ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಭಕ್ತಿ-ಜ್ಯೋತಿಷ್ಯ

ದೀಪಾವಳಿಗೊಂದು ವಿಶಿಷ್ಟ ಆಚರಣೆ

ಮಲೆನಾಡು ಪ್ರದೇಶ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು , ಮಂಡ್ಯ ಇತ್ಯಾದಿ ಜಿಲ್ಲೆಗಳಲ್ಲಿ ದೀಪಾವಳಿ ...

Rashmi Kasaragodu
Updated On : 22 Oct 2014, 2:03 am

ಮಲೆನಾಡು ಪ್ರದೇಶ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು , ಮಂಡ್ಯ ಇತ್ಯಾದಿ ಜಿಲ್ಲೆಗಳಲ್ಲಿ ದೀಪಾವಳಿ ಅಮಾವಾಸ್ಯೆ ಅಥವಾ ಪಾಡ್ಯದಂದು ಗ್ರಾಮದೊಳಗಿನ ದೇವರ ಮೂರ್ತಿ, ದೇವರ ಕಟ್ಟೆ ಹಾಗೂ ಪ್ರಾಚೀನ ಗುಡಿಗಳಿಗೆ ತೆರಳಿ ಗ್ರಾಮಸ್ಥರೆಲ್ಲ ಸೇರಿ ಸಾಮೂಹಿಕ ಪೂಜೆ ಸಲ್ಲಿಸುವುದು ಪದ್ಧತಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆಚಾಪುರ ಗ್ರಾಮಸ್ಥರೆಲ್ಲ ಸೇರಿ ಐತಿಹಾಸಿಕ ಶಾಸನ ಕಲ್ಲನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯವಿದೆ. ಶಿವಮೊಗ್ಗ -ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ಕ್ಕೆ ತಾಗಿಕೊಂಡಂತಿರುವ ಗ್ರಾಮದಲ್ಲಿ ಬೃಹತ್ ಶಿಲಾಶಾಸನವಿದೆ. ಸುಮಾರು 8 ಅಡಿ ಎತ್ತರ 3 ಅಡಿ ಅಗಲವಾಗಿದೆ. ಈ ದಾನ ಶಾಸನದಲ್ಲಿ ಸೂರ್ಯ, ಚಂದ್ರ, ಹಸು ಕರು ಮತ್ತು ಶಿವಲಿಂಗವನ್ನು ಪೂಜಿಸುತ್ತಿರುವ ಚಿತ್ರಣವಿದೆ. ಈ ಶಾಸನ ಶಿವದೇವರೆಂದು ಭಕ್ತಿಯಿಂದ ಗ್ರಾಮಸ್ಥರೆಲ್ಲ ದೀಪಾವಳಿಯ ಅಮಾವಾಸ್ಯೆಯಂದು ಪೂಜೆ ಸಲ್ಲಿಸುತ್ತಾರೆ. ಗ್ರಾಮದ ರಿಪ್ಪನ್‌ಪೇಟೆ ದಿಕ್ಕಿನಲ್ಲಿರುವ ದೇವರ ಗುಡಿ, ಕೆರೆ ಮೇಲ್ಬಾಗದ ಕಲ್ಲು ಈ ಶಾಸನಗಳು ಗ್ರಾಮ ದೇವರೆಂಬುದು ಸ್ಥಳೀಯರ ನಂಬಿಕೆ. ಶಾಸನಕ್ಕೆ ಹಣ್ಣು ಕಾಯಿ ನೈವೇದ್ಯ. ಪೂಜೆಯ ಸಂದರ್ಭ ಪ್ರತಿ ಮನೆಯಿಂದ ಒಬ್ಬರಾದರೂ ಸದಸ್ಯರು ಹಣ್ಣುಕಾಯಿ ಸಹಿತ ಬರುತ್ತಾರೆ. ಈ ಹಿಂದಿನ ಮಾಚರಾಜ ಎಂಬ ಅರಸ ಈ ಬೃಹತ್ ದಾನ ಶಾಸನ ಬರೆಸಿದ್ದಾನೆ. ಶಾಸನದಿಂದ ಸ್ಪಲ್ಪ ದೂರದಲ್ಲಿ ತೀರ್ಥದ ಕೊಳ ಮತ್ತು ಈಶ್ವರ ದೇವಾಲಯವಿದೆ. ಈ ಪ್ರದೇಶವನ್ನು ಕಾಳಾಮುಖ ಶೈವ ಪಂಥದ ಘೋರ ತಪಸ್ವಿ ಅನಂತಶಿವಶಕ್ತಿ ಪಂಡಿತರಿಗೆ ದಾನವಾಗಿ ನೀಡಿದ ಬಗ್ಗೆ ಶಾಸನದ ಮುಖ್ಯ ಉಲ್ಲೇಖ.


ಎನ್.ಡಿ. ಹೆಗಡೆ ಆನಂದಪುರಂ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement