ದ್ವಾದಶ ರಾಶಿಗಳು 
ಭಕ್ತಿ-ಜ್ಯೋತಿಷ್ಯ

Weekly Horoscope: ವಾರ ಭವಿಷ್ಯ- ದ್ವಾದಶ ರಾಶಿಗಳ ಫಲಾಫಲ

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ- ಕೆಲಸ, ಹಣಕಾಸು, ಪ್ರೀತಿ; ಈ ವಾರ ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ. ( ಜನವರಿ 12 - ಜನವರಿ 18ವರೆಗೆ)

ಮೇಷ

ಈ ರಾಶಿಯಲ್ಲಿ ಜನಿಸಿದವರಿಗೆ ಇದು ಮಿಶ್ರ ಸಮಯ. ಅನಿರೀಕ್ಷಿತ ಖರ್ಚುಗಳು ಮತ್ತು ದಾನಗಳ ಸಾಧ್ಯತೆ ಇದೆ. ಸ್ನೇಹಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಒಂದೇ ಸಮಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬಹುದು, ಖ್ಯಾತಿ- ಸಂಪತ್ತನ್ನು ಗಳಿಸಬಹುದು, ಆಸ್ತಿಯಲ್ಲಿ ಪಾಲು ಪಡೆಯಬಹುದು ಮತ್ತು ವಾಸಸ್ಥಳ ಬದಲಾವಣೆಯಾಗಬಹುದು.

ವೃಷಭ

ಇದು ಮಿಶ್ರ ಫಲಗಳ ಸಮಯ. ಸಂಗೀತ, ಖ್ಯಾತಿ, ಸಂಪತ್ತು, ಅಧಿಕಾರ ಮತ್ತು ವಾಹನ ಸಂಪಾದನೆ. ಕಲೆಗಳಲ್ಲಿ ಆಸಕ್ತಿ. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಿವಿಧ ಖರ್ಚುಗಳನ್ನು ಎದುರಿಸಬೇಕಾಗುತ್ತದೆ, ಸಾಹಿತ್ಯಿಕ ವಿಷಯಗಳಲ್ಲಿ ಆಸಕ್ತಿ. ಸಮಾಜದ ವಿವಿಧ ಸಮಸ್ಯೆಗಳಲ್ಲಿ ಮಧ್ಯಪ್ರವೇಶಿಸಿ ಪರಿಹರಿಸುವ ಅವಕಾಶ.

ಮಿಥುನ

ಮನೆಯಲ್ಲಿ ಶುಭ ಕಾರ್ಯಕ್ರಮ, ಕ್ರಯವಿಕ್ರಯಗಳಲ್ಲಿ ಯೋಗ ವಿದ್ಯಾರ್ಥಿಗಳಿಗೆ ಇದು ತುಂಬಾ ಒಳ್ಳೆಯ ಸಮಯ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಷ್ಟಪಡಬೇಕು. ಮೂತ್ರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸೇನೆಯಲ್ಲಿರುವವರು ಎಚ್ಚರವಹಿಸ ಬೇಕಾದ ಅಗತ್ಯವಿದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ

ಕಟಕ

ಕೃಷಿಯಿಂದ ಹೆಚ್ಚು ಲಾಭವಿರುತ್ತದೆ. ಅಧ್ಯಾಪಕರಿಗೆ ಉತ್ತಮ ಬೇಡಿಕೆ ಬರುತ್ತದೆ. ಭೂಮಿ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಆದಾಯ. ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕಾದ ಅನಿವಾರ್ಯತೆ ಇದೆ. ವೃತ್ತಿಯಲ್ಲಿ ಯಶಸ್ಸು. ಹಣಕಾಸಿನ ವ್ಯವಹಾರ ಮಾಡುವವರಿಗೆ ಲಾಭ. ವಿದೇಶ ಪ್ರವಾಸಕ್ಕೆ ಉತ್ತಮ ಸಮಯ.

ಸಿಂಹ

ಸಮಾಜದಿಂದ ಗೌರವ ಸಿಗುತ್ತದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಕೃಷಿಭೂಮಿಯನ್ನು ಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಸಂಗಾತಿಯಿಂದ ನಿಮ್ಮ ವ್ಯವಹಾರಗಳಿಗೆ ಬಂಡವಾಳ ದೊರೆಯುವ ಸಾಧ್ಯತೆಗಳಿವೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ದೂರ ಪ್ರಯಾಣ ಒಳಿತಲ್ಲ.

ಕನ್ಯಾ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಉತ್ಸಾಹ . ಆದಾಯವು ಸಾಮಾನ್ಯ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮೇಲುಗೈ. ಕ್ರೀಡಾಪಟುಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಅನವಶ್ಯಕವಾದ ಕೆಲಸಗಳಲ್ಲಿ ಮಧ್ಯಸ್ಥಿಕೆ ವಹಿಸಲು ವಿಶೇಷ ಗಮನ ಹರಿಸಬೇಕು.

ತುಲಾ

ವೃತ್ತಿಯಲ್ಲಿ ಹೊಸ ಸ್ನೇಹಿತರು ದೊರೆಯುವರು. ಲೋಹದ ವ್ಯಾಪಾರವನ್ನು ಮಾಡುವವರಿಗೆ ಲಾಭ. ಕಣ್ಣಿನ ತೊಂದರೆ, ಉಸಿರಾಟದ ತೊಂದರೆ ಇರುವವರು ಎಚ್ಚರ ವಹಿಸಿ. ವ್ಯಾಪಾರ- ವ್ಯವಹಾರಗಳಲ್ಲಿ ನಿಮ್ಮ ಪಾತ್ರ ಹೆಚ್ಚುತ್ತದೆ. ವೈವಾಹಿಕ ಜೀವನದಲ್ಲಿ ಕಾವೇರಿದ ವಾತಾವರಣ. ಸರ್ಕಾರಿ ಸಂಸ್ಥೆಗಳಿಂದ ಅನಿರೀಕ್ಷಿತ ಲಾಭ..

ವೃಶ್ಚಿಕ

ಈ ವಾರ ಅದೃಷ್ಟಶಾಲಿಯಾಗಿದೆ. ಅಡೆತಡೆಗಳು ನಿವಾರಣೆಯಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಮೇಲಧಿಕಾರಿಗಳ ಮೆಚ್ಚುಗೆ ದೊರೆಯಲಿದೆ. ಪ್ರೇಮ ಮತ್ತು ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರ ಪ್ರವಾಸ ಲಾಭದಾಯಕ.

ಧನಸ್ಸು

ಕೆಲಸದ ಒತ್ತಡ ಮತ್ತು ಖರ್ಚು ಹೆಚ್ಚಿರಲಿದೆ. ವ್ಯವಹಾರದಲ್ಲಿ ಮಂದಗತಿ ಕಾಣಬಹುದು. ಆಸ್ತಿ ವಿವಾದಗಳು ಕಾಡಬಹುದು, ಅಹಂಕಾರ ಬೇಡ. ಮಾತಿನ ಮೇಲೆ ನಿಗಾ ಇರಲಿ. ಪ್ರೇಮ ಜೀವನದಲ್ಲಿ ಏರಿಳಿತವಿರುತ್ತದೆ. ಹಿರಿಯರ ಒಡವೆಗಳು ದೊರೆಯುವ ಸಾಧ್ಯತೆಗಳಿವೆ.

ಮಕರ

ಪ್ರಯಾಣದ ವೇಳೆ ಜಾಗ್ರತೆ ಇರಲಿ, ಗಾಯದ ಭೀತಿಯಿದೆ. ಪ್ರಾಣಿಗಳಿಂದ ಅಪಾಯ ಸಂಭವ. ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆ ಎದುರಾಗಬಹುದು. ಆಸ್ತಿ ವಿಚಾರದಲ್ಲಿ ನ್ಯಾಯಾಲಯಕ್ಕೆ ಅಲೆಯಬೇಕಾಗಬಹುದು. ಕನಸುಗಳು ನನಸಾಗುವ ಸಮಯ. ಹೂಡಿಕೆಗಳಿಂದ ಲಾಭ ಸಿಗಲಿದೆ.

ಕುಂಭ

ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯುತ್ತದೆ. ಕೆಲಸದಲ್ಲಿ ಬೇರೆಯವರನ್ನು ಕುರುಡಾಗಿ ನಂಬಬೇಡಿ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಹಿರಿಯರ ಆರೋಗ್ಯ ಕಾಳಜಿ ಇರಲಿ. ಸಂವಹನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.

ಮೀನ

ಪ್ರಮುಖ ನಿರ್ಧಾರಗಳ ಮೊದಲು ಯೋಚಿಸಿ. ಹಣ ಗಳಿಸಲು ಅಡ್ಡದಾರಿ ಹಿಡಿಯಬೇಡಿ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಇರಬಹುದು. ಆಹಾರ ಪದ್ಧತಿಯ ಬಗ್ಗೆ ಗಮನವಿರಲಿ, ಹೊಟ್ಟೆಯ ಸಮಸ್ಯೆ ಕಾಡಬಹುದು. ಹಳೆಯ ಸಮಸ್ಯೆಗಳು ಬಗೆಹರಿದು ನೆಮ್ಮದಿ ಸಿಗಲಿದೆ. ಆರ್ಥಿಕ ಲಾಭ ಮತ್ತು ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿದೇಶಿ ವ್ಯವಹಾರದಲ್ಲಿ ಲಾಭವಿರುತ್ತದೆ. ವೈವಾಹಿಕ ಜೀವನ ಬಹಳ ಸುಖಮಯವಾಗಿರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಷ್ಟೊಂದು ಪ್ರೀತಿ ಇದ್ದರೆ, ನಿಮ್ಮ ಮನೆಗೇಕೆ ಕರೆದೊಯ್ಯಬಾರದು?; ಶ್ವಾನ ಪ್ರಿಯರಿಗೆ ಸುಪ್ರೀಂ ಕೋರ್ಟ್ ಚಾಟಿ

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ.25ರಷ್ಟು ಸುಂಕ: Donald Trump

ಅಚ್ಚರಿ, ಕುತೂಹಲ ಮೂಡಿಸಿದ ಚೀನಾ ಕಮ್ಯುನಿಸ್ಟ್ ಪಕ್ಷ- RSS ನಾಯಕರ ಭೇಟಿ!

'ಮುತ್ತು, ಹವಳ, ನೀಲಮಣಿ..'; ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ನಿಧಿ ಪತ್ತೆ, ಗ್ರಾಮಸ್ಥರಿಗೆ ಮತ್ತೆ ತಲೆನೋವು!

ಯುದ್ಧಕ್ಕೂ ಸಿದ್ದ-ಮಾತುಕತೆಗೂ ಬದ್ಧ ಎಂದ ಇರಾನ್ ಸರ್ಕಾರ: ಮೃತರ ಸಂಖ್ಯೆ 648ಕ್ಕೆ ಏರಿಕೆ

SCROLL FOR NEXT