ಲಕ್ಷ್ಮಿ ದೇವಿ 
ಭಕ್ತಿ-ಭವಿಷ್ಯ

ಈ ಗುಣಗಳನ್ನು ಬಿಡದೇ ಇದ್ದರೆ ಲಕ್ಷ್ಮಿ ದೇವಿ ಒಲಿಯುವುದು ಕಷ್ಟ!

ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಒಲಿಸಿಕೊಂಡ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ.

ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಲೌಕಿಕದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. 

ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಒಲಿಸಿಕೊಂಡ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ. 

ಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮ ಮೇಲೆ ನಿರಂತರವಾಗಿಬೇಕೆಂದರೆ ಕೆಲವು ನಕಾರಾತ್ಮಕ ಅಂಶಗಳಿಂದ ದೂರ ಉಳಿಯಬೇಕಾಗುತ್ತದೆ. ಅಥವಾ ಅಂತಹ ಗುಣಗಳನ್ನು ಬಿಡಬೇಕಾಗುತ್ತದೆ. 
 
ಅನೈರ್ಮಲ್ಯ ಹಾಗೂ ಅವ್ಯವಸ್ಥೆ: ಶುಚಿತ್ವ, ಸ್ವಚ್ಛತೆ ಇಲ್ಲದ ಕಡೆ ಸಂಪತ್ತು ಇರುವುದಿಲ್ಲ ಎಂಬ ನಂಬಿಕೆ ಇದೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿಯ ಸಾನ್ನಿಧ್ಯವೂ ಇರುವುದಿಲ್ಲ ಎನ್ನುತ್ತಾರೆ. ಆದ್ದರಿಂದ ಸಂಪತ್ತು ವೃದ್ಧಿಯಾಗುವುದಕ್ಕೆ ಸ್ವಚ್ಛತೆಯೂ ಪ್ರಭಾವ ಬೀರಲಿದೆ 

ಸೋಮಾರಿತನ: ಯಾವುದೇ ಪ್ರಯತ್ನ ನಡೆಸದೇ ಏಕಾಏಕಿ ಸಂಪತ್ತು ಗಳಿಸಲು ಸಾಧ್ಯವಿಲ್ಲ. ಕಷ್ಟಪಡದೇ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾದರೆ ಅನಾರೋಗ್ಯದ ಸಂದರ್ಭ, ಅಥವಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಬೆಳಿಗ್ಗೆ ವಿಳಂಬವಾಗಿ ಏಳುವುದು, ಸಂಜೆ ವೇಳೆ ಮಲಗುವುದು ಸೇರಿದಂತೆ ಸೋಮಾರಿತನ ಬಿಡಬೇಕು ಎನ್ನುತ್ತದೆ ಹಿಂದಿನಿಂದಲೂ ನಡೆದುಬಂದಿರುವ ನಂಬಿಕೆಗಳು. 

ವಿಶ್ವಾಸವಿಡುವುದು: ನಿಮ್ಮನ್ನು ನೀವು ನಂಬದ ದೇವರನ್ನು ನಂಬಿ ಪ್ರಯೋಜನವಿಲ್ಲ ಎಂದಿದ್ದಾರೆ ಶ್ರೇಷ್ಠ ದಾರ್ಶನಿಕ ಸ್ವಾಮಿ ವಿವೇಕಾನಂದರು. ಅದರಂತೆಯೇ ಸಂಪತ್ತು, ಸಂವೃದ್ಧಿಯನ್ನು ಗಳಿಸಲು ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸ ಇರಬೇಕು ಹಾಗಾದಲ್ಲಿ ಮಾತ್ರ ಲಕ್ಷ್ಮಿ ದೇವಿಯೂ ನಮಗೆ ಒಲಿಯುತ್ತಾಳೆ, ಸದಾ ಕ್ರಿಯಾಶೀಲರಾಗಿರಬೇಕು. 

ಅತಿ ಆಸೆ: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ. ಅದರಂತೆ,  ಶ್ರೀಮಂತಿಕೆಯ ಆಸೆ ಗಳಿಸಿದಷ್ಟೂ ಮತ್ತಷ್ಟು ಗಳಿಸಬೇಕೆಂಬ ಅತಿ ಆಸೆಯೂ ಲಕ್ಷ್ಮಿಯ ಸಾನ್ನಿಧ್ಯ ಇಲ್ಲದಂತೆ ಮಾಡುತ್ತದೆ. ಆದ್ದರಿಂದ ಅತಿ ಆಸೆ, ಸ್ವಾರ್ಥ, ಕೋಪ ಇವುಗಳನ್ನು ತ್ಯಜಿಸುವ ಮೂಲಕ ಲಕ್ಷ್ಮಿಯ ಆಶೀರ್ವಾದಕ್ಕೆ ಪಾತ್ರರಾಗಬಹುದಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT