ಭಕ್ತಿ-ಭವಿಷ್ಯ

ನವರಾತ್ರಿ 2017: 51 ಶಕ್ತಿಪೀಠಗಳು ಸೃಷ್ಟಿಯಾಗಿದ್ದು ಹೇಗೆ ಗೊತ್ತಾ?

Srinivas Rao BV
ಆಧ್ಯಾತ್ಮಿಕ ಸಾಧನೆಗಳಿಗೆ ಶಕ್ತಿಪೀಠಗಳು ಮಹತ್ವದ್ದೆನಿಸಿದೆ. ಇಂತಹ 51 ಶಕ್ತಿಪೀಠಗಳಿದ್ದು, ಭಾರತವಷ್ಟೇ ಅಲ್ಲದೇ ಶ್ರೀಲಂಕಾ, ನೇಪಾಳ, ಪಾಕಿಸ್ತಾನದಲ್ಲಿಯೂ ಸಹ ಶಕ್ತಿ ಪೀಠಗಳಿವೆ. 
ಶಕ್ತಿ ಪೀಠಗಳು ದುರ್ಗೆಯ ಸ್ವರೂಪವಾಗಿದ್ದು, ಶಕ್ತಿಪೀಠ ಸೃಷ್ಟಿಯಾಗಿದ್ದರ ಇತಿಹಾಸ ರಾಜ ದಕ್ಷಪ್ರಜಾಪತಿಯ ಕಾಲಕ್ಕೆ ಕರೆದೊಯ್ಯುತ್ತದೆ. ದಕ್ಷ ಪ್ರಜಾಪತಿ ವೃಷಪತಿ ಯಜ್ಞ ಮಾಡುತ್ತಾನೆ, ಆದರೆ ತನ್ನ ಮಗಳು ಸತಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದ ಶಿವನನ್ನು ಯಜ್ಞಕ್ಕೆ ಆಹ್ವಾನಿಸುವುದಿಲ್ಲ. ಆಹ್ವಾನವಿಲ್ಲದಿದ್ದರೂ ಸಹ ಸತಿ ತಂದೆ ಮಾಡುತ್ತಿದ್ದ ಯಜ್ಞಕ್ಕೆ ಹೋಗುತ್ತಾಳೆ. ಆದರೆ ಸತಿಗೆ ತಂದೆಯ ಮನೆಯಲ್ಲಿ ಗೌರವ ಸಿಗಲಿಲ್ಲ. 
ಇದರಿಂದ ಬೇಸರಗೊಂಡ ಸತಿ ಯಜ್ಞ ಕುಂಡಕ್ಕೆ ಜಿಗಿದು ತನ್ನನ್ನೇ ತಾನು ದಹಿಸಿಕೊಳ್ಳುತ್ತಾಳೆ. ಇದರಿಂದ ಆಕ್ರೋಶಗೊಂಡ ಶಿವ ದಕ್ಷನ ತಲೆಯನ್ನು ಕತ್ತರಿಸುತ್ತಾನೆ. ಸತಿಯ ಸಾವಿನಿಂದ ನೊಂದ ಶಿವ ರುದ್ರ ತಾಂಡವಾಡಲು ಪ್ರಾರಂಭಿಸುತ್ತಾನೆ. ರುದ್ರನ ನರ್ತನವನ್ನು ಕಂಡ ಇತರ ದೇವತೆಗಳು ಶಿವನನ್ನು ಸಮಾಧಾನ ಮಾಡುವಂತೆ ವಿಷ್ಣುವನ್ನು ಪ್ರಾರ್ಥಿಸುತ್ತಾರೆ. ಸ್ಥಿತಿಗೆ ಕಾರಣನಾದ ವಿಷ್ಣು ಸುದರ್ಶನ ಚಕ್ರದ ಮೂಲಕ ಸತಿಯ ದೇಹವನ್ನು 51 ಭಾಗಗಳನ್ನಾಗಿಸುತ್ತಾನೆ. ಈ 51 ಭಾಗಗಳು ಬಿದ್ದ 51 ಪ್ರದೇಶಗಳಲ್ಲಿ ಶಕ್ತಿ ಪೀಠಗಳು ಸೃಷ್ಟಿಯಾಯಿತು ಎಂದು ಹೇಳುತ್ತಾರೆ. 
SCROLL FOR NEXT