ಭಕ್ತಿ-ಭವಿಷ್ಯ

ಗುರುನಾನಕ್ ಜಯಂತಿ: ಸಿಖ್ ಧರ್ಮದ ಗುರುವಿನ ಪ್ರಮುಖ ಸಂದೇಶಗಳು

Srinivas Rao BV
ಸಿಖ್ ಧರ್ಮದ ಸ್ಥಾಪಕ, ಪ್ರಥಮ ಗುರು ಗುರುನಾನಕ್ ಅವರ ಜಯಂತಿಯನ್ನು ಗುರು ಪೂರಬ್ ಅಥವಾ ಗುರುನಾನಕ್ ಜಯಂತಿಯನ್ನಾಗಿ ಆಚರಿಸಲಾಗುತ್ತಿದೆ. 

ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷ ಕಾರ್ತಿಕ ಮಾಸದ ಪೂರ್ಣಿಮೆಯಂದು ಗುರು ಪೂರಬ್ ಆಚರಿಸಲಾಗುತ್ತದೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರವಾಗಿ ಈ ವರ್ಷ ಗುರುನಾನಕ್ ಜಯಂತಿಯನ್ನು ನ.14ರಂದು ಆಚರಿಸಲಾಗುತ್ತಿದೆ. ಶ್ರೇಷ್ಠ ಸಮಾಜಸುಧಾರಕರೆನಿಸಿಕೊಂಡಿದ್ದ ಗುರುನಾನಕ್ ಹುಟ್ಟಿದ್ದು, ಇಂದು ಪಾಕಿಸ್ತಾನದಲ್ಲಿರುವ ಲಾಹೋರ್ ನಲ್ಲಿ 

ಸಿಖ್ ಧರ್ಮದ ಮೊದಲ ಗುರುವಾಗಿರುವ ಗುರುನಾನಕ್ ಅವರ ಜನ್ಮದಿನವನ್ನು ಅತ್ಯಂತ ವೈಭವವಾಗಿ ಆಚರಿಸುವ ಸಿಖ್ ಸಮುದಾಯದವರು ಬೆಳಿಗ್ಗೆಯಿಂದಲೇ ಗುರುದ್ವಾರಗಳಿಂದ ಮೆರವಣಿಗೆ ಪ್ರಾರಂಭಿಸುತ್ತಾರೆ. ಹತ್ತಿರದ ಪ್ರದೇಶಗಳನ್ನು ಸುತ್ತಿ, ಮೆರವಣಿಗೆಯನ್ನು ವಾಪಸ್ ಕರೆತರಬೇಕಾದರೆ ಶಬ್ದ(ಶ್ಲೋಕ, ಮಂತ್ರ)ಗಳನ್ನು ಪಠಿಸುತ್ತಾರೆ. ನಂತರ ಗುರುದ್ವಾರಕ್ಕೆ ತೆರಳಿ ಧರ್ಮಗುರುಗಳಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. 

ಗುರುನಾನಕ್ ಜಯಂತಿಯಂದು, ಸಿಖ್ ಧರ್ಮದ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ನ್ನು ಸಿಖ್ ಧ್ವಜವನ್ನು ಹಿಡಿದ ಐದು ಸಶಸ್ತ್ರ ಅಂಗರಕ್ಷಕರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಇನ್ನು ಗುರುನಾನಕ್ ಅವರ ಜನ್ಮದಿನಾಚರಣೆ ಅಂಗವಾಗಿ ಗುರು ಗ್ರಂಥ ಸಾಹಿಬ್ ನ್ನು ನಿರಂತರವಾಗಿ ಮೂರು ದಿನಗಳು(ತಡೆ ಇಲ್ಲದೇ) ಪಠಿಸಲಾಗುತ್ತದೆ. ಇದನ್ನು ಅಖಂಡ್ ಪಾತ್ ಎಂದೂ ಹೇಳಲಾಗುತ್ತದೆ. ಗುರುನಾನಕ್ ರ ಜಯಂತಿ ಭಾಗವಾಗಿ ಭಕ್ತಾದಿಗಳು ಕೀರ್ತನೆಗಳು ಪ್ರಸಾದ ವಿನಿಮಯವೂ ಸಹ ಗುರುದ್ವಾರಗಳಲ್ಲಿ ಭರ್ಜರಿಯಿಂದ ನಡೆಯುತ್ತವೆ. 

ಒಬ್ಬನೇ ದೇವರು: ಗುರುನಾನಕ್ ರು ಸನಾತನ ಧರ್ಮದ ಏಕಂ ಸತ್ ವಿಪ್ರಾಃ ಬಹುದಾವದಂತಿ ಎಂಬ ಮಾತನ್ನು ಅತ್ಯಂತ ಸರಳವಾಗಿ ವಿವರಿಸಿದ್ದರು, ಇರುವುದು ಒಬ್ಬನೇ ದೇವರು ಎಂಬ ತತ್ವವನ್ನು ತಿಳಿಸಿದ್ದ ಗುರುನಾನಕ್, ಆದ್ದರಿಂದಲೆ ಸಿಖ್ ಸಮುದಾಯದಲ್ಲಿ ದೇವರು ಸರ್ವವ್ಯಾಪಿಯಾದ ಆಕಾರವಿಲ್ಲದ, ಕಾಲಾತೀತ ಎಂಬ ನಂಬಿಕೆ ಇದ್ದು, ದೇವರ ಸಂಕಲ್ಪ ಶಕ್ತಿ ಮಾತ್ರದಿಂದಲೇ ಜಗತ್ತು ಸೃಷ್ಠಿಯಾಯಿತು ಎಂಬುದನ್ನು ಸಿಖ್ ಧರ್ಮ ಸಮುದಾಯ ಒಪ್ಪಿದೆ. ಎಲ್ಲರಿಗೂ ನೀಡುವವನು ಒಬ್ಬದೇ ದೇವನಾಗಿದ್ದು ಆತನನ್ನು ನಾವು ಮರೆಯಾಬರದು ಎಂಬುದು ಗುರುನಾನಕ್ ಅವರ ಪ್ರಮುಖ ಸಂದೇಶಗಳಲ್ಲಿ ಒಂದಾಗಿದೆ. 

ಬಡವರನ್ನು ಮರೆಯಬೇಡ: ಗುರುನಾನಕ್ ರು ನೀಡಿದ ಈ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಒಮ್ಮೆ ಗುರುನಾನಕ್ 12 ವರ್ಷದವರಾಗಿದ್ದಾಗ ಉದ್ಯಮವನ್ನು ಪ್ರಾರಂಭಿಸುವುದಕ್ಕಾಗಿ ಅವರ ತಂದೆ 20ರೂ ನೀಡುತ್ತಾರೆ. 20 ರೂಗಳಿಂದ ಆಹಾರವನ್ನು ಖರೀದಿಸಿದ ಗುರುನಾನಕ್ ರು ಅದನ್ನು ಹಂಚಿಬಿಡುತ್ತಾರೆ. ಈ ಬಗ್ಗೆ ತಂದೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಗುರುನಾನಕ್, "ಇದೇ ನಿಜವಾದ ಉದ್ಯಮ" ಎನ್ನುತ್ತಾರೆ, ಅಂದು ಗುರುನಾನಕ್ ಬಡವರಿಗೆ ಆಹಾರ ಹಂಚಿದ್ದ ಪ್ರದೇಶದಲ್ಲಿ ಸಚ್ಚಾ ಸೌದಾ( ನಿಜವಾದ ಉದ್ಯಮ) ಎಂಬ ಹೆಸರಿನ ಗುರುದ್ವಾರ ಇಂದಿಗೂ ಇದ್ದು ಗುರುನಾನಕ್ ಜಯಂತಿಯನ್ನು ಇಂದಿಗೂ ಭಕ್ತಿಯಿಂದ ಆಚರಿಸಲಾಗುತ್ತದೆ.  
SCROLL FOR NEXT