ಭಕ್ತಿ-ಭವಿಷ್ಯ

ಬೃಂದಾವನದಿಂದಲೇ ಬ್ರಿಟೀಷ್ ಅಧಿಕಾರಿಯೊಂದಿಗೆ ಮಾತನಾಡಿದ್ದ ಗುರು ರಾಘವೇಂದ್ರರು!

ಈ ಘಟನೆ ನಡೆದಿದ್ದು 1820 ರಲ್ಲಿ ಅಂದರೆ ಭಾರತದಲ್ಲಿ ಬ್ರಿಟೀಷ್ ಆಳ್ವಿಕೆ ನಡೆಯುತ್ತಿದ್ದಾಗ...

ಯೋಗಿಗಳು, ಸಿದ್ಧಪುರುಷರು ಚೈತನ್ಯ ಸ್ವರೂಪಿಗಳಾಗಿರುತ್ತಾರೆ. ಅವರು ವಿದೇಹ ಮುಕ್ತಿ ಪಡೆದ ನಂತರವೂ ಮಾರ್ಗದರ್ಶನ ನೀಡುತ್ತಿರುತ್ತಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಇದಕ್ಕೆ ಉತ್ತಮ ಉದಾಹರಣೆ. ಈ ಘಟನೆ ನಡೆದಿದ್ದು  1820 ರಲ್ಲಿ ಅಂದರೆ ಭಾರತದಲ್ಲಿ ಬ್ರಿಟೀಷ್ ಆಳ್ವಿಕೆ ನಡೆಯುತ್ತಿದ್ದಾಗ, ಆ ಹಿಂದಿನ ರಾಜರುಗಳು ಮಠ ದೇವಾಲಯಗಳಿಗೆ ನೀಡಿದ್ದ ಭೂಮಿಯ ಬಳಕೆ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತವಾಗಿ ಬಳಕೆ ಮಾಡದೇ ಇರುವ ಭೂಮಿಯನ್ನು ವಾಪಸ್ ಪಡೆಯುವಂತೆ ಬ್ರಿಟೀಷ್ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. 

ಸರ್ಕಾರದ ಸೂಚನೆಯಂತೆ ಮಂತ್ರಾಲಯ ಪ್ರದೇಶದ ಅಧಿಕಾರಿಯಾಗಿದ್ದ ಥಾಮಸ್ ಮುನ್ರೋ ಸಹ ಮಂತ್ರಾಲಯದ ಮಠಕ್ಕೆ ಹಿಂದಿನ ರಾಜರುಗಳು ನೀಡಿದ್ದ ಭೂಮಿಯ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದ್ದಾಗ ಮಂತ್ರಾಲಯದ ಸ್ವಾಮಿಗಳಾಗಿದ್ದವರು ನಂಜನಗೂಡಿನಲ್ಲಿ ಯಾತ್ರೆಯಲ್ಲಿದ್ದರು. ಮಠಕ್ಕೆ ಸೇರಿದ ಪ್ರದೇಶಗಳ ಕಾಗದಪತ್ರಗಳು ಸ್ವಾಮಿಗಳ ಜೊತೆಯಲ್ಲಿದ್ದ ಅಧಿಕಾರಿಗಳ ಬಳಿ ಇತ್ತಾದ್ದರಿಂದ, ಅದನ್ನು ಮಂತ್ರಾಲಯದಲ್ಲಿದ್ದ ಬ್ರಿಟೀಷ್ ರೆವಿನ್ಯೂ ಅಧಿಕಾರಿ ಥಾಮಸ್ ಮುನ್ರೋಗೆ ತೋರಿಸಲು ಸಾಧ್ಯವಾಗಿರಲಿಲ್ಲ. ಸಂಕಷ್ಟಕ್ಕೆ ಸಿಲುಕಿದ ಮಠದ ಆಡಳಿತಾಧಿಕಾರಿಗಳಿಗೆ ಗುರು ರಾಘವೇಂದ್ರರನ್ನು ಪ್ರಾರ್ಥಿಸಿವುದನ್ನು ಬಿಟ್ಟು ಬೇರೆ ಆಯ್ಕೆ ಉಳಿದಿರಲಿಲ್ಲ. 

ಥಾಮಸ್ ಮುನ್ರೋಗೆ ಬೃಂದಾವನದಲ್ಲಿದ್ದು (ಸಮಾಧಿ ಸ್ಥಿತಿ) 150 ವರ್ಷಗಳಾದರೂ ಜೀವಂತವಾಗಿರುವ ರಾಘವೇಂದ್ರರರ ಮಹಿಮೆ ಬಗ್ಗೆ ತಿಳಿಸಲು ಆಡಳಿತಾಧಿಕಾರಿಗಳು ಹಾಗೂ ಮಠದ ಸಿಬ್ಬಂದಿ ಯತ್ನಿಸಿದರಾದರೂ ಮುನ್ರೋ ಅದನ್ನು ನಂಬಲಿಲ್ಲ. ಹಾಗೆಯೆ ಮಂತ್ರಾಲಯದ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗುತ್ತಾರೆ. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಬಳಿ ಬರುತ್ತಿದ್ದಂತೆಯೇ ಥಾಮಸ್ ಮುನ್ರೋಗೆ ಅದ್ಭುತವಾದ ಶಕ್ತಿ ಇರುವುದು ಅನುಭವಕ್ಕೆ ಬರುತ್ತದೆ. ಅಷ್ಟೇ ಅಲ್ಲದೇ ಬೃಂದಾವನದಿಂದ ಸನ್ಯಾಸಿಯೊಬ್ಬರು ಹೊರಬರುವಂತೆ ತೋರುತ್ತದೆ. ಇದರಿಂದ ಅಚ್ಚರಿಗೊಳಗಾದ ಮುನ್ರೋ ಮಠದ ಸಿಬ್ಬಂದಿಗಳ ಬಳಿ ಮಹಿಮೆಯುಳ್ಳ ಸನ್ಯಾಸಿಗಳು ಇವರೇನಾ? ಎಂದು ಪ್ರಶ್ನಿಸುತ್ತಾರೆ. ಮತ್ತೊಂದು ವಿಚಿತ್ರವೆಂದರೆ ರಾಘವೇಂದ್ರ ಸ್ವಾಮಿಗಳು ಮುನ್ರೋಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ. ಹಾಗೆಯೆ ಮುನ್ರೋ ಪರಿಶೀಲಿಸಬೇಕಾಗಿದ್ದ ಕಾಗದ ಪತ್ರಗಳನ್ನೂ ತೋರಿಸಿ, ಆತನಿಗೆ ಕೆಲಸದಲ್ಲಿ ಬಡ್ತಿ ದೊರೆಯುವುದೆಂದೂ ಆಶೀರ್ವಾದ ಮಾಡಿ ಮಂತ್ರಾಕ್ಷತೆ ನೀಡುತ್ತಾರೆ. ಮುನ್ರೋ ಕಣ್ಣಿಗೆ ಕಾಣದವರೊಂದಿಗೆ ಮಾತನಾಡಿದ್ದನ್ನು ಹಾಗೂ ಮುನ್ರೋ ಕೈಲಿದ್ದ ಮಂತ್ರಾಕ್ಷತೆಯನ್ನು ಕಂಡು ಸುತ್ತಮುತ್ತಲಿದ್ದ ಜನರೂ ಕಕ್ಕಾಬಿಕ್ಕಿಯಾಗುತ್ತಾರೆ ಎಂಬ ಪ್ರತೀತಿ ಇದೆ. 

ಅಲ್ಲಿದ್ದ ಜನರಿಗೆ ಉತ್ತರಿಸಿದ ಮುನ್ರೋ ತಾನು ಬೃಂದಾವನದಿಂದ ಸನ್ಯಾಸಿಯೊಬ್ಬರು ಹೊರಬಂದಿದ್ದನ್ನು ನೋಡಿದ್ದಾಗಿಯೂ ಮಂತ್ರಾಕ್ಷತೆ, ಬಡ್ತಿ ಪಡೆಯುವ ಆಶೀರ್ವಾದವನ್ನು ಪಡೆದಿದ್ದಾಗಿಯೂ ತಿಳಿಸುತ್ತಾನೆ. ಇದಾದ ಕೆಲವೇ ದಿನಗಳಲ್ಲಿ ರೆವಿನ್ಯೂ ಅಧಿಕಾರಿಯಾಗಿದ್ದ ಮುನ್ರೋಗೆ ಮದ್ರಾಸ್ ಕೌನ್ಸಿಲ್ ನ ವೈಸರಾಯ್ ಆಗಿ ಬಡ್ತಿ ಸಿಗುತ್ತದೆ. ಇದು ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿ ಹಲವು ವರ್ಷಗಳಾದ ಮೇಲೂ ಜೀವಂತವಾಗಿದ್ದುಕೊಂಡು ಅನೇಕ ಭಕ್ತರನ್ನು ಅನುಗ್ರಹಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT