ಭಕ್ತಿ-ಭವಿಷ್ಯ

ಬಲಿಪಾಡ್ಯಮಿ ದಿನ ಗೋಪೂಜೆ ಏಕೆ ಮಾಡುತ್ತಾರೆ?

Sumana Upadhyaya

ಹಸುವನ್ನು ನಾವು ಲಕ್ಷ್ಮಿಗೆ ಹೋಲಿಸುತ್ತೇವೆ, ಯಾವುದೆಲ್ಲ ಮಾತೃಸ್ವರೂಪವೋ ಅವೆಲ್ಲವೂ ನಮಗೆ ಲಕ್ಷ್ಮಿ. ಅದು ಭೂಮಾತೆ ಆಗಿರಬಹುದು, ಕಾಮಧೇನು ಆಗಿರಬಹುದು. ಹಸುವಿಲ್ಲದೆ ಮನುಷ್ಯನಿಗೆ ಜೀವನ ಇಲ್ಲ, ಹಸುವಿನಿಂದ ಸಿಗುವ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ, ಗಂಜಳ, ಸಗಣಿ ಎಲ್ಲವೂ ಉಪಯೋಗವಾಗುತ್ತದೆ.

ಹೀಗೆ ಎಲ್ಲವನ್ನೂ ಮನುಷ್ಯನಿಗೆ ನೀಡುವ ಮುಗ್ಧವಾದ ಪ್ರಾಣಿ ಹಸುವನ್ನು ಲಕ್ಷ್ಮಿಪೂಜೆ ಮಾಡುವ ದಿನ ಗೋಪೂಜೆ ಎಂದು ಹಸು, ಕರುಗಳಿಗೆ ಆರತಿ ಬೆಳಗಿ, ತಿನಿಸು ಕೊಡುತ್ತೇವೆ. 

ಇದಕ್ಕೆ ಹಿನ್ನೆಲೆ ಗೋವತ್ಸ ದ್ವಾದಶಿ ಎಂದು, ಗೋವತ್ಸ ಎಂದರೆ ಹಸುವಿನ ಕರು, ಹೊಸದಾಗಿ ಹುಟ್ಟಿದ ಕರುವಿಗೆ ಪೂಜೆ ಮಾಡುತ್ತೇವೆ, ಅದನ್ನು ಬಲಿಪಾಡ್ಯಮಿ ದಿನ ಗೋಪೂಜೆ ಮಾಡುತ್ತೇವೆ. 

ಇಂದಿನ ಯಾತ್ರಿಕ ಬದುಕಿನಲ್ಲಿ ನಗರ ಶೈಲಿಯ ಜೀವನದಲ್ಲಿ ಪ್ರಕೃತಿ ಸಾಕು ಪ್ರಾಣಿಗಳನ್ನು ವರ್ಷದಲ್ಲಿ ಒಂದು ದಿನವನ್ನಾದರೂ ಆಚರಿಸಿ ಲಕ್ಷ್ಮಿದೇವಿಯನ್ನು ನೆನೆಯೋಣ ಎನ್ನುವುದೇ ಇವೆಲ್ಲ ಆಚರಣೆಗಳ ಮತ್ತೊಂದು ಉದ್ದೇಶವಾಗಿದೆ.

ಗೋಪೂಜೆ ಮಾಡಿದ ಬಳಿಕ ಗೋವಿಗೆ ಅಕ್ಕಿಯಿಂದ ಮಾಡಿದ ಕೊಟ್ಟಿಗೆ, ದೋಸೆ, ಸಿಹಿತಿನಿಸುಗಳನ್ನು ನೀಡಲಾಗುತ್ತದೆ. 

SCROLL FOR NEXT