ಎಐ ಚಿತ್ರ 
ಭಕ್ತಿ-ಜ್ಯೋತಿಷ್ಯ

ಓಣಂ ಆಚರಣೆಯಲ್ಲಿ 'ಪೂಕಳಂ' ಕಡ್ಡಾಯ ಏಕೆ: ಬಲಿ ಮಹಾರಾಜನ ಸ್ವಾಗತಕ್ಕೆ ಇರುವ ಕ್ರಮ ಏನು?

ಓಣಂ ಹಬ್ಬದ 10 ದಿನಗಳಲ್ಲಿ ಪ್ರತಿ ದಿನವೂ ಮನೆ ಬಾಗಿಲಿನ ಹೊರಗೆ ಹೊಸ ಪೂಕಳಂ ಅಂದರೆ ಹೂವಿನ ರಂಗೋಲಿ ಹಾಕಲಾಗುವುದು. ತಾಜಾ ಹೂವುಗಳಿಂದ ಮಾಡಿದ ವೃತ್ತಾಕಾರದ ರಂಗೋಲಿಯಾಗಿದೆ.

ಓಣಂ ಒಂದು ದೊಡ್ಡ ಹಬ್ಬವಾಗಿದ್ದು ಇದನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕೇರಳದಲ್ಲಿ ಆಚರಿಸಲಾಗುತ್ತದೆ. ಇದು ಸುಗ್ಗಿಯ ಹಬ್ಬವಾಗಿದೆ. ಜನರ ಪ್ರಕಾರ, ರಾಜ ಮಹಾಬಲಿಯನ್ನು ಸ್ವಾಗತಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಓಣಂ ಹಬ್ಬದ ಸಮಯದಲ್ಲಿ ರಾಜ ಮಹಾಬಲಿಯು ತನ್ನ ಜನರನ್ನು ನೋಡಲು ಕೇರಳಕ್ಕೆ ಭೇಟಿ ನೀಡುತ್ತಾನೆ ಎಂದು ನಂಬುತ್ತಾರೆ.

ಓಣಂ ಆಚರಣೆಯ ಸಂದರ್ಭದಲ್ಲಿ ಪೂಕಳಂ ಅಂದರೆ ಹೂವಿನ ರಂಗೋಲಿ ಇರುವುದು ಕಡ್ಡಾವಾಗಿದೆ. ಒಂದು ಕಾಲದಲ್ಲಿ ಈ ಪ್ರದೇಶವನ್ನು ಆಳಿದ ರಾಜ ಮಹಾಬಲಿಯನ್ನು ಸ್ವಾಗತಿಸಲು, ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಓಣಂ ಹಬ್ಬದ ಮೊದಲು ಹೂವಿನ ರಂಗೋಲಿ ಮೂಲಕ ವಿನ್ಯಾಸಗೊಳಿಸಲಾಗುವುದು. ಓಣಂ ಹಬ್ಬದ 10 ದಿನಗಳಲ್ಲಿ ಪ್ರತಿ ದಿನವೂ ಮನೆ ಬಾಗಿಲಿನ ಹೊರಗೆ ಹೊಸ ಪೂಕಳಂ ಅಂದರೆ ಹೂವಿನ ರಂಗೋಲಿ ಹಾಕಲಾಗುವುದು.

ತಾಜಾ ಹೂವುಗಳಿಂದ ಮಾಡಿದ ವೃತ್ತಾಕಾರದ ರಂಗೋಲಿಯಾಗಿದೆ. ಈ ರಂಗೋಲಿಯ ಮಧ್ಯೆ ದೀಪವನ್ನಿಟ್ಟು ಅಲಂಕರಿಸಲಾಗುತ್ತದೆ. ಓಣಂನ 10 ದಿನಗಳಲ್ಲಿ, ವಲ್ಲಂ ಕಾಳಿ (ದೋಣಿ ಓಟ), ಪುಲಿಕಲಿ (ಹುಲಿ ನೃತ್ಯಗಳು), ಪೂಕ್ಕಳಂ (ಹೂವಿನ ರಂಗೋಲಿ), ಓಣತಪ್ಪನ್ (ಪೂಜೆ), ಮುಂತಾದ ವಿವಿಧ ರೋಮಾಂಚನಕಾರಿ ಚಟುವಟಿಕೆಗಳು ನಡೆಯುತ್ತವೆ.

ಪೂಕಳಂ ಪದವು 'ಪೂವ್' ಮತ್ತು 'ಕಳಂ' ಎಂಬ ಎರಡು ಪದಗಳ ಗುಂಪಾಗಿದೆ, ಅಲ್ಲಿ 'ಪೂವ್' ಎಂದರೆ ಹೂವುಗಳು ಮತ್ತು 'ಕಳಂ' ಎಂದರೆ ಬಣ್ಣದ ರೇಖಾಚಿತ್ರ. ಆದ್ದರಿಂದ, ಮೂಲತಃ ಇದು ಓಣಂ ಆಚರಿಸಲು ಮನೆಯ ಮುಂದೆ ನೆಲದ ಮೇಲೆ ಮಾಡಿದ ಹೂವಿನ ರಂಗೋಲಿ ಅಥವಾ ಹೂವಿನ ಕಾರ್ಪೆಟ್ ಆಗಿದೆ. ಇದನ್ನು ಅತಪೂಕಳಂ ಅಥವಾ ಓನಪೂಕಳಂ ಎಂದೂ ಕರೆಯುತ್ತಾರೆ. ಓಣಂ ಹಬ್ಬದ ಸಮಯದಲ್ಲಿ ಪೂಕಳಂ ತಯಾರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಓಣಂ ಪೂಕಳಂ ಅನ್ನು ಸಾಮಾನ್ಯವಾಗಿ ವೃತ್ತಾಕಾರದಲ್ಲಿ ರಚಿಸಲಾಗುತ್ತದೆ. ನಂತರ ಬಣ್ಣ ಬಣ್ಣದ ಹೂವಿನ ದಳಗಳ ಮೂಲಕ ವಿನ್ಯಾಸ ಮಾಡಲಾಗುವುದು. ಸಂಪ್ರದಾಯದ ಪ್ರಕಾರ, ಪೂಕಳಂ ತಯಾರಿಕೆಯು ಹತ್ತು ಸಣ್ಣ ವೃತ್ತಾಕಾರಗಳನ್ನು ಅಥವಾ ಸುತ್ತುಗಳನ್ನು ಒಳಗೊಂಡಿರಬೇಕು

ಈ 10 ದಿನಗಳ ಓಣಂ ಹಬ್ಬದ ಪ್ರತಿ ದಿನವೂ ಪೂಕಳಂ ಅನ್ನು ಪ್ರತಿನಿಧಿಸುತ್ತದೆ. ಮೊದಲ ದಿನ ಒಂದೇ ಹೂವನ್ನು ಬಳಸಲಾಗುತ್ತದೆ, ಎರಡನೇ ದಿನ ಎರಡು ವಿಭಿನ್ನ ಬಣ್ಣಗಳನ್ನು ಬಳಸಲಾಗುತ್ತದೆ ಮತ್ತು ಅಂತಿಮವಾಗಿ 10ನೇ ದಿನದಲ್ಲಿ 10 ವಿಭಿನ್ನ ಬಣ್ಣವನ್ನು ಬಳಸಲಾಗುತ್ತದೆ. ಪೂಕಳಂ ಅಸುರರು ಮತ್ತು ದೇವತೆಗಳ ನಡುವಿನ ಹೋರಾಟವನ್ನು ವ್ಯಾಖ್ಯಾನಿಸುತ್ತದೆ ಎಂಬ ನಂಬಿಕೆಯೂ ಇದೆ.

ಡಾ. ಪಿ.ಬಿ ರಾಜೇಶ್

ಜ್ಯೋತಿಷಿ ಮತ್ತು ಸಂಖ್ಯಾಶಾಶ್ತ್ರಜ್ಞರು

ಉತ್ತರಾಖಂಡ: ಚಮೋಲಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ-Video

Iran ಮುಗಿಸಲು ಅಮೆರಿಕ ಮಾಸ್ಟರ್ ಪ್ಲ್ಯಾನ್: ಜಾಗತಿಕ ಇತಿಹಾಸದಲ್ಲೇ ಹಿಂದೆಂದೂ ಕಾಣದ ಭೀಕರ 'ಆರ್ಥಿಕ ಯುದ್ಧ' ಘೋಷಣೆ!

ಸ್ವಾತಂತ್ರ್ಯೋತ್ಸವಕ್ಕೆ ಸಿಲಿಕಾನ್ ಸಿಟಿ ಸಜ್ಜು: ವಿಧಾನಸೌಧದ ಮುಂದೆ ‘ಫ್ರೀಡಂ ಹಬ್ಬ’ಕ್ಕೆ ಭರದ ಸಿದ್ಧತೆ, 18 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ..!

ದೇಶ ವಿಭಜನೆಯ ಸಂತ್ರಸ್ತರನ್ನು ಸ್ಮರಿಸಿದ ಪ್ರಧಾನಿ ಮೋದಿ; ಸಾಮರಸ್ಯ, ಸಹೋದರತ್ವಕ್ಕೆ ಕರೆ

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ