ಮನಸ್ಸು ಬಹಳ ಚಂಚಲವಾದದ್ದು. ಅದನ್ನು ನಮ್ಮ ಹತೋಟಿಯಲ್ಲಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವಾದ ಕೆಲಸ.
ಬಾಲ್ಯದಿಂದಲೇ ಮನಸ್ಸನ್ನು ಚಂಚಲಗೊಳಿಸದೇ ಹತೋಟಿಯಲ್ಲಿಟ್ಟುಕೊಂಡರೆ ಅಂದುಕೊಂಡಿದ್ದನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದಾದ ಇಚ್ಛಾಶಕ್ತಿ ಸಿದ್ಧಿಸುತ್ತದೆ. ಆದರೆ ಬಾಲ್ಯದಲ್ಲಿ ಮಕ್ಕಳ ಮನಸ್ಸು ಹೆಚ್ಚು ಚಂಚಲವಾಗಿರುತ್ತದೆ. ಅಧ್ಯಯನ, ಓದಿನ ಒತ್ತಡದಿಂದ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಉಂಟಾಗಿ ಓದಿನ ಹೊರತಾದ ಕ್ರೀಡೆ ಅಥವಾ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಯವನ್ನು ನೀಡಲು ಸಾಧ್ಯವಾಗದ ರೀತಿಯ ವಾತಾವರಣ ನಿರ್ಮಾಣವಾಗಿದೆ.
ಮಕ್ಕಳನ್ನು ಧ್ಯಾನಾಸಕ್ತರನ್ನಾಗಿಸಿದರೆ ಮನಸ್ಸಿನ ಮೇಲೆ ಉಂಟಾಗುವ ಒತ್ತಡ ನಿಯಂತ್ರಣ ಹಾಗೂ ಏಕಾಗ್ರತೆ ಹೆಚ್ಚಿಸಲು ಧ್ಯಾನ ಸಹಕಾರಿಯಾಗಲಿದೆ. ಪೋಷಕರು ಮಕ್ಕಳನ್ನು ಧ್ಯಾನ ಮಾಡುವಂತೆ ಉತ್ತೇಜಿಸಿದರೆ ಅದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಉತ್ತಮಗೊಳ್ಳಲಿದೆ.
ಮೊದಲ ಹಂತದಲ್ಲಿ ಕಣ್ಣು ಮುಚ್ಚಿ ತಾವು ಏನನ್ನು ಸಾಧಿಸಬೇಕು ಎಂಬುದರ ಬಗ್ಗೆಯೇ ಏಕಾಗ್ರತೆಯಿಂದ ಚಿಂತನೆ ನಡೆಸುವಂತೆ ಮಕ್ಕಳಿಗೆ ತಿಳಿಸಿ, ಇದೇ ಮುಂದಿನ ದಿನಗಳಲ್ಲಿ ಮಕ್ಕಳಿಗೆ ತಾವು ಬೆಳೆಯುತ್ತಾ ಏನನ್ನು ಸಾಧಿಸಬೇಕು ಹಾಗೂ ಅದಕ್ಕೆ ಪೂರಕವಾದ ನಿರ್ಧಾರಗಳು ಹೇಗಿರಬೇಕು ಎಂಬುದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲು ಅನುಕೂಲವಾಗುತ್ತದೆ. ಒಮ್ಮೆ ಮಕ್ಕಳು ಧ್ಯಾನದ ಮೂಲಕ ಏಕಾಗ್ರತೆಯನ್ನು ಸಾಧಿಸುವಲ್ಲಿ ಯಶಸ್ವಿಯಾದರೆ ಅವರ ನಿರ್ಧಾರಗಳೂ ಸಹ ದೃಢವಾಗಿರುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics