರೆ, ಗುರು ಒಂಬತ್ತನೇ ಮನೆಯಲ್ಲಿ ಶುಕ್ರನೊಂದಿಗೆ ಸೇರಿದ್ದರೆ, ಎರಡನೇ ಮನೆ ಅಧಿಪತಿ, ಹನ್ನೊಂದನೇ ಮನೆಯ ಅಧಿಪತಿ, ಐದನೆಯ ಮನೆಯ ಅಧಿಪತಿ ಸೇರಿದ್ದರೆ ಜಾತಕ ಧನವಂತನಾಗುತ್ತಾನೆ.
ಕನ್ಯಾ ರಾಶಿಯಲ್ಲಿ ರಾಹು,ಶನಿ, ಕುಜ, ಶುಕ್ರ ಇದ್ದರೆ, ಲಗ್ನ, ಧನ (ಎರಡನೇ), ಭಾಗ್ಯ (ನಾಲ್ಕನೇ), ಲಾಭ (ಹನ್ನೊಂದನೇ) ಸ್ಥಾನದ ಅಧಿಪತಿಗಳು ಉಚ್ಚ ಸ್ಥಾನದಲ್ಲಿದ್ದರೆ ಆ ಜಾತಕ ಕೋಟೀಶ್ವರನಾಗುತ್ತಾನೆ. ಧನ ಕಾರಕನಾದ ಗುರು ದಶಮ ಕೇಂದ್ರದಲ್ಲಿ ನಾಲ್ಕನೆಯ, ಒಂಬತ್ತನೆಯ ಮನೆಯ ಅಧಿಪತಿಯೊಂದಿಗೆ ಸೇರಿದ್ದರೆ, ನಾಲ್ಕನೆ ಮನೆಯ ಅಧಿಪತಿಯಾಗಲೀ, ಶುಕ್ರನಾಗಲೀ, ಸ್ವಕ್ಷೇತ್ರ ಅಥವಾ ಉಚ್ಚರಾಶಿಯಲ್ಲಿದ್ದು, ಅವುಗಳ ಕೇಂದ್ರ ತ್ರಿಕೋಣಗಳಾದರೆ ಆ ಜಾತಕನು ಕೋಟೀಶ್ವರನಾಗುತ್ತಾನೆ.
ಗೃಹಯೋಗ ಯಾವಾಗ?
ಕುಂಡಲಿಯಲ್ಲಿ ನಾಲ್ಕನೇ ಸ್ಥಾನ, ನಾಲ್ಕನೆಯ ಮನೆಯ ಅಧಿಪತಿ ಬಲವಾಗಿದ್ದರೆ, ಲಗ್ನ, ಎರಡನೆಯ, ನಾಲ್ಕನೆಯ ಮನೆಯ ಅಧಿಪತಿಗಳು ಕೇಂದ್ರ ಕೋನದಲ್ಲಿದ್ದು, ಎಷ್ಟು ಗ್ರಹಗಳೊಂದಿಗೆ ಸೇರಿರುತ್ತವೆಯೋ ಆ ಜಾತಕ ಅಷ್ಟು ಮನೆಗಳನ್ನು ಹೊಂದುತ್ತಾನೆ.
ಲಗ್ನಾಧಿಪತಿ, ನಾಲ್ಕನೆ ಮನೆಯ ಅಧಿಪತಿಗಳು ಪರಿವರ್ತನೆ ಹೊಂದಿದ್ದರೆ, ನಾಲ್ಕನೆಯ ಮನೆಯ ಅಧಿಪತಿ ಲಗ್ನದಿಂದ ಕೇಂದ್ರದಲ್ಲಿ ಇದ್ದರೆ, ನಾಲ್ಕನೆಯ ಮನೆ ಅಧಿಪತಿ ಚರರಾಶಿಯಲ್ಲಿದ್ದು, ನಾಲ್ಕನೆ ಸ್ಥಾನ ಚರ ರಾಶಿಯಾಗಿದ್ದರೆ ಆ ಜಾತಕನು ಅನೇಕ ಮನೆಗಳನ್ನು ಹೊಂದುತ್ತಾನೆ.
ನಾಲ್ಕನೆಯ ಮನೆಯ ಅಧಿಪತಿ ಉಚ್ಚಸ್ಥಿತಿಯಲ್ಲಿದ್ದರೆ, ಮಿತ್ರ ಕ್ಷೇತ್ರದಲ್ಲಿದ್ದರೆ, ಶುಭಗ್ರಹಗಳೊಂದಿಗೆ ಸೇರಿದ್ದರೆ, ನಾಲ್ಕನೆ ಮನೆಯಲ್ಲಿ ಶುಭಗ್ರಹಗಳಾದ ಬುಧ, ಗುರು, ಶುಕ್ರರಿದ್ದರೆ ಗೃಹಯೋಗವಿದೆ. ಮಾಹಿತಾಗಿ ಸಂಪರ್ಕಿಸಿ ಮೊ. 8495029841
-ಶಂಕರಾನಂದ