ಭಕ್ತಿ-ಭವಿಷ್ಯ

ನವರಾತ್ರಿ ಸಮಯದಲ್ಲಿ ಉಪವಾಸದ ಮಹತ್ವ

Sumana Upadhyaya

ಎಲ್ಲಾ ಹಬ್ಬಗಳಲ್ಲಿಯೂ ವ್ರತ ಮತ್ತು ಉತ್ಸವ ಎಂದು ಎರಡು ಇರುತ್ತದೆ. ವ್ರತ ಎಂದರೆ ಅಂತರ್ಮುಖವಾಗಿ ಮಾಡುವುದು, ಉತ್ಸವ ಎಂದರೆ ಎಲ್ಲರೂ ಸೇರಿ ಆಚರಿಸುವುದು. 

ಹಿಂದಿನ ದಿನ ರಾತ್ರಿಯಿಂದ ಹಿಡಿದು ಬೆಳಗ್ಗೆ ಎದ್ದ ತಕ್ಷಣ ವ್ರತ ಪ್ರಾರಂಭವಾಗುತ್ತದೆ, ಮೂರು ದಿನಗಳ ವ್ರತವದು. ಹಿಂದಿನ ದಿನ ರಾತ್ರಿಯೇ ವ್ರತ ಆರಂಭಿಸಿ ಬ್ರಹ್ಮಚರ್ಯ ಪಾಲನೆ ಮಾಡಿ, ಬೆಳಗ್ಗೆಯಿಂದ ಮೌನಾಚರಣೆ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಚೀರ್ಭೂತರಾಗುವುದು, ಶುದ್ಧವಾದ ಮಡಿ ವಸ್ತ್ರಗಳನ್ನು ಉಟ್ಟುಕೊಂಡು ದೇವರ ಮುಂದೆ ಕುಳಿತು ಜಪ-ತಪ ಮಾಡುವುದು, ಪೂಜೆ-ಧ್ಯಾನ ಮಾಡುವುದು, ಪೂಜೆ ಮುಗಿಯುವವರೆಗೆ ಏನೂ ತಿನ್ನದೆ ಉಪವಾಸ ಇರುವುದು.

ಕೆಲವರು ಸಾಯಂಕಾಲ ಸೂರ್ಯಾಸ್ತದವರೆಗೆ ಏನೂ ಸೇವಿಸುವುದಿಲ್ಲ. ಇನ್ನು ಕೆಲವರು ಚಂದ್ರೋದಯದವರೆಗೆ ಉಪವಾಸ ಆಚರಿಸುತ್ತಾರೆ. ಕೆಲವರು 24 ಗಂಟೆ ಏನೂ ತಿನ್ನುವುದಿಲ್ಲ. ಭಕ್ತರ ಯಥಾ ಶಕ್ತಿ, ಯಥಾ ಪ್ರೀತಿಗಳಿಗನುಸಾರವಾಗಿ ಉಪವಾಸ ಕೈಗೊಳ್ಳುವುದು ಬೇರೆ ಬೇರೆಯಾಗಿರುತ್ತದೆ. 

ಕೆಲವರು 12 ದಿನ ಉಪವಾಸ ಆಚರಿಸುತ್ತಾರೆ. ನವರಾತ್ರಿ ಹಿಂದಿನ ದಿನ ಅಮಾವಾಸ್ಯೆಯಿಂದ ಹಿಡಿದು ಒಂಭತ್ತು ದಿನ, ವಿಜಯದಶಮಿ ಮುಗಿದ ಮೇಲೆ ಏಕಾದಶಿ ಸೇರಿ 12 ದಿನ ಉಪವಾಸ ವ್ರತ ಕೈಗೊಳ್ಳುತ್ತಾರೆ. ಕೆಲವರು ಏನೂ ಸೇವಿಸುವುದಿಲ್ಲ, ಇನ್ನು ಕೆಲವರು ನೀರು ಮಾತ್ರ ಸೇವಿಸುತ್ತಾರೆ, ಕೆಲವರು ಹಾಲು-ಹಣ್ಣು ಹಂಪಲು ಸೇವಿಸಿದರೆ ಇನ್ನು ಕೆಲವರು ಕೊಳೆಯ ಪದಾರ್ಥ ಸೇವಿಸುವುದಿಲ್ಲ.

ಇನ್ನು ಕೆಲವರು ಒಂದು ಹೊತ್ತು ಮಾತ್ರ ಅನ್ನ ಸೇವಿಸುತ್ತಾರೆ, ಉಪ್ಪು-ಖಾರವನ್ನು ಊಟದಲ್ಲಿ ಹೆಚ್ಚು ಸೇವಿಸುವುದಿಲ್ಲ, ಕೆಲವು ಮಾಂಸಾಹಾರಿಗಳು ಮಾಂಸ ಸೇವನೆಯನ್ನು ಈ ಸಮಯದಲ್ಲಿ ಮಾಡುವುದಿಲ್ಲ. ಅವರವರು ಅಂದುಕೊಂಡಂತೆ ಇಚ್ಛಾನುಸಾರ, ಅವರವರ ಶ್ರದ್ಧೆ, ಅಭ್ಯಾಸ, ಶಕ್ತ್ಯಾನುಸಾರ ಉಪವಾಸ ಮಾಡುತ್ತಾರೆ ಎಂದು ಉಪವಾಸ ಬಗ್ಗೆ ವಿವರಣೆ ನೀಡುತ್ತಾರೆ ಧಾರ್ಮಿಕ, ಆಧ್ಯಾತ್ಮಿಕ ಚಿಂತಕಿ ಡಾ. ಆರತಿ ವಿ.ಬಿ.

SCROLL FOR NEXT