ಭಕ್ತಿ-ಜ್ಯೋತಿಷ್ಯ

ಪಿತೃ ತರ್ಪಣ

ಹೆಚ್ಚಿನವರು ಪಿತೃ ಪಕ್ಷದ 15 ದಿನ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಈ 15 ದಿನಗಳು ಅಶುಭಕಾರಕವೇನೂ ಅಲ್ಲ. ಏಕೆಂದರೆ ನಮ್ಮನ್ನು ಸಾಕಿ ಬೆಳೆಸಿ ನಮಗೆ ಮಾರ್ಗದರ್ಶನ ನೀಡಿ, ನಮ್ಮನ್ನು ಬಿಟ್ಟು ಅಗಲಿದ ಆತ್ಮಗಳನ್ನು ತೃಪ್ತಿ ಪಡಿಸುವುದು ಒಂದು ಒಳ್ಳೆಯ ಕೆಲಸ. ಇದಕ್ಕೆ ಪಿತೃ ಪಕ್ಷ ಎಂದು ಕರೆಯುತ್ತಾರೆ. ವೈದಿಕರು ಪಿತೃಪಕ್ಷದಂದು ತಮ್ಮ ಪಿತೃಗಳಿಗೆ ಶ್ರದ್ಧಾ ಭಕ್ತಿಯಿಂದ ಪಿತೃತರ್ಪಣ ನೀಡುತ್ತಾರೆ.

ತಂದೆತಾಯಿಯ ಕಾಲಾನಂತರ ಅವರ ಆತ್ಮವನ್ನು ನೆನಪು ಮಾಡುವ ಸಂದರ್ಭ ಎಂದರೆ ಪಿತೃ ತರ್ಪಣ. ಪಿತೃ ಕರ್ಮವನ್ನು ಮಾಡುವವರು ಒಂದು ದಿನದ ಬ್ರಹ್ಮಚರ್ಯ ಪಾಲಿಸಲೇಬೇಕು. ಇವರು ಸಾತ್ವಿಕ ಆಹಾರ ತಿನ್ನಬೇಕು. ಮನಸ್ಸು ಏಕಾಗ್ರತೆಯಿಂದ ಇದ್ದು ಸುಳ್ಳು ಮಾತನಾಡಬಾರದು. ಹಿಂದೂ ಧರ್ಮದಲ್ಲಿ ಪ್ರತಿ ಅಮವಾಸ್ಯೆಯಂದು ಪಿತೃತರ್ಪಣ ಮಾಡುವ ಕ್ರಮವಿದೆ. ಆದರೆ ಭಾದ್ರಪದ ಕೃಷ್ಣ ಪಕ್ಷದಲ್ಲಿ ಬರುವ ಅಮವಾಸ್ಯೆ ಪಿತೃ ದೇವತೆಗಳಿಗೆ ಪರಮ ಪುಣ್ಯದಿನ.

ಇದನನ್ನೇ ಮಹಾಲಯ ಅಮವಾಸ್ಯೆ ಎಂದು ಕರೆಯುತ್ತಾರೆ. ತಮ್ಮ ಪಿತೃಗಳಿಗೆ ನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆ ಎಂದು ಕರೆಯುತ್ತಾರೆ. ತಮ್ಮ ಪಿತೃಗಳಿಗೆ ನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆಯ ದಿನ ಪಿತೃ ತರ್ಪಣ ನೀಡಬಹುದು.

ಪಿತೃ ತರ್ಪಣ ನೀಡುವಾಗ ನಮ್ಮ ಹಿರಿಯರ ಆತ್ಮತೃಪ್ತಿಗೆ ದಾನ, ಧರ್ಮ ಮಾಡಿದರೆ ಬಹಳ ಒಳ್ಳೆಯದು. ಒಳ್ಳೆಯ ಮನಸ್ಸಿನಲ್ಲಿ ಪಿತೃ ತರ್ಪಣ ಮಾಡಿದರೆ ನಾವು ಜೀವಮಾನದಲ್ಲಿ ಅನುಭವಿಸಿದ ಪಿತೃಶಾಪವನ್ನು ದೂರ ಮಾಡಬಹುದು. ಪಿತೃಪಕ್ಷದಲ್ಲಿ ಬರುವ ಎಲ್ಲಾ ದಿನವೂ ಪರ್ವ ಕಾಲ. ಮನೆಯಲ್ಲಿ ತಯಾರು ಮಾಡಿದ ಎಲ್ಲಾ ಅನ್ನ ಪದಾರ್ಥಗಳನ್ನು ಪಂಚ ಬಲ ಅಂದರೆ ಗೋವು, ಕಾಗೆ, ನಾಯಿಗಳಿಗೆ ಇಡುವುದರಿಂದ ಪಿತೃ ದೇವತೆಗಳಿಗೆ ತೃಪ್ತಿಯಾಗುತ್ತದೆ.

ಗೋವು, ನಾಯಿ, ಕಾಗೆಗಳೇ ಪಿತೃ ದೇವತೆಗಳು. ಪಿತೃ ದೇವತೆಗಳಲ್ಲಿ ನಮಗೆ ಒಳ್ಳೆಯದನ್ನು ಮಾಡಲು ಪ್ರಾರ್ಥಿಸಿ ನಂತರ ನಾವು ಊಟ ಮಾಡಬೇಕು. ನಮ್ಮ ಹಿರಿಯರು ಹೇಳುವಂತೆ ದೇವರ ಕಾರ್ಯಕ್ಕಿಂತ ಪಿತೃಕಾರ್ಯ ಬಹಳ ಶ್ರೇಷ್ಠ. ಪಿತೃಗಳಿಗೆ ತಿಲತಪ್ರಣ ನೀಡುತ್ತೇವೆ. ನಾವು ಯಾವುದೇ ಶುಭ ಕಾರ್ಯ ಮಾಡಿದಾಗ ಪಿತೃಗಳನ್ನು ನೆನೆಯುವುದು ಆದ್ಯ ಕರ್ತವ್ಯ.

ಸಾಮಾನ್ಯ ಶ್ರಾದ್ಧ ಕಾರ್ಯವನ್ನು ನಮ್ಮ ಸ್ವಂತ ಮನೆ, ನದಿ ಸಂಗಮ ಸ್ಥಳದಲ್ಲಿ ಮಾಡಬೇಕು. ಅದರಂತೆ ಹರಿದ್ವಾರ ಹೃಷಿಕೇಶ, ರಾಮೇಶ್ವರ ವಾರಣಾಸಿ ಗಯಾ ಇಂತಹ ಪುಣ್ಯ ಕ್ಷೇತ್ರದಲ್ಲಿ ಮಾಡಿದರೆ ಒಳ್ಳೆಯದು. ಪಿತೃ ಕಾರ್ಯವನ್ನು ಮಾಡುವುದರಿಂದ ನಮ್ಮ ಹಿರಿಯರ ಆತ್ಮಕ್ಕೆ ತೃಪ್ತಿ ಸಿಗುತ್ತದೆ.

ಪಿತೃ ದೇವತೆಗಳು ತಮ್ಮ ಪೀಳಿಗೆಯಿಂದ ತುತ್ತು ಅನ್ನ, ಒಂದು ಹನಿ ನೀರು, ಎಳ್ಳು ನೀರನ್ನು ಬಯಸುತ್ತಾರೆ ಎಂಬುದು ನಂಬಿಕೆ. ಕೆಲವರು ಅಮವಾಸ್ಯೆಯ ದಿನ ತಮ್ಮ ಹಿರಿಯರಿಗೆ ಬೇಕಾದ ಭಕ್ಷವನ್ನು ಪಿತೃ ದೇವತೆಗಳಿಗೆ ನೀಡುತ್ತಾರೆ. ಇದರಿಂದ ಪಿತೃ ದೇವತೆಗಳು ತೃಪ್ತಿ ಹೊಂದಿದರೆ ನಮ್ಮ ಇಷ್ಟಾರ್ಥಗಳನ್ನು ಕರುಣಿಸುವ ನಂಬಿಕೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

ಮಾಜಿ ಸಂಸದ ಪ್ರತಾಪ್ ಸಿಂಹಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

ದಕ್ಷಿಣ ಕನ್ನಡ ಜಿಲ್ಲೆಗೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣದ ಪ್ರಸ್ತಾವನೆ: ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನ

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"