ನವರಾತ್ರಿಯ 4ನೇ ದಿನದಂದು ಕೂಷ್ಮಾಂಡ ದೇವಿಯ ಪೂಜೆ ಮಾಡಲಾಗುತ್ತದೆ. ಕೂಷ್ಮಾಂಡ ಎಂದರೆ ಕುಂಬಳಕಾಯಿ ಎಂದರ್ಥ. ಅಷ್ಟಭುಜಗಳನ್ನು ಹೊಂದಿರುವ ಕಮಂಡಲ, ಧನುಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ತನ್ನ ಎಂಟು ಕೈಗಳಲ್ಲಿ ಒಂದೊಂದನ್ನು ಹಿಡಿದು ನಿಂತಿರುವ ಈ ದೇವಿಯನ್ನು ಭಕ್ತಿಯಿಂದ ಪೂಜಿಸುವುದು ವಾಡಿಕೆ.
ದುರ್ಗಾ ದೇವಿಯ ನಾಲ್ಕನೇ ರೂಪವನ್ನು ಪೂಜಿಸುವುದರಿಂದ ಮನೆಗೆ ಸಂತೋಷ, ಸಮೃದ್ಧಿ ಮತ್ತು ಪ್ರಗತಿ ಸಿಗುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಕೂಷ್ಮಾಂಡ ದೇವಿಯು ಸೌರವ್ಯೂಹದೊಳಗಿನ ಲೋಕದಲ್ಲಿ ವಾಸಿಸುತ್ತಾಳೆ ಮತ್ತು ಅವಳ ದೇಹದ ಕಾಂತಿ ಸೂರ್ಯನಂತೆ ಪ್ರಕಾಶಮಾನವಾಗಿರುತ್ತದೆ. ಅವಳ ಕಾಂತಿ ಮತ್ತು ಬೆಳಕು ಎಲ್ಲಾ ಬ್ರಹ್ಮಾಂಡದ ದಿಕ್ಕುಗಳನ್ನು ಬೆಳಗಿಸುತ್ತದೆ.
ಕೂಷ್ಮಾಂಡಾ ದೇವಿಯ ಜನನ
ಶಿವನಿಗೆ ನಿನ್ನ ಮಗನ ಸಾವು ನಿನ್ನಿಂದಲೇ ಆಗಲಿ ಎಂದು ಶಪಿಸಿ ಕಶ್ಯಪ ಪಾರ್ವತಿಯ ಮೊರೆ ಹೋದ. ಆ ಶಾಪದ ದುಃಖದ ನಡುವೆಯೂ ತಾಯಿಯು ಮೊದಲು ಸೂರ್ಯನ ಜಾಗವನ್ನು ತನ್ನ ಪ್ರಭೆಯಿಂದ ತುಂಬಿದಳು. ಕಶ್ಯಪನ ರಕ್ತ ಹಾಗೂ ಅಮೃತ ಕಲಿಸಿ ಸೂರ್ಯನನ್ನು ಮರುಜೀವಗೊಳಿಸಿದಳು. ಹೀಗೆ ಸೂರ್ಯನಿಗೆ ಒಲಿದ ತಾಯಿ ಸೂರ್ಯ ಮಂಡಲದಲ್ಲೇ ನೆಲೆಸಿ ಸೂರ್ಯನ ಶಕ್ತಿಯಾದಳು. ಮಾಲಿ-ಸುಮಾಲಿಯ ಅಮ್ಮನಿಗೆ ತನ್ನ ಮಕ್ಕಳನ್ನು ಮರು ಪಡೆಯಲು ತನ್ನದೇ ʼಅಂಡಾಣುʼಗಳನ್ನು ನೀಡಿದ ಕಾರಣ ಅವಳಿಗೆ ಕೂಷ್ಮಾಂಡಾ ಎನ್ನಲಾಗಿದೆ.