ಅಶ್ವತ್ಥ ವೃಕ್ಷ 
ಭಕ್ತಿ-ಜ್ಯೋತಿಷ್ಯ

ಧ್ಯಾನ, ಅಧ್ಯಾತ್ಮ ಸಿದ್ಧಿಗೆ ಪ್ರಶಸ್ತವಾಗಿರುವ ಅಶ್ವತ್ಥ ವೃಕ್ಷ ಹಿಂದಿನ ರಹಸ್ಯ

ಬಿಲ್ವಪತ್ರೆ ಶಿವನಿಗೆ, ತುಳಸಿ ವಿಷ್ಣುವಿಗೆ, ಗರಿಕೆ ಗಣಪತಿಗೆ ಪ್ರಿಯವಾಗಿರುವಂತೆ ಅಶ್ವತ್ಥ ವೃಕ್ಷ ನವಗ್ರಹಗಳ ಪೈಕಿ ಗುರು ಗ್ರಹಕ್ಕೆ ಸಂಬಂಧಿಸಿದ ವೃಕ್ಷವಾಗಿದೆ. ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಪುತ್ರ...

ಭಾರತೀಯ ಸಂಪ್ರದಾಯದಲ್ಲಿ ವೃಕ್ಷಗಳನ್ನೂ ದೇವರ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಹಲವು ವೃಕ್ಷಗಳು ವಿಶೇಷ ಮಹತ್ವ ಹೊಂದಿದ್ದು, ಅಧ್ಯಾತ್ಮ, ಉಲ್ಲಾಸದಾಯಕ ಜೀವನ ನಡೆಸಲು ಪೂರಕವಾದ ಸಾಮರ್ಥ್ಯ ಹೊಂದುವಂತೆ ಮಾಡುವ ಚಮತ್ಕಾರಿ ಶಕ್ತಿಗಳನ್ನು ಹೊಂದಿದೆ ಈ ಪೈಕಿ ಅಶ್ವತ್ಥ ವೃಕ್ಷ ಪ್ರಮುಖವಾದದ್ದು, ಈ ವೃಕ್ಷಕ್ಕೆ ಅರಳಿ, ಪಿಪ್ಪಲ ಎಂಬ ಹೆಸರುಗಳೂ ಇವೆ. 
ಪುರಾಣಗಳಲ್ಲಂತೂ ವೃಕ್ಷೋಪಾಸನೆಯ ಬಗ್ಗೆ ಸಾಕಷ್ಟು ಉಲ್ಲೇಖಗಳಿದ್ದು, ರಾಜ-ಮಹಾರಾಜರುಗಳು ವೃಕ್ಷೋಪಾಸನೆ ಮಾಡಿ ಮನೋಭಿಲಾಷೆಗಳನ್ನು ಈಡೇರಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಧಾರ್ಮಿಕ ಆಚರಣೆಯಲ್ಲಿ ವೃಕ್ಷಗಳಿಗೆ ಪೂಜನೀಯ ಸ್ಥಾನ ನೀಡುವ ಮೂಲಕ ಭಾರತೀಯ ಪರಂಪರೆ ಸಸ್ಯ-ವೃಕ್ಷ ಸಂಪತ್ತಿನ ರಕ್ಷಣೆಗೂ ಕಾರಣವಾಗಿದೆ.  
ಬಿಲ್ವಪತ್ರೆ ಶಿವನಿಗೆ, ತುಳಸಿ ವಿಷ್ಣುವಿಗೆ, ಗರಿಕೆ ಗಣಪತಿಗೆ ಪ್ರಿಯವಾಗಿರುವಂತೆ ಅಶ್ವತ್ಥ ವೃಕ್ಷ ನವಗ್ರಹಗಳ ಪೈಕಿ ಗುರು ಗ್ರಹಕ್ಕೆ ಸಂಬಂಧಿಸಿದ ವೃಕ್ಷವಾಗಿದೆ. ಈ ನಿಟ್ಟಿನಲ್ಲಿ ಗುರು ಗ್ರಹದ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಅಶ್ವತ್ಥ ವೃಕ್ಷವನ್ನು ಪೂಜಿಸಬೇಕೆಂಬ ನಂಬಿಕೆ ಇದೆ. 
ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಪುತ್ರ ಕಾರಕ ಅಂದರೆ ಸಂತಾನ ಅಥವಾ ಪುತ್ರ ಪ್ರಾಪ್ತಿಗೆ ಸೂಚಕವಾದ ಗ್ರಹವೆಂದು ಹೇಳಲಾಗಿದೆ. ಆದ್ದರಿಂದಲೇ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅಥವಾ ಸಂತಾನಕ್ಕೆ ಇಚ್ಛಿಸುವವರು ಗುರು ಗ್ರಹಕ್ಕೆ ಪ್ರಿಯವಾಗಿರುವ ಅಶ್ವತ್ಥ ವೃಕ್ಷವನ್ನು ಪೂಜಿಸಬೇಕೆಂದು ಹೇಳಲಾಗುತ್ತದೆ. ರಾಮಾಯಣದಲ್ಲಿಯೂ ಸಹ ಇದರ ಉಲ್ಲೇಖವಿದ್ದು, ಪುತ್ರಕಾಮೇಷ್ಟಿ ಯಾಗ ಮಾಡಿದ್ದ ದಶರಥ ಮಹಾರಾಜ ಸಹ ತನ್ನ ಪತ್ನಿಯರೊಂದಿಗೆ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅನುಗ್ರಹ ಪಡೆದಿದ್ದ ಎಂಬ ಮಾಹಿತಿ ಇದೆ. 
ಇನ್ನು ಸರ್ವಕಾಲಕ್ಕೂ ಸಲ್ಲುವ ಭಗವದ್ಗೀತೆಯಲ್ಲಿಯೂ ಅಶ್ವತ್ಥ ವೃಕ್ಷವನ್ನು ಬಣ್ಣಿಸಲಾಗಿದ್ದು, ಸಮಸ್ತ ವೃಕ್ಷಗಳಿಗೆ ಅಶ್ವತ್ಥ ವೃಕ್ಷವನ್ನು ರಾಜನನ್ನಾಗಿ ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೇ ಉಪನಿಷತ್ ಗಳಲ್ಲೂ ಅಶ್ವತ್ಥ ವೃಕ್ಷದ ಬಗ್ಗೆ ಉಲ್ಲೇಖಗಳಿದ್ದು, ಕಠೋಪನಿಷತ್ತಿನಲ್ಲಿ ಸಂಸಾರವನ್ನು ಅಶ್ವತ್ಥವೃಕ್ಷಕ್ಕೆ ಹೋಲಿಸಲಾಗಿದೆ.  ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ  ಅಗ್ರತಶ್ಯಿವರೂಪಾಯ ವೃಕ್ಷ ರಾಜಾಯತೇ ನಮಃ ಎಂಬ ಶ್ಲೋಕದ ಅರ್ಥದಂತೆ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯದ ನಿಯಾಮಕರಾದ ಬ್ರಹ್ಮ ವಿಷ್ಣು ಮಹೇಶ್ವರರು ವೃಕ್ಷರಾಜ ಅಶ್ವತ್ಥ ವೃಕ್ಷದಲ್ಲಿ ನೆಲಿಸಿದ್ದು, ದೈವದ ಸಾನ್ನಿಧ್ಯ ಇರುವುದರಿಂದ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಮನೋಭಿಲಾಶೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT