ನಿಮಿಷಾಂಬ ದೇವಾಲಯ 
ಭಕ್ತಿ-ಜ್ಯೋತಿಷ್ಯ

ನಿಮಿಷಾಂಬ ಸ್ವರೂಪಿ ಪಾರ್ವತಿ ದೇವಿಗೆ ಆ ಹೆಸರು ಬಂದಿರುವ ಹಿನ್ನೆಲೆ, ಘಟನೆ ಗೊತ್ತೇ?

ಮೈಸೂರಿನಿಂದ ಕೆಲವೇ ಕಿಮೀ ದೂರದಲ್ಲಿರುವ ಶ್ರೀರಂಗಪಟ್ಟಣ ಎಂದೊಡನೆ ನಿಮಿಷಾಂಬ ದೇವಿಯ ನೆನಪಾಗುತ್ತದೆ. ನಿಮಿಷಾಂಬ ದೇವಿ ಕಾವೇರಿ ನದಿ ದಡದಲ್ಲಿರುವ ಪ್ರಸಿದ್ಧ ದೇವಾಲಯ.

ಮೈಸೂರು ಸಾಂಸ್ಕೃತಿಕ ನಗರಿ, ನಮ್ಮ ಸಂಸ್ಕೃತಿ, ಧಾರ್ಮಿಕತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವ ಸಾಂಸ್ಕೃತಿಕ ರಾಜಧಾನಿ. ಹಲವು ಶ್ರೀಕ್ಷೇತ್ರಗಳಿರುವ ಪ್ರದೇಶವೂ ಹೌದು. ಮೈಸೂರು ಎಂದೊಡನೆ ಮಹಿಷಾಸುರನನ್ನು ಸಂಹಾರ ಮಾಡಿದ ಚಾಮುಂಡೇಶ್ವರಿ ದೇವಿಯ ನೆನಪಾಗುತ್ತದೆ. ಹಾಗೆಯೇ ಮೈಸೂರಿನಿಂದ ಕೆಲವೇ ಕಿಮೀ ದೂರದಲ್ಲಿರುವ ಶ್ರೀರಂಗಪಟ್ಟಣ ಎಂದೊಡನೆ ನಿಮಿಷಾಂಬ ದೇವಿಯ ನೆನಪಾಗುತ್ತದೆ. ನಿಮಿಷಾಂಬ ದೇವಿ ಕಾವೇರಿ ನದಿ ದಡದಲ್ಲಿರುವ ಪ್ರಸಿದ್ಧ ದೇವಾಲಯ.    
ನದಿಗಳಲ್ಲಿ ಮಾಘ ಸ್ನಾನ ಮಾಡಿದರೆ ವಿಶೇಷ ಎನ್ನುವ ನಂಬಿಕೆ ಇದೆ, ಶ್ರೀಚಕ್ರ ಸ್ವರೂಪಿಯಾದ ನಿಮಿಷಾಂಬ ದೇವಿಯ ದರ್ಶನಕ್ಕೆ ಬರುವವರ ಸಂಖ್ಯೆ ಸಾಮಾನ್ಯವಾಗಿಯೇ ಹೆಚ್ಚಿರುತ್ತದೆ. ಇನ್ನು ಮಾಘಮಾಸ ಬಂತೆಂದರೆ ದೇವಿಯ ಸನ್ನಿಧಿಯಲ್ಲಿ ಕಾವೇರಿ ನದಿಯಲ್ಲಿ ಮಾಘ ಸ್ನಾನ ಮಾಡಿ ದರ್ಶನ ಪಡೆಯುವವರ ಸಂಖ್ಯೆ ಎಂದಿಗಿಂತ ಹೆಚ್ಚಿರುತ್ತದೆ. 
ಈ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಪಾರ್ವತಿ ದೇವಿಗೆ ನಿಮಿಷಾಂಬ ಎಂಬ ಹೆಸರು ಬರಲು ಕಾರಣ ಆಕೆ ಸಂಕಷ್ಟವನ್ನು ನಿಮಿಷದಲ್ಲೇ ಪರಿಹಾರ ಕಂಡುಕೊಳ್ಳುವುದಕ್ಕೆ ದಾರಿ ತೋರಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ದೇವಿಗೆ ನಿಮಿಷಾಂಬ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. 
ಸೋಮವಂಶ ಮುಕ್ತರಸ ಎಂಬ ರಾಜವಂಶದ ಅರಸು ಮುಕ್ತರಾಜನಿಗೆ ದಾನವರ ವಿರುದ್ಧ ನಡೆಸುವ ಯುದ್ಧದಲ್ಲಿ ಅಗತ್ಯವಿದ್ದರೆ ನಿಮಿಷ ಮಾತ್ರದಲ್ಲಿ ಸಹಾಯಕ್ಕೆ ಬರುವುದಾಗಿ ದೇವಿ ವರ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಶ್ರೀಚಕ್ರ ಸಹಿತವಾಗಿ ಪ್ರತಿಷ್ಠಾಪನೆಗೊಂಡ ದೇವಿಗೆ ನಿಮಿಷಾಂಬ ಎಂಬ ಹೆಸರು ಬಂದಿದ್ದು, ಅದೇ ದೇವಾಲಯದಲ್ಲಿರುವ ಈಶ್ವರನಿಗೆ ಮುಕ್ತಿಕೇಶ್ವರ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು 300-400 ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಪುನರ್ ಪ್ರತಿಷ್ಠಾಪಿಸಿ ಅಭಿವೃದ್ಧಿಪಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ!

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ