ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಕರ್ನಾಟಕ ಹಾಗೂ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಸೌಪರ್ಣಿಕಾ ನದಿಯ ದಂಡೆಯ ಮೇಲೆ ದೇವಾಲಯವಿದೆ, ಮೂಕಾಂಬಿಕೆ ಹೆಸರಿನಲ್ಲಿ ಭಗವಂತನಿಗೆ ಸಲ್ಲಿಸುವ ಒಂದು ಮಹಾಕ್ಷೇತ್ರವಾಗಿದೆ.
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಕ್ಷೇತ್ರವು ಪರಶುರಾಮನ ಸೃಷ್ಟಿಯಲ್ಲಿನ ಏಳು ಮೋಕ್ಷಧಾಮಗಳಲ್ಲಿ ಒಂದಾಗಿದೆ. ಶ್ರೀ ಕ್ಷೇತ್ರವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದರು. ಇದು ಶಕ್ತಿ ದೇವಿಯನ್ನು ಪೂಜಿಸುವ ದೇವಾಲಯವಾಗಿದೆ. ಎಲ್ಲಾ ಜಾತಿ ಮತಸ್ಥರಿಗೂ ಇಲ್ಲಿ ದರ್ಶನ ಇರುತ್ತದೆ. 'ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ' ಎಂಬ ಮೂರು ದೇವತೆಗಳ ಐಕ್ಯರೂಪಿಣಿಯಾಗಿ ಮೂಕಾಂಬಿಕಾ ಎಂಬ ಹೆಸರಿನಲ್ಲಿ ದೇವಿಯನ್ನು ಆರಾಧಿಸಲ್ಪಡುತ್ತದೆ. ಶ್ರೀಚಕ್ರಪೀಠದಲ್ಲಿ ಭಗವಂತನ ಜೊತೆಗೆ ತ್ರಿಮೂರ್ತಿಗಳನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಶಿವಶಕ್ತಿ-ತ್ರಿಮೂರ್ತಿ ರೂಪದಲ್ಲಿ ಐಕ್ಯವಾಗಿರುವುದರಿಂದ ಗ್ರಹಣ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚದೇ ವಿಶೇಷ ಪೂಜೆ ಸಲ್ಲಿಸುವ ಏಕೈಕ ದೇವಾಲಯವಾಗಿದೆ. ದೇವಿಯನ್ನು ಶಕ್ತಿ ಮತ್ತು ಶಿವ ಎರಡರ ಸಮ್ಮಿಲನವಾದ ಜ್ಯೋತಿರ್-ಲಿಂಗ ರೂಪದಲ್ಲಿ ಇಲ್ಲಿ ಕಾಣಬಹುದು. ಇಲ್ಲಿ, ದೇವಿಯನ್ನು ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿ ಎಂದು 3 ರೂಪಗಳಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ಜ್ಯೋತಿರ್ಲಿಂಗದ ಬಲ ಅರ್ಧವು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸುತ್ತದೆ. ಎಡ ಅರ್ಧವು ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ ದೇವತೆಗಳನ್ನು ಪ್ರತಿನಿಧಿಸುತ್ತದೆ.
ಮೂಕಾಂಬಿಕೆ ಹೆಸರು ಬರಲು ಕಾರಣ
ಆದಿಶಕ್ತಿಯ ವಾಸಸ್ಥಾನವೆಂದು ಭಾವಿಸಲ್ಪಡುವ ಶ್ರೀಚಕ್ರಕ್ಕೆ ಇಲ್ಲಿ ಅತ್ಯಂತ ಮಹತ್ವವಿದೆ. ಈ ದೇವಾಲಯದಲ್ಲಿ ಕೌಮಾಸುರ ಎಂಬ ರಾಕ್ಷಸನನ್ನು ದೇವಿಯಿಂದ ಕೊಲ್ಲಲಾಯಿತು ಎಂದು ದೇವಾಲಯಕ್ಕೆ ಸಂಬಂಧಿಸಿದ ಪುರಾಣ ಕಥೆ ಹೇಳುತ್ತದೆ. ಕೌಮಾಸುರನು ಕೆಲವು ಶಕ್ತಿಗಳನ್ನು ಪಡೆಯಲು ತೀವ್ರ ತಪಸ್ಸು ಮಾಡಿದ್ದನು, ಅದು ಅವನನ್ನು ಶಕ್ತಿಯುತ ಮತ್ತು ಅಜೇಯನನ್ನಾಗಿ ಮಾಡುತ್ತದೆ. ಆದರೆ ಪಾರ್ವತಿ ದೇವಿಯು ಅವನ ದುಷ್ಟ ಉದ್ದೇಶಗಳನ್ನು ಗ್ರಹಿಸಿ ಆತನಿಗೆ ಮಾತು ಬಾರದಂತೆ ಮಾಡುತ್ತಾಳೆ. ಈ ಕಾರಣಕ್ಕಾಗಿ, ಕೌಮಾಸುರನನ್ನು ಮೂಕಾಸುರ ಎಂದು ಕರೆಯಲಾಯಿತು. ಆದರೂ ಕೂಡ ಮೂಕಾಸುರ ತನ್ನ ಮೊಂಡುತನವನ್ನು ದುಷ್ಟ ಕೆಲಸವನ್ನು ನಿಲ್ಲಿಸಲಿಲ್ಲ. ಅಲ್ಲಿನ ಜನರಿಗೆ ತೊಂದರೆಯ ಮೇಲೆ ತೊಂದರೆ ನೀಡಲು ಆರಂಭಿಸಿದನು. ಇದನ್ನು ಸಹಿಸಲಾರದೆ ತಾಯಿ ಪಾರ್ವತಿಯು ಶಕ್ತಿಯುತ ರೂಪವನ್ನು ಪಡೆದುಕೊಂಡು ಆತನನ್ನು ಸಂಹಾರ ಮಾಡುತ್ತಾಳೆ. ಅವನನ್ನು ಕೊಂದ ನಂತರ, ಪಾರ್ವತಿಯನ್ನು ಇಲ್ಲಿ ಮೂಕಾಂಬಿಕಾ ಎಂದು ಕರೆಯಲಾಯಿತು. ಕೊಲ್ಲೂರಿನಲ್ಲಿರುವ ದೇವಿಯನ್ನು ದೇವಿ ಮೂಕಾಂಬಿಕಾ ಎಂದು ಕರೆಯಲಾಗುತ್ತದೆ ಮತ್ತು ಕೊಲ್ಲೂರು ಮೂಕಾಂಬಿಕಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ದೇವಿಗೆ ವಿಶೇಷ ಪೂಜೆ
ಕೊಲ್ಲೂರು ಮೂಕಾಂಬಿಕಾ ದೇವಾಲಯವು ಶತಮಾನಗಳಿಂದ ದೇವಿ ಶಕ್ತಿಯ ಆರಾಧನೆಯ ನೆಲೆಯಾಗಿದೆ. ಪ್ರತಿದಿನ ಬೆಳಿಗ್ಗೆ 5.00 ಗಂಟೆಗೆ ನಿರ್ಮಲ್ಯ ಪೂಜೆ ನಡೆಯುತ್ತದೆ ಮತ್ತು ಆ ಸಮಯದಲ್ಲಿ ಭಕ್ತರಿಗೆ ಸ್ವಯಂಭೂ ಲಿಂಗವನ್ನು ನೋಡುವ ಅವಕಾಶವಿದೆ. ಪ್ರತಿದಿನ ದೇವಾಲಯದಲ್ಲಿ ತ್ರಿಕಾಲ ಪೂಜೆಯನ್ನು ನಡೆಸಲಾಗುತ್ತದೆ. ಸಾವಿರಾರು ಭಕ್ತರು ತಮ್ಮ ಸಮಸ್ಯೆಗಳು, ನೋವುಗಳು ಮತ್ತು ಕಷ್ಟಗಳಿಂದ ಸಾಂತ್ವನ ಪಡೆಯಲು, ಪ್ರಮುಖವಾಗಿ ವಿದ್ಯಾರ್ಜನೆಗಾಗಿ ಹಾಗೂ ತಮ್ಮ ಧಾರ್ಮಿಕ ವ್ರತಗಳನ್ನು ಪೂರೈಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಡಿಗ ಎಂಬ ಹೆಸರಿನಿಂದ ಕರೆಯಲ್ಪಡುವ ಒಂದು ಬ್ರಾಹ್ಮಣ ಸಮುದಾಯವು ಈ ದೇವಾಲಯದ ತಂತ್ರಿ, ಹಾಗೂ ಪ್ರಮುಖ ಸ್ಥಾನಗಳನ್ನು ಅಲಂಕರಿಸುತ್ತಿದೆ. ವಿವಾಹಿತರಾದವರು ಮಾತ್ರ ಅಮ್ಮನ ಪೂಜೆ ನೇರವೇರಿಸಲು ಅವಕಾಶವಿರುತ್ತದೆ.
ದೇವಾಲಯವು ಶಿವ-ಶಕ್ತಿಯು ಐಕ್ಯಭಾವದಿಂದ ಕೂಡಿರುತ್ತದೆ. ಫಾಲ್ಗುಣಮಾಸದಲ್ಲಿ ನಡೆಯುವ ಒಂಬತ್ತು ದಿನಗಳ ಉತ್ಸವವಾದ ದೇವಾಲಯದ ಪ್ರಮುಖ ವಿಶೇಷವಾಗಿದೆ. ರಥೋತ್ಸವವು ಎಂಟು ದಿನಗಳು ನಡೆಯುತ್ತದೆ. ಕರ್ನಾಟಕ ಮಾದರಿಯಲ್ಲಿ ನಡೆಸಲ್ಪಡುವ ಉತ್ಸವವಾದರೂ ದಕ್ಷಿಣ ರಾಜ್ಯಗಳ ಭಕ್ತರು ಅಧಿಕ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುತ್ತಾರೆ. ಒಂಭತ್ತು ದಿನವೂ ವಿಶೇಷ ಪೂಜೆಗಳು ನಡೆಯುತ್ತವೆ. 9ನೇ ದಿನದಲ್ಲಿ ದೇವಾಲಯದಲ್ಲಿ ಮಹಾರಥೋತ್ಸವವನ್ನು ಆಚರಿಸಲಾಗುತ್ತದೆ. ದೇವಿಯ ಜನ್ಮನಕ್ಷತ್ರ ಫಾಲ್ಗುಣಮಾಸ ಎಂದು ನಂಬಲಾಗಿದೆ. ಮೂಕಾಂಬಿಕೆ ಜನ್ಮಾಷ್ಟಮಿ ದಿನ ಎಂದಿನಂತೆ ನಿತ್ಯ ಪೂಜೆ ನಂತರ ಶತರುದ್ರಾಭಿಷೇಕವು ಮಧ್ಯಾಹ್ನ ನಡೆಯುತ್ತದೆ. ಈ ದಿನದ ನಂತರ ಕೃಷ್ಣಾಷ್ಟಮಿ ಮತ್ತು ಶಿವರಾತ್ರಿ ಹೊರತುಪಡಿಸಿ ಇತರ ಎಲ್ಲ ಉತ್ಸವಗಳು ನವರಾತ್ರಿ ಬರುವವರೆಗೆ ನಡೆಯುವುದಿಲ್ಲ.
ಡಾ. ಪಿ.ಬಿ ರಾಜೇಶ್, ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ