ಭಕ್ತಿ-ಜ್ಯೋತಿಷ್ಯ

ಓಡಾಡಿದೆ ಅರಿವಿನ ನದಿ

ಪರಮಾತ್ಮ ಇದ್ದಾನೆ ಎಂದು ತಿಳಿದವರು, ಅಜ್ಞಾನ ಮತ್ತು ಅಂಧಕಾರ ದೂರ ಮಾಡಲು ಪ್ರಯತ್ನಿಸಿದವರು ಜ್ಞಾನಿಯಾಗುತ್ತಾರೆ...

ಪರಮಾತ್ಮ ಇದ್ದಾನೆ ಎಂದು ತಿಳಿದವರು, ಅಜ್ಞಾನ ಮತ್ತು ಅಂಧಕಾರ ದೂರ ಮಾಡಲು ಪ್ರಯತ್ನಿಸಿದವರು ಜ್ಞಾನಿಯಾಗುತ್ತಾರೆ. ನಮ್ಮ ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆ ಮಾಡಿದರೆ ಆಗ ಆತ್ಮದ ಅರಿವು ನಮಗಾಗುತ್ತದೆ. ಮುಖ್ಯವಾಗಿ ಮನಸ್ಸಿನ ಗೊಂದಲ ದೂರವಾಗಬೇಕು. ಕಾಮದ ಬಯಕೆ ಸದಾ ಕಾಲ ಚಿಂತೆಯಿಂದ ಇರುವುದು. ವ್ಯಥೆ, ಭ್ರಮೆ, ಅಪನಂಬಿಕೆಯಿಂದ ಇದ್ದರೆ, ನಮಗೆ ಆತ್ಮದ ನೇರವಾದ ದರ್ಶನ ಆಗುವುದಿಲ್ಲ. ದಿನವೂ ಒಂದಲ್ಲ ಒಂದು ವಿಷಯದಲ್ಲಿ ಗೊಂದಲದಲ್ಲಿ ಇರುವುದರಿಂದ ಆತ್ಮದ ದರ್ಶನ ಸಿಗುವುದಿಲ್ಲ. ಆತ್ಮದರ್ಶನ ಸಿಗದವರು ದರ್ಶನದ ದಾರಿಯನ್ನು ನೋಡಬೇಕು.
ನಿಷ್ಠೆ, ಶ್ರದ್ಧೆ, ಆತ್ಮಸ್ಥೈರ್ಯ, ಇಚ್ಛಾಶಕ್ತಿ, ಧೈರ್ಯ, ಸತ್ಯಧರ್ಮವನ್ನು ಜೀವನದಲ್ಲಿ ಅಳವಡಿಸಿದರೆ...ಇಂಥವರು ಆತ್ಮಜ್ಞಾನ ಪಡೆಯುತ್ತಾರೆ. ಇಂಥ ನಂಬಿಕೆ ಜ್ಞಾನವನ್ನು ಕೊಡುತ್ತದೆ. ಶ್ರದ್ಧೆ ಎಂದರೆ ನಮಗೆ ಗೊತ್ತಿಲ್ಲದ ವಿಷಯವನ್ನು ಪೂರ್ಣ ಭರವಸೆಯಿಂದ ಕಲಿಯುವುದು. ಶ್ರದ್ಧೆಯಿಂದ ಓದುವ ಒಬ್ಬ ವಿದ್ಯಾರ್ಥಿ, ಅವನು ಕಲಿಯುವ ವಿಷಯದ ಜ್ಞಾನಿಗಳು ಪೂರ್ಣ ಶ್ರದ್ಧೆಯಿಂದ ಅನ್ವೇಷಣೆ ಮಾಡಿದಾಗ ಅವರ ಅನ್ವೇಷಣೆ ಯಶಸ್ವಿಯಾಗಿ ಕೊನೆ ಮುಟ್ಟುತ್ತಾರೆ.
ಒಂದು ಶಬ್ಧ ಅಥವಾ ವಾಕ್ಯ ಅರ್ಥವಾಗದೇ ಇದ್ದಾಗ ಅದನ್ನು ಶ್ರದ್ಧೆಯಿಂದ ತಿಳಿಯಲು ಯತ್ನಿಸಿದರೆ ಆ ವಿಷಯವು ಪೂರ್ಣವಾಗಿ ತಿಳಿಯುತ್ತದೆ ಇದೇ ಶ್ರದ್ಧೆ. ಈ ಶ್ರದ್ಧೆಗೆ ಇಂದ್ರಿಯಗಳ ಕಡಿವಾಣ ಹಾಕದಿದ್ದರೆ ಜ್ಞಾನ ಪಡೆಯಲು ಸಾಧ್ಯ ಇಲ್ಲ. ಜ್ಞಾನದ ಅರಿವು ಇದ್ದವರಿಗೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಕೆಲವರು ಸಂಶಯ ಪಡುವುದು ಜಾಸ್ತಿ ಇವರಲ್ಲಿ ಶ್ರದ್ಧೆ ಇರುವುದೇ ಇಲ್ಲ. ಇಂಥವರಿಗೆ ಜೀವನದಲ್ಲಿ ಮಾನಸಿಕ ನೆಮ್ಮದಿ ಇರುವುದಿಲ್ಲ.
ಕೆಲವರು ಒಂದು ವಿಷಯವನ್ನು ಒಂದೆರಡು ಸಲ ಓದುತ್ತಾರೆ. ಆದರೆ ಅದರ ಅರ್ಥವನ್ನು ತಿಳಿದು ಮನನ ಮಾಡಲು ಪ್ರಯತ್ನಿಸುವುದಿಲ್ಲ. ಅದರಂತೆ ನಾವು ನಮ್ಮ ಜೀವನದ ಬಗ್ಗೆ ಅಂದರೆ ನಾವು ಯಾರು? ನಾವು ಎಲ್ಲಿಂದ ಬಂದಿದ್ದೇವೆ ಎಂದು ತಿಳಿಯಲು ಪ್ರಯತ್ನಿಸುವುದಿಲ್ಲ. ನಾವು ಸುಲಭವಾಗಿ ತೃಪ್ತಿ ಹೇಗೆ ಸಿಗುತ್ತದೋ ಅದರಂತೆ ಸಂತೋಷ ಪಡುತ್ತೇವೆ. ಆದರೆ ಹೊಸ ಹೊಸ ವಿಷಯ ತಿಳಿಯುವುದಕ್ಕೆ ಅದರ ಅನುಭವ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಸಮಾಜದ ಒಳಿತಿಗೂ ಕಾರಣವಾಗುತ್ತದೆ.
ನಮ್ಮ ಜೀವನದ ಕಷ್ಟಗಳಿಗೆ ಸಹಕಾರಿಯಾಗುತ್ತದೆ. ಯಾರು ಜೀವನದಲ್ಲಿ ಸಂಶಯದಿಂದ ಬದುಕುತ್ತಾರೊ ಇವರು ಬುದ್ಧಿವಂತನಾಗುವುದು ಕಷ್ಟ ಸಾಧ್ಯ. ಜ್ಞಾನ ಇಲ್ಲದ ಬದುಕಿನಿಂದ ತೊಂದರೆಯಾಗುತ್ತದೆ. ಈಗ ನಡೆಯುತ್ತಿರುವ ಅತ್ಯಾಚಾರದಂಥ ಪ್ರಕರಣಗಳು ಅಜ್ಞಾನದ ಪ್ರತೀಕ. ಜ್ಞಾನ ಇದ್ದರೆ ಮನುಷ್ಯ ಇಂಥ ಕೆಲಸಕ್ಕೆ ಮನಸ್ಸನ್ನೇ ಕೊಡುವುದಿಲ್ಲ ಅಜ್ಞಾನಿ, ಶ್ರದ್ಧೆ ಇಲ್ಲದವನು ಮತ್ತು ಸಂಶಯದಲ್ಲಿರುವವನು ಬದುಕಿಯೂ ಪ್ರಯೋಜನ ಇರುವುದಿಲ್ಲ. ಸಂಶಯದಲ್ಲಿರುವ ಮನುಶಷ್ಯ ಎಲ್ಲರನ್ನೂ ವಿರೋಧಿಸುತ್ತಾನೆ. ಅವನು ಜನರ ಕೆಲಸಕಾರ್ಯಗಳನ್ನು ಸಂಶಯದಿಂದ ನೋಡುತ್ತಾನೆ. ಅವನು ಅಧಿಕಾರಿಯಾಗಿದ್ದರೆ ತಮ್ಮ ಕೈ ಕೆಳಗಿನ ಸಿಬ್ಬಂದಿಯನ್ನು, ಸಂದೇಹಾಸ್ಪದವಾಗಿ ನೋಡುತ್ತಾನೆ. ಯಾವ ಸತ್ಯವನ್ನು ನಂಬುವುದಿಲ್ಲ. ಇದರಿಂದ ಅವರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಇದಕ್ಕೆಲ್ಲ ಕಾರಣ ಅವರ ಅಜ್ಞಾನ.
ಮುಖ್ಯವಾಗಿ ನಮಗೆ ನಮ್ಮ ಮೇಲೆ ನಂಬಿಕೆ ಬೇಕು. ಇದರಿಂದ ನಾವು ಯಾವ ಕೆಲಸದಲ್ಲೂ ಜಯಶಾಲಿಯಾಗುತ್ತೇವೆ. ಶ್ರೀ ಕೃಷ್ಣ ಪರಮಾತ್ಮನು ಶ್ರದ್ಧೆಯುಳ್ಳ ಮನುಷ್ಯನಿಗೆ ಜ್ಞಾನ ಸಿಗುತ್ತದೆ ಎಂದು ಹೇಳಿದ್ದಾನೆ.

-ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!