ಭಕ್ತಿ-ಭವಿಷ್ಯ

ನವರಾತ್ರಿಯಲ್ಲಿ ವೈಷ್ಣೋದೇವಿ ದರ್ಶನ ಪಡೆದ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು

Guruprasad Narayana

ಜಮ್ಮು: ನವರಾತ್ರಿ ಹಬ್ಬದ ಅಂಗವಾಗಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಕತ್ರಾಗೆ ಭೇಟಿ ನೀಡಿದ್ದು ಮಾತಾ ವೈಷ್ಣೋದೇವಿಗೆ ಗುಹಾ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ನವರಾತ್ರಿ ಹಬ್ಬದ ಪ್ರಯುಕ್ತ ಸುಮಾರು ೧,೦೫,೮೦೧ ಭಕ್ತಾದಿಗಳು ಕತ್ರಾಗೆ ಭೇಟಿ ನೀಡಿ ಮಾತೆ ವೈಷ್ಣೋದೇವಿಯ ದರ್ಶನ ಪಡೆದಿದ್ದಾರೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯದ ಮಂಡಲಿ ಅಧಿಕಾರಿಗಳು ತಿಳಿಸಿದ್ದಾರೆ.

ನವರಾತ್ರಿ ಹಬ್ಬದ ನಾಲ್ಕನೇ ದಿನವಾದ ನೆನ್ನೆಯೇ ಸುಮಾರು ೨೮,೮೩೮ ಯಾತ್ರಾತ್ರಿಗಳು ದೇವಿಯ ದರ್ಶನ ಪಡೆದಿದ್ದಾರೆ.

ಅಕ್ಟೋಬರ್ ೧೩ ರಂದು ಪ್ರಾರಂಭವಾದ ನವರಾತ್ರಿ ಹಬ್ಬ ಅಕ್ಟೋಬರ್ ೨೨ ರವರೆಗೆ ಮುಂದುವರೆಯಲಿದೆ.

SCROLL FOR NEXT