ಭಕ್ತಿ-ಭವಿಷ್ಯ

ನವರಾತ್ರಿಯ ಒಂಭತ್ತು ದಿನ ಏನೇನು ಭಕ್ಷ-ಭೋಜ್ಯಗಳು?

Sumana Upadhyaya

ಪ್ರಾಂತೀಯಗಳಿಗನುಗುಣವಾಗಿ ಭಕ್ತರು ದಸರಾ ಸಮಯದಲ್ಲಿ ವಿಶೇಷ ತಿಂಡಿ-ತಿನಿಸುಗಳನ್ನು ಮಾಡಿ ದೇವಿಗೆ ನೈವೇದ್ಯ-ಪೂಜೆ ಮಾಡಿ ಸೇವಿಸುತ್ತಾರೆ. 

ವಿವಿಧ ಅನ್ನಗಳ ನೈವೇದ್ಯ: ಕರ್ನಾಟಕದಲ್ಲಿ ದೇವಿಗೆ 5 ವಿಧದ ಅನ್ನದ ನೈವೇದ್ಯವನ್ನು ನೀಡಲಾಗುತ್ತದೆ. ಬೆಲ್ಲ ಹಾಕಿದ ಅನ್ನ, ಅರಶಿನದ ಅನ್ನ ಹರಿದ್ರಾಣ, ಕೇಸರಿ ಅನ್ನ, ಮೊಸರನ್ನ, ತರಕಾರಿಗಳನ್ನು ಹಾಕಿ ಶಾಖಾನ್ನಗಳನ್ನು ತಯಾರಿಸುತ್ತಾರೆ. ನಂತರ ಒಬ್ಬಟ್ಟು, ಕರ್ಜಿಕಾಯಿ, ಲಡ್ಡು, ಅಂಬಡೆ, ಪಾಯಸ, ಅನ್ನ ಇತ್ಯಾದಿ ಸಿಹಿ ತಿನಿಸು, ಎಣ್ಣೆ ತಿಂಡಿಗಳನ್ನು ಸಹ ಮಾಡಲಾಗುತ್ತದೆ. 

ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಸಮಯದಲ್ಲಿ ರಸಗುಲ್ಲ ನೈವೇದ್ಯ ಮಾಡಿದರೆ, ಗುಜರಾತ್ ರಾಜ್ಯದಲ್ಲಿ ದೋಕ್ಲ ಮಾಡುತ್ತಾರೆ. ಹಿಮಾಲಯ ಕಡೆ ಹೋದರೆ ಸಜ್ಜಿಗೆ ನೈವೇದ್ಯವನ್ನು ಅಮ್ಮನವರಿಗೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಬೇರೆ ತಿಂಡಿಗಳನ್ನು ಮಾಡುತ್ತಾರೆ. ಹಬ್ಬದ ಸಮಯದಲ್ಲಿ ತಿಂಡಿ-ತಿನಿಸುಗಳನ್ನು ತಯಾರಿಸುವುದು ಪ್ರಾಂತೀಯ.

ಕರ್ನಾಟಕದಲ್ಲಿ ಹೇಗೆ?: ಕರ್ನಾಟಕದಲ್ಲಿಯೂ ಮನೆ-ಮನೆಗಳಲ್ಲಿ ಒಂದೊಂದು ರೀತಿಯ ಭಕ್ಷ್ಯ-ಭೋಜ್ಯಗಳನ್ನು ತಯಾರಿಸಲಾಗುತ್ತದೆ. ನವದುರ್ಗೆಯರಲ್ಲಿ ಪ್ರತಿದಿನ ಆಯಾ ದೇವಿಯರ ಕುಂಕುಮಾರ್ಚನೆ ಮಾಡಿ ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಸಂಜೆಯ ವೇಳೆಗೆ ಮುತ್ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು ಬಾಗಿನ, ತೆಂಗೊಳು, ಚಕ್ಕುಲಿ, ಉಂಡೆ ಕೊಟ್ಟು ಆರತಿ ಮಾಡುವ ಪದ್ಧತಿ ಇದೆ.

ಮುತ್ತೈದೆಯರು, ಕನ್ಯೆಯರು, ಪುಟ್ಟ ಮಕ್ಕಳು ಒಬ್ಬರು ಮತ್ತೊಬ್ಬರ ಮನೆಗೆ ಹೋಗುತ್ತಾ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ. ಇದರಿಂದ ನಮ್ಮ ಸಂಪ್ರದಾಯ, ಆಚರಣೆಗಳು ಉಳಿಯುವುದಲ್ಲದೆ ಮುಂದಿನ ಜನಾಂಗಕ್ಕೂ ತೋರಿಸಿಕೊಟ್ಟು ಮಕ್ಕಳಲ್ಲಿ ಪ್ರಜ್ಞೆ ಮೂಡಿದಂತಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಮತ್ತು ಆಧ್ಮಾತ್ಮಿಕ ಚಿಂತಕಿ ಡಾ. ವಿ.ಬಿ.ಆರತಿ.

SCROLL FOR NEXT