ಶಿವ 
ಭಕ್ತಿ-ಜ್ಯೋತಿಷ್ಯ

ಶ್ರಾವಣ ಮಾಸವನ್ನು ಶಿವನಿಗೆ ಸಮರ್ಪಿಸಿ, ಆರಾಧಿಸುವುದರ ಹಿನ್ನೆಲೆ, ಮಹತ್ವ!

ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ-ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ.

ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸವೂ ಇದಾಗಿದ್ದು, ಸನಾತನ ಪಂಚಾಂಗದ 5 ನೇ ತಿಂಗಳನ್ನು ಶಿವನಿಗೆ ಅರ್ಪಿಸಲಾಗಿದೆ. ಅಂದರೆ ಈ ಮಾಸದಲ್ಲಿ ಪರಮೇಶ್ವರನನ್ನು ಹೆಚ್ಚು ಆರಾಧಿಸಲಾಗುತ್ತದೆ. ವಿಶೇಷವಾಗಿ ಸೋಮವಾರಗಳಂದು ಈಶ್ವರನಿಗೆ ವಿಶೇಷ ಪೂಜೆ ನಡೆಯಲಿದ್ದು, ಶ್ರಾವಣ ಸೋಮವಾರದಂದು ನಡೆಯುವ ಶಿವ ಪೂಜೆಗೆ ವಿಶೇಷ ಮಹತ್ವವಿದೆ. 
ದಕ್ಷಿಣ ಭಾರತದಲ್ಲಿ ಶ್ರಾವಣ ಸೋಮವಾರ ಪೂಜೆಯಾದರೆ, ಇದು ಉತ್ತರ ಭಾರತದಲ್ಲಿ ಸಾವನ್ ಸೋಮವಾರ್ ವ್ರತ್ ಎಂದೇ ಪ್ರಸಿದ್ಧಿ ಪಡೆದಿದೆ. ಉತ್ತರ ಭಾರತದಲ್ಲಿ ಶ್ರಾವಣ ಸೋಮವಾರಂದು ಭಕ್ತಾದಿಗಳು ಉಪವಾಸವಿದ್ದು, ಸಾವನ್ ಶಿವರಾತ್ರಿ ಸಹ ನಡೆಯಲಿದೆ. ಶ್ರವಣಾ ನಕ್ಷತ್ರದಂದು ಈ ಮಾಸ ಪ್ರಾರಂಭವಾಗುವುದರಿಂದ ಇದಕ್ಕೆ ಶ್ರಾವಣ ಮಾಸ ಎಂದು ಹೇಳುತ್ತಾರೆ. ಶ್ರಾವಣ ಮಾಸದಲ್ಲಿ ಕೇವಲ ಹಬ್ಬಗಳಷ್ಟೇ ಅಲ್ಲದೇ, ಶುಭ ಕಾರ್ಯಗಳಿಗೆ ಮುಹೂರ್ತವೂ ಇರಲಿದ್ದು, ಶುಭಾರಂಭಕ್ಕೆ ಪ್ರಶಸ್ತವಾದ ಮಾಸ ಎಂಬ ನಂಬಿಕೆ ಇದೆ. 
ತಿಂಗಳಲ್ಲಿ ಬರುವ 16 ಸೋಮವಾರಗಳೂ ಸಹ ಉಪವಾಸವಿದ್ದು, ಶ್ರಾವಣ ಮಾಸವನ್ನು ಆಚರಿಸುವ ಪದ್ಧತಿ ಹಲವೆಡೆ ಇದ್ದು, ಈ ರೀತಿ ಮಾಡುವುದರಿಂದ ಮನಸ್ಸಿನ ಸಂಕಲ್ಪಗಳು ಈಡೇರುತ್ತದೆ ಎಂದು ಹೇಳಲಾಗುತ್ತೆ. ಶ್ರಾವಣ ಮಾಸದ ಸೋಮವಾರದಂದು ಶಿವನನ್ನು ಪೂಜಿಸುವುದಷ್ಟೇ ಅಲ್ಲದೇ ಮಂಗಳವಾರದಂದು ಪಾರ್ವತಿ ದೇವಿಯನ್ನು ಆರಾಧಿಸುವ ಮಂಗಳ ಗೌರಿ ವ್ರತಾಚರಣೆಯಿರುವುದು ಶ್ರಾವಣ ಮಾಸದ ಮತ್ತೊಂದು ವಿಶೇಷವಾಗಿದೆ. 
ಶ್ರಾವಣ ಮಾಸದಲ್ಲೇಕೆ ಶಿವನ ಆರಾಧನೆ?
ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ-ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ. ಸಮುದ್ರ ಮಂಥದ ವೇಳೆ ವಿಷ ಹೊರ ಬಂದಾಗ ಅದನ್ನು ಶಿವ ಸೇವಿಸಿ ಲೋಕಕ್ಕೆ ಎದುರಾಗಿದ್ದ ಕಂಟಕವನ್ನು ನಿವಾರಿಸುತ್ತಾನೆ. ಸಮುದ್ರ ಮಂಥದಲ್ಲಿನ ಈ ಘಟನೆ ನಡೆದಿದ್ದು ಶ್ರಾವಣ ಮಾಸದಲ್ಲಿ ಆದ್ದರಿಂದ ಈ ಮಾಸವನ್ನು ಶಿವನಿಗೆ ಸಮರ್ಪಿಸಿ ಆರಾಧಿಸಲಾಗುತ್ತದೆ ಎಂಬ ನಂಬಿಕೆ ಇದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT