ಭಕ್ತಿ-ಭವಿಷ್ಯ

ಚಿಕ್ಕಬಳ್ಳಾಪುರದ ಇತಿಹಾಸ ಪ್ರಸಿದ್ಧ ರಂಗಸ್ಥಳದ ರಂಗನಾಥ ದೇವಾಲಯ

Srinivas Rao BV
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರಿಗೆ ಅನುಕ್ರಮವಾಗಿ ಸೃಷ್ಟಿ, ಸ್ಥಿತಿ, ಲಯಗಳ ಹೊಣೆಯಿದ್ದು, ಸೃಷ್ಟಿಯ ಸ್ಥಿತಿಗತಿಗಳನ್ನು ವಿಷ್ಣು ನಿಯಂತ್ರಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ.
ಸ್ಥಿತಿಯನ್ನು ನಿಯಂತ್ರಿಸುವ ವಿಷ್ಣುವಿಗೆ ಅನೇಕ ದೇವಾಲಯಗಳಿದ್ದು, ಬೆಂಗಳೂರಿನ ಬಳಿ ಇರುವ ರಂಗಸ್ಥಳವೂ ಅತ್ಯಂತ ಪ್ರಸಿದ್ಧ ಧಾರ್ಮಿಕ, ತೀರ್ಥ ಕ್ಷೇತ್ರವಾಗಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ರಂಗಸ್ಥಳವಿದ್ದು, ವಿಷ್ಣು ರಂಗನಾಥಸ್ವಾಮಿ
ರೂಪದಲ್ಲಿ ನೆಲೆಸಿದ್ದಾನೆ.
ವಿಜಯನಗರದ ಆಡಳಿತಾವಧಿಯ ಶಿಲ್ಪಕಲೆಗಳೂ ರಂಗಸ್ಥಳ ಪ್ರಸಿದ್ಧಿ ಪಡೆದಿದ್ದು, ಶ್ರೀರಂಗಂ, ಶ್ರೀರಂಗಪಟ್ಟಣ, ರಂಗಸ್ಥಳದಲ್ಲಿ ಏಕಕಾಲಕ್ಕೆ ರಂಗನಾಥ ಮೂರ್ತಿ ಪ್ರತಿಷ್ಠಾಪನೆಯಾಯಿತು ಎಂಬ ನಂಬಿಕೆ ಇದೆ.
ಗರ್ಭಗೃಹ ಬಿದಿರಿನಿಂದ ಮಾಡಲ್ಪಟ್ಟಿರುವ ಬುಟ್ಟಿಯ ರೀತಿಯಲ್ಲಿದ್ದು, ಇದಕ್ಕೂ ರಾಮಯಣಕ್ಕೂ ನಂಟಿದೆ ಎಂಬ ನಂಬಿಕೆ ಇದೆ. ರಾಮ ರಾವಣನನ್ನು ಸಂಹರಿಸಿದ ನಂತರ ನಡೆದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಅಲ್ಲಿದ್ದ ವಿಭೀಷಣನಿಗೆ ಬಿದಿರಿನ ಬುಟ್ಟಿಯಲ್ಲಿಟ್ಟು ರಂಗನಾಥನ ವಿಗ್ರಹವನ್ನು ನೀಡುತ್ತಾನೆ, ಇದನ್ನು ವಿಭೀಷಣ ಈಗಿನ ಶ್ರೀರಂಗಂ ಇರುವ ಪ್ರದೇಶದಲ್ಲಿ ಪ್ರತಿಷ್ಠಾಪನೆ ಮಾಡಬೇಕಿತ್ತು. ಆದರೆ ಋಷಿಗಳು ಭೂದೇವಿ ಸಮೇತ ಇರುವ ರಂಗನಾಥನ ವಿಗ್ರಹವನ್ನು ಈಗಿನ ರಂಗಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವಂತೆ ಸೂಚನೆ ನೀಡುತ್ತಾರೆ. ಆದ್ದರಿಂದ ಇಲ್ಲಿನ ದೇವರು ಬಿದಿರಿನ ಬುಟ್ಟಿಯಲ್ಲಿರುವಂತೆಯೇ ಪ್ರತಿಷ್ಠಾಪನೆಗೊಂಡಿದೆ ಎಂಬ ಪ್ರತೀತಿ ಇದೆ.
SCROLL FOR NEXT