ಮೇಷ
ಈ ರಾಶಿಗೆ ಸೇರಿದ ಜನರಿಗೆ ಈ ವಾರ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಬಹಳ ಲಾಭದಾಯಕವಾಗಿರಲಿದೆ. ಈ ವಾರದ ಆರಂಭದಲ್ಲಿ ನಿಮಗೆ ಹಠಾತ್ ದೊಡ್ಡ ಲಾಭ ದೊರಕುವ ಯೋಗವಿದೆ. ಹಾಗೆ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ಈ ವಾರ ಉತ್ತಮ ಲಾಭ ದೊರೆಯುವುದು. ಸಂಪತ್ತಿಗೆ ಸಂಬಂಧಿಸಿದಂತೆ ನಿಮಗೆ ಯಾವುದಾದರೂ ಉತ್ತಮ ಲಾಭ ದೊರಕುವ ಸಂಭವ ಹೆಚ್ಚಾಗಿರುವುದು.
ವೃಷಭ
ಈ ವಾರ ನೀವು ಹೂಡಿಕೆ ಮಾಡುವುದರಿಂದ ನಿಮಗೆ ಸಾಕಷ್ಟು ಹೆಚ್ಚಿನ ಲಾಭ ದೊರಕುವುದು. ಈ ವಾರ ಯಾವುದಾದರೂ ದೊಡ್ಡ ಯಶಸ್ಸು ದೊರಕುವುದು. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ಈ ವಾರ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ದೊರಕುವುದು. ಈ ಅವಧಿಯಲ್ಲಿ ವೃಷಭ ರಾಶಿಗೆ ಸೇರಿದ ವ್ಯಾಪಾರ ಹಾಗೂ ಕೆಲಸವನ್ನು ಮಾಡುವ ಜನರಿಗೆ ಪ್ರಗತಿ ದೊರಕುವ ಯೋಗವು ನಿರ್ಮಾಣಗೊಳ್ಳುವುದು. ಕೆಲಸದ ಸ್ಥಳದಲ್ಲಿ ನಿಮಗೆ ಯಾವುದಾದರೂ ಹೊಸ ಜವಾಬ್ದಾರಿ ದೊರಕಬಹುದು.
ಮಿಥುನ
ನಿಮ್ಮ ಹಣ ಎಲ್ಲಿಯಾದರೂ ಕಳೆದು ಹೋಗಿದ್ದರೆ, ಈ ವಾರ ನಿಮಗೆ ಅದು ವಾಪಸ್ಸು ದೊರಕುವುದರೊಂದಿಗೆ ಉತ್ತಮ ಲಾಭವು ಕೂಡ ಲಭಿಸುವುದು. ವಿದೇಶಕ್ಕೆ ಪ್ರಯಾಣ ಯೋಗ. ಜೊತೆಗೆ ನಿಮ್ಮ ಸುಖ, ಸಮೃದ್ಧಿಯಲ್ಲಿ ಸಾಕಷ್ಟು ವೃದ್ಧಿಯಾಗುವುದು. ನಿವಾಸ ಬದಲಾವಣೆ ಯೋಗವಿದೆ. ಸೋಮಾರಿತನದಿಂದ ಕೊಂಚ ನಷ್ಟ, ಬಿದ್ದು ಗಾಯಗೊಳ್ಳುವ ಸಾಧ್ಯತೆ, ಖ್ಯಾತಿ, ಸಂಪತ್ತು, ಅಧಿಕಾರ ದೊರೆಯುವ ಇತ್ಯಾದಿಗಳ ಸಾಧ್ಯತೆಗಳೂ ಇವೆ.
ಕಟಕ
ಈ ವಾರ ನೀವು ಬಹಳ ಸಮಯದಿಂದ ಖರೀದಿಸಬೇಕೆಂದು ಬಯಸುತ್ತಿದ್ದ ವಸ್ತುವನ್ನು ಖರೀದಿಸುವ ಯೋಗ ದೊರಕುವುದು. ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಜೊತೆಗೆ ಈ ವಾರ ನಿಮಗೆ ಯಾವುದಾದರೂ ಪ್ರತಿಷ್ಠಿತ ವ್ಯಕ್ತಿಯ ಪರಿಚಯವಾಗುವ ಸಾಧ್ಯತೆ ಹೆಚ್ಚಾಗಿರುವುದು. ಈ ವಾರದ ಕೊನೆಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ.
ಸಿಂಹ
ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಪಾರ ಲಾಭ ದೊರಕುವ ಯೋಗವಿದೆ. ನೀವು ಕಳೆದ ಸ್ವಲ್ಪ ಸಮಯದಿಂದ ಮನೆ ಅಥವಾ ಆಸ್ತಿಗೆ ಸಂಬಂಧಿಸಿದಂತೆ ಹೂಡಿಕೆ ಮಾಡುವ ಪ್ರಯತ್ನ, ಈ ಅವಧಿಯಲ್ಲಿ ನಿಮಗೆ ಯಶಸ್ಸು ದೊರಕುವುದು. ನೀವು ಯಾವುದಾದರೂ ಹೊಸ ಕೆಲಸವನ್ನು ಶುರು ಮಾಡಬೇಕೆಂದು ಯೋಚಿಸುತ್ತಿದ್ದರೆ ಕೆಲ ಕಾಲ ಮುಂದೂಡಿ.
ಕನ್ಯಾ
ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ನೋಡಿ ಅಧಿಕಾರಿಗಳು ಸಂತೋಷವನ್ನು ಪಡುವರು. ಜೊತೆಗೆ ಈ ವಾರ ಕೆಲಸದ ಸ್ಥಳದಲ್ಲಿ ನಿಮಗೆ ಯಾವುದಾದರೂ ಹೊಸ ಕೆಲಸ ಅಥವಾ ಜವಾಬ್ದಾರಿ ದೊರಕುವುದು. ಈ ವಾರ ನಿಮ್ಮ ಯಾವುದಾದರೂ ಅಗತ್ಯ ಕೆಲಸಕ್ಕೆ ನಿಮ್ಮ ಅಕ್ಕಪಕ್ಕದ ಮನೆಯವರ ಸಹಾಯ ದೊರಕುವುದು. ಈ ರಾಶಿಗೆ ಸೇರಿದ ಜನರ ಹಣವು ಕಳೆದು ಹೋಗಿದ್ದರೆ, ಈ ಅವಧಿಯಲ್ಲಿ ಅದು ವಾಪಸ್ಸು ದೊರಕುವ ಸಂಭವ ಹೆಚ್ಚಾಗಿರುವುದು.
ತುಲಾ
ಈ ವಾರದ ಆರಂಭದಲ್ಲಿ ನಿಮಗೆ ಹಠಾತ್ ದೊಡ್ಡ ಲಾಭ ದೊರಕುವ ಯೋಗವಿದೆ. ಹಾಗೆ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ಈ ವಾರ ಉತ್ತಮ ಲಾಭ ದೊರೆಯುವುದು. ಸಾರ್ವಜನಿಕ ಕೆಲಸದಲ್ಲಿ ಯಶಸ್ವಿ. ಹಠಾತ್ ಖರ್ಚುಗಳು ಎದುರಾಗುವ ಸಾಧ್ಯತೆ ಇರುತ್ತದೆ.
ವೃಶ್ಚಿಕ
ಈ ರಾಶಿಯವರಿಗೆ ಸಾಮಾನ್ಯವಾಗಿ ಶುಭ ಸಮಯ. ದೇಹಕ್ಕೆ ಗಾಯಗಳು, ಬೆಂಕಿ ಮತ್ತು ನಾಲ್ಕು ಕಾಲಿನ ಪ್ರಾಣಿಗಳಿಂದ ಹಾನಿಯಾಗುವ ಬಗ್ಗೆ ಎಚ್ಚರದಿಂದಿರಬೇಕು. ಹೊಸ ಹುದ್ದೆ ಪಡೆಯುವ ಸಾಧ್ಯತೆ. ಮದುವೆಯಂತಹ ಶುಭ ಕಾರ್ಯಕ್ರಮಗಳಿಗೆ ಅವಕಾಶಗಳು. ಹೊಸ ವಸ್ತುಗಳ ಖರೀದಿ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರಿಗೆ ಇದು ತುಂಬಾ ಒಳ್ಳೆಯ ಸಮಯ.
ಧನಸ್ಸು
ನಿಮ್ಮ ಕಠಿಣ ಪರಿಶ್ರಮದ ಲಾಭವನ್ನು ಪಡೆಯುವ ಸಮಯ ಇದು. ಅಧಿಕಾರಿಗಳಿಗೆ ಅದೃಷ್ಟ. ಜ್ಞಾನ ಸಂಪಾದನೆ ಮತ್ತು ವಿದೇಶದಲ್ಲಿ ವಾಸಿಸುವ ಯೋಗವು ಇದೆ. ಅವಿವೇಕತನದಿಂದ ಖ್ಯಾತಿ ನಷ್ಟ, ಖರೀದಿ ಮತ್ತು ಮಾರಾಟದಲ್ಲಿ ನಷ್ಟ, ಆಲಸ್ಯ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಂತೆ ವಿಶೇಷ ಕಾಳಜಿ ವಹಿಸಬೇಕು.
ಮಕರ
ಈ ನಕ್ಷತ್ರದಲ್ಲಿ ಜನಿಸಿದವರಿಗೆ ಇದು ಒಳ್ಳೆಯ ಸಮಯ. ಸಂಗೀತ, ಸಾಹಿತ್ಯ, ಕಲೆ, ಸಿನಿಮಾ, ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಯಶಸ್ಸು. ಬೋಧನೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ. ಸಂಘರ್ಷದ ಸಾಧ್ಯತೆಯನ್ನು ತಪ್ಪಿಸಲು ಪ್ರಯತ್ನಿಸಬೇಕು.
ಕುಂಭ
ಈ ರಾಶಿಯವರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ಮಿಶ್ರಣವಿರುವ ಸಮಯ. ಆದಾಗ್ಯೂ, ಕಠಿಣ ಪರಿಶ್ರಮವು ಫಲ ನೀಡುತ್ತದೆ. ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಅವಕಾಶಗಳಿವೆ, ತೋಟಗಳ ಖರೀದಿ, ಮಾರಾಟದಿಂದ ಆರ್ಥಿಕ ಲಾಭ. ಅನಿರೀಕ್ಷಿತ ಖರ್ಚುಗಳು, ಬೆಂಕಿಗೆ ಅವಘಡ ಸಾಧ್ಯತ. ವೇದಾಂತ ಮತ್ತು ಇತರ ವಿಜ್ಞಾನಗಳಲ್ಲಿ ಆಸಕ್ತಿ.
ಮೀನ
ಉದ್ದೇಶಿತ ಕಾರ್ಯವನ್ನು ಸಾಧಿಸುವ ಹಠ, ದೇಶದ ಆಡಳಿತಗಾರರಿಂದ ಉಡುಗೊರೆಗಳನ್ನು ಪಡೆಯುವ ಸಾಧ್ಯತೆ. ಬಟ್ಟೆ ಮತ್ತು ಆಭರಣ ಖರೀದಿ ಮಾಡಲು ಸುಸಮಯ. ಅನಗತ್ಯ ಖರ್ಚುಗಳು, ಸೋಮಾರಿತನದಿಂದ ಹೊಟ್ಟೆಯ ಕಾಯಿಲೆಗಳು. ಪಾದಗಳ ಕಾಯಿಲೆಗಳ ಬಗ್ಗೆ ಜಾಗ್ರತೆ