ರಾವಣ ವಿಗ್ರಹ (ಸಾಂದರ್ಭಿಕ ಚಿತ್ರ) 
ಭಕ್ತಿ-ಜ್ಯೋತಿಷ್ಯ

ಗ್ರೇಟರ್ ನೋಯ್ಡಾದಲ್ಲಿ ರಾವಣ ದೇವಸ್ಥಾನದ ಉದ್ಘಾಟನೆಗೆ ಸಕಲ ಸಿದ್ಧತೆ

ದೇಶದೆಲ್ಲೆಡ ರಾಮನನ್ನು ಪೂಜಿಸುವುದು ಸರ್ವೇ ಸಾಮಾನ್ಯ ಹಾಗು ರಾಮನಿಗಾಗಿರುವ ದೇವಾಲಯಗಳು ಅಸಂಖ್ಯಾತ. ಆದರೆ ಬಿಸ್ರಾಕ್ ಗ್ರಾಮದಲ್ಲಿ ಪೂಜಿಸಲ್ಪಡುವವನು ರಾಮಾಯಣದ ನಾಯಕ

ಗ್ರೇಟರ್ ನೋಯ್ಡಾ: ದೇಶದೆಲ್ಲೆಡ ರಾಮನನ್ನು ಪೂಜಿಸುವುದು ಸರ್ವೇ ಸಾಮಾನ್ಯ ಹಾಗು ರಾಮನಿಗಾಗಿರುವ ದೇವಾಲಯಗಳು ಅಸಂಖ್ಯಾತ. ಆದರೆ ಬಿಸ್ರಾಕ್ ಗ್ರಾಮದಲ್ಲಿ ಪೂಜಿಸಲ್ಪಡುವವನು ರಾಮಾಯಣದ ನಾಯಕ ರಾಮನಲ್ಲಿ ಬದಲಾಗಿ ಖಳನಾಯಕ ರಾವಣ. ಇಲ್ಲಿನ ಪ್ರಾದೇಶಿಕ ಜನಪದದ ಪ್ರಕಾರ ಈ ರಾಕ್ಷಸ ರಾಜ ಹುಟ್ಟಿದ್ದು ಇಲ್ಲಿಯೇ!
ಆದುದರಿಂದ ರಾವಣನಿಗಾಗಿ ಭವ್ಯ ದೇವಾಲಯ ಕಟ್ಟಿಸುವ ಪ್ರಾದೇಶಿಕ ನಿವಾಸಿಗಳ ಬಹುದಿನದ ಕನಸು ಈಗ ನನಸಾಗುತ್ತಿದ್ದೆ. ಲಂಕೆಯ ರಾಜ ರಾವಣನಿನಾಗಿ ದೇವಾಲಯ ಈಗಾಗಲೇ ಸಿದ್ಧವಾಗಿದ್ದು, ಆಗಸ್ಟ್ 11 ರಂದು ನಡೆಯುವ ಪೂಜಾ ವಿಧಿಗಳ ಪ್ರಕಾರ ರಾವಣನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗುವುದು. 
ಆದರೆ ಈ ದೇವಾಲಯದ ಗರ್ಭಗುಡಿಯಲ್ಲಿ ರಾವಣ ಮಾತ್ರ ಇರದೇ ರಾಮ, ಸೀತೆ ಮತ್ತು ಲಕ್ಷ್ಮಣರೂ ರಾವಣನ ಜೊತೆಯಾಗಲಿದ್ದಾರೆ. ಮಹಾತ್ಮ ರಾವಣ ದೇವಾಲಯ ಟ್ರಸ್ಟ್ ಮತ್ತು ಶಿವ ಮೋಹನ ದೇವಾಲಯ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. 
ಎರಡೂ ಟ್ರಸ್ಟ್ ಗಳ ಸಂಸ್ಥಾಪಕ ಮತ್ತು ಸದಸ್ಯ ಹಾಗು ಈ ದೇವಾಲಯವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರಧಾರಿ ಅಶೋಕಾನಂದ್ ಮಹಾರಾಜ್ ಹೇಳುವಂತೆ ಸಮಾಜದ ಎಲ್ಲ ಸ್ಥರದ ಜನರು ಭೇಟಿ ನೀಡಲು ದೇವಾಲಯ ಬಹುತೇಕ ಸಿದ್ಧವಿದೆ ಎಂದಿದ್ದಾರೆ. 
ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಹಲವು ಧರ್ಮ ಗುರುಗಳು ಮತ್ತು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಇದನ್ನು ಧೃಢೀಕರಿಸಿರುವ ಸ್ವಾಮಿ ಚಕ್ರಪಾಣಿ ರಾವಣನಿಲ್ಲದೆ ರಾಮನ ಅಸ್ತಿತ್ವ ಸಾಧ್ಯವಿರಲಿಲ್ಲ ಎಂದಿದ್ದಾರೆ. 
ರಾವಣ ತಿಳಿದ ಬ್ರಾಹ್ಮಣ ಮತ್ತು ಅಹಂಕಾರಿ. ಕೊನೆಗೆ ಅವನ ಆಹಾಕಾರವನ್ನು ಕೊನೆಗಾಣಿಸುವ ಕೆಲಸ ರಾಮನಿಗೆ ಬಿದ್ದಿತು ಎಂದು ರಾಮಾಯಣ ತಿಳಿಸುತ್ತದೆ. ಇದನ್ನೇ ದಸರಾ ಸಮಯದಲ್ಲಿ ಆಚರಣೆ ಮಾಡುವುದು ಎಂದು ಚಕ್ರಪಾಣಿ ಹೇಳಿದ್ದಾರೆ. 
ದೇವಾಲಯದಲ್ಲಿ ಗಣೇಶನ ವಿಗ್ರಹ ಮತ್ತು ಶನಿ ಮಹಾರಾಜ್ ವಿಗ್ರಹ ಕೂಡ ಇರಲಿದೆ. ಈ ದೇವಾಲಯದ ಪೂಜಾ ವಿಧಿವಿಧಾನಗಳನ್ನು ನೋಡಿಕೊಳ್ಳಲು ನಾಲ್ಕು ಜನ ಅರ್ಚಕರನ್ನು ನೇಮಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ