ಸಾಂದರ್ಭಿಕ ಚಿತ್ರ 
ಭಕ್ತಿ-ಜ್ಯೋತಿಷ್ಯ

16 ತಿಥಿಗಳಲ್ಲಿ ಜನಿಸಿದವರ ಗುಣ ಲಕ್ಷಣ ಹೇಗಿರುತ್ತೆ? ಅಮಾವಾಸ್ಯೆಯಂದು ಹುಟ್ಟಿದವರ ಜನ್ಮ ಜಾತಕದಲ್ಲಿ ದೋಷವೇ?

ಇಲ್ಲಿ ನಾವು ಶ್ರೀಕೃಷ್ಣ ಜಯಂತಿ ರೋಹಿಣಿ ನಕ್ಷತ್ರದಲ್ಲಿ ಆಚರಿಸುವಾಗ‍‍ ಉತ್ತರ ಭಾರತದಲ್ಲಿ ಅಷ್ಟಮಿಯಂದು ಆಚರಿಸಲಾಗುತ್ತದೆ. ನಕ್ಷತ್ರ ಫಲಿತಾಂಶವು ತನ್ನ ಪ್ರತಿ ತಿಥಿಗಳಿಗೆ ವಿಭಿನ್ನವಾದ ಫಲಿತಾಂಶಗಳನ್ನು ಹೊಂದಿದೆ.

ಹಿಂದೂ ಪಂಚಾಂಗದ ಪ್ರಕಾರ ಚಂದ್ರನ ಚಲನೆಯ ಆಧಾರದ ಮೇಲೆ ಒಂದು ತಿಂಗಳನ್ನು 30 ತಿಥಿಗಳಾಗಿ ವಿಂಗಡಿಸಲಾಗಿದೆ. ಶುಕ್ಲ ಪಕ್ಷದ 15 ಮತ್ತು ಕೃಷ್ಣ ಪಕ್ಷದ 15 ತಿಥಿಗಳು ಇರುತ್ತವೆ. ಅಮಾವಾಸ್ಯೆಯು ಶುಕ್ಲ ಪಕ್ಷದ ಆರಂಭದ ಹಂತವಾಗಿದ್ದು, ಹುಣ್ಣಿಮೆಯು ಪೂರ್ಣ ಚಂದ್ರನ ದಿನವಾಗಿದೆ.

ಇಲ್ಲಿ ನಾವು ಶ್ರೀಕೃಷ್ಣ ಜಯಂತಿ ರೋಹಿಣಿ ನಕ್ಷತ್ರದಲ್ಲಿ ಆಚರಿಸುವಾಗ‍‍ ಉತ್ತರ ಭಾರತದಲ್ಲಿ ಅಷ್ಟಮಿಯಂದು ಆಚರಿಸಲಾಗುತ್ತದೆ. ನಕ್ಷತ್ರ ಫಲಿತಾಂಶವು ತನ್ನ ಪ್ರತಿ ತಿಥಿಗಳಿಗೆ ವಿಭಿನ್ನವಾದ ಫಲಿತಾಂಶಗಳನ್ನು ಹೊಂದಿದೆ.

ಅಮಾವಾಸ್ಯೆಯಂದು ಜನಿಸಿದವರ ಜಾತಕದಲ್ಲಿ ಚಂದ್ರನ ಬಲವು ಕ್ಷೀಣವಾಗಿರುತ್ತದೆ. ಇದು ಮಾನಸಿಕ ಏರಿಳಿತ, ಭಾವುಕತೆ ಅಥವಾ ತಾಯಿಯ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ತರಬಹುದು ಎಂದು ಜ್ಯೋತಿಷ್ಯದಲ್ಲಿ ನಂಬಲಾಗುತ್ತದೆ. ಆದರೆ ಇವರು ಅಸಾಧಾರಣ ಆಧ್ಯಾತ್ಮಿಕ ಒಲವು ಮತ್ತು ದೃಢ ಸಂಕಲ್ಪದ ಶಕ್ತಿಯನ್ನು ಹೊಂದಿರುತ್ತಾರೆ. ಅಮವಾಸ್ಯೆ ತಿಥಿಯಲ್ಲಿ ಜನಿಸುವವರು ಆಂತರಿಕ ಶಕ್ತಿಯುಳ್ಳವರಾಗಿರುತ್ತಾರೆ. ಅನೇಕ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಸ್ವಭಾವವು ಕಂಡುಬರುತ್ತದೆ. ಆಧ್ಯಾತ್ಮಿಕತೆಯಲ್ಲಿ ರಹಸ್ಯ ವಿದ್ಯೆಗಳಲ್ಲಿ ಆಸಕ್ತಿ ಇರುತ್ತದೆ. ಜೀವನದಲ್ಲಿ ಉನ್ನತಿಗಳು ತಡವಾದರೂ ಸ್ಥಿರತೆಯೊಂದಿಗೆ ಪಡೆಯಬಹುದು.

ವೈದಿಕ ಜ್ಯೋತಿಷ್ಯದ ಪ್ರಕಾರ, ಹುಟ್ಟಿದ ತಿಥಿಯು ವ್ಯಕ್ತಿಯ ಸ್ವಭಾವ, ಆಸಕ್ತಿ ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಪ್ರತಿ ತಿಥಿಯ ಜನನ ಫಲಗಳು ಮತ್ತು ಅವುಗಳ ಗುಣಲಕ್ಷಣಗಳು ಈ ಕೆಳಗಿನಂತಿವೆ.

ಪಾಡ್ಯ- ಹೊಸ ವಿಷಯಗಳನ್ನು ಪ್ರಾರಂಭಿಸಲು ಸಾಮರ್ಥ್ಯವಿರುವವರು. ಕುಟುಂಬದಲ್ಲಿ ಪ್ರಭಾವವಿರುವ ವ್ಯಕ್ತಿಗಳಾಗಿ ಬದಲಾಗಬಹುದು.

ದ್ವಿತೀಯ- ಸೌಮ್ಯ ಸ್ವಭಾವವೂ ಸಹಕಾರ ಮನೋಭಾವವೂ ಕಾಣಬಹುದು. ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕಲಾರಂಗದಲ್ಲಿ ಆಸಕ್ತಿ .

ತೃತೀಯ- ಉತ್ತಮ ಬುದ್ಧಿಶಕ್ತಿಯ ಜೊತೆಗೆ ಮಾತನಾಡುವ ಕಲೆ ಹೆಚ್ಚಾಗಿರುತ್ತದೆ. ವ್ಯಾಪಾರಬುದ್ಧಿ ಉತ್ತಮವಾಗಿರುತ್ತದೆ. ಪ್ರಯಾಣದ ಮೂಲಕ ಸಾಧನೆ.

ಚತುರ್ಥಿ- ಪ್ರತಿಬಂಧಗಳನ್ನು ಮೀರುವ ಸಾಮರ್ಥ್ಯ ಇರುತ್ತದೆ.ತಂತ್ರ, ಮಂತ್ರ ಮತ್ತು ಗೂಢ ವಿಷಯಗಳಲ್ಲಿ ಆಸಕ್ತಿ. ಚುರುಕುಬುದ್ಧಿ. ಗಣಪತಿ ಭಕ್ತರಾಗಿರುತ್ತಾರೆ..

ಪಂಚಮಿ - ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆ ಪಡೆಯುತ್ತಾರೆ. ಜ್ಞಾನ ಸಂಪಾದಿಸುವ ಆಸಕ್ತಿ ಹೆಚ್ಚಾಗಿರುತ್ತದೆ. ದೇವರ ನಂಬಿಕೆ ಜೀವನದಲ್ಲಿ ಸಹಾಯವಾಗುತ್ತದೆ, ದಾನಶೀಲರು, ಆದರೆ ಕೆಲವೊಮ್ಮೆ ಕಠಿಣ ನಿಲುವುಗಳನ್ನು ಹೊಂದುವರು

ಷಷ್ಠಿ- ಧೈರ್ಯವೂ ಆತ್ಮವಿಶ್ವಾಸವೂ ಹೆಚ್ಚಾಗಿರುತ್ತದೆ. ನಾಯಕತ್ವದ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತದೆ, ನ್ಯಾಯಪರರು, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಸಮತೋಲನ ಕಾಯ್ದುಕೊಳ್ಳುವವರು.

ಸಪ್ತಮಿ - ಸಮಾಜದಲ್ಲಿ ಮಾನ್ಯತೆ, ಧಾರ್ಮಿಕ, ಶಿಸ್ತುಬದ್ಧ ಜೀವನ ಮತ್ತು ಸರಳತೆಗೆ ಆದ್ಯತೆ, ವ್ಯಾಪಾರ ಬುದ್ಧಿ, ಪ್ರಾಯೋಗಿಕ ಚಿಂತನೆ. ಆಗಾಗ ಪ್ರಯಾಣಿಸುವರು.

ಅಷ್ಟಮಿ - ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಿ. ಕೆಲವು ಸಮಯದಲ್ಲಿ ಮನಸ್ಸಿನಲ್ಲಿ ಅಶಾಂತಿ ಅನಿಸಬಹುದು. ದೇವಿ ಉಪಾಸಕರಾಗಿರುತ್ತಾರೆ.

ನವಮಿ- ವೇಗದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಭಾವ. ದೃಢ ನಿರ್ಧಾರ, ದಾನಶೀಲತೆ ಮತ್ತು ದೀರ್ಘಾವಧಿ ಗುರಿಗಳನ್ನು ಸಾಧಿಸುವ ಕೌಶಲ್ಯ

ದಶಮಿ- ಎಲ್ಲಾ ರಂಗಗಳಲ್ಲೂ ಕ್ರಮಬದ್ಧವಾಗಿ ಮುನ್ನಡೆಯುತ್ತಾರೆ. ಕೆಲಸ, ಸಮಾಜ, ಕುಟುಂಬಕ್ಕಾಗಿ ಸಮರ್ಪಣೆ, ಧಾರ್ಮಿಕ ಒಲವು, ದಾನಶೀಲತೆ ಮನೋಭಾವ.

ಏಕಾದಶಿ- ಭಕ್ತಿ ಮತ್ತು ಆಧ್ಯಾತ್ಮಿಕತೆ ಹೆಚ್ಚಾಗಿರುತ್ತದೆ. ಉಪವಾಸ, ಪೂಜೆಗಳು ಜೀವನದಲ್ಲಿ ದೇವರಾನುಗ್ರಹವು ಕಂಡುಬರುತ್ತದೆ.

ದ್ವಾದಶಿ : ಬುದ್ಧಿವಂತರು, ಕೌಟುಂಬಿಕ ಪ್ರೀತಿಪಾತ್ರರು ಮತ್ತು ಅದೃಷ್ಟವಂತರು, ಆರ್ಥಿಕ ಪ್ರವರ್ಧಮಾನ ಸಾಧ್ಯವಿದೆ. ಸಂಬಂಧಿಕರ ಬೆಂಬಲ ಪಡೆಯಬಹುದು.

ತ್ರಯೋದಶಿ: ಶಿವಾನುಗ್ರಹವು ಹೆಚ್ಚಾಗಿ ದೊರೆಯುವ ತಿಥಿಯೆಂದು ಭಾವಿಸಲಾಗುತ್ತದೆ. ಕಲಾ, ಸಂಗೀತ, ಸಾಹಿತ್ಯ ತುತ ಗೊಂಡ ವಲಯಗಳಲ್ಲಿ ಮತ್ತು ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತದೆ.

ಚತುರ್ದಶಿ: ಸ್ವಾಭಿಮಾನಿ, ಪರಾಕ್ರಮಿ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವವರು.

ಪೌರ್ಣಮಿ - ಪೌರ್ಣಮಿ ತಿಥಿಯಲ್ಲಿ ಜನಿಸುವವರು ಆಕರ್ಷಕ ವ್ಯಕ್ತಿತ್ವವಿರುವವರು. ಮನಸ್ಸಿನ ಶಕ್ತಿ ಹೆಚ್ಚಾಗಿರುತ್ತದೆ. ಸಮಾಜದಲ್ಲಿ ಮತ್ತು ಮಾನ್ಯತೆ ಪಡೆಯುತ್ತಾರೆ.

ಡಾ. ಪಿ.ಬಿ ರಾಜೇಶ್

ಜ್ಯೋತಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಜ್ಞರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಜಲಸಂಧಿ ಮತ್ತೆ ಸ್ಥಗಿತ, ಜಗತ್ತಿಗೆ ಶಾಕ್ ಕೊಟ್ಟ Iran, ಅಮೆರಿಕ ಮುಂದಿನ ನಡೆಯೇನು?

US-Iran war: ಅಮೆರಿಕಾ ದಾಳಿಗೆ ಇರಾನ್ ತಿರುಗೇಟು; ಬಹ್ರೇನ್-ಕುವೈತ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ, ಯುದ್ಧ ಪುನರಾರಂಭ..!

ವಾಹನ ಸವಾರರಿಗೆ Good news: Ethanol ಮಿಶ್ರಿತ ಪೆಟ್ರೋಲ್ ಮೇಲಿನ ಎಲ್ಲಾ ಸೆಸ್-ಅಬಕಾರಿ ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ..!

ವಾಣಿಜ್ಯ ಹಡಗುಗಳ ಮೇಲಿನ ದಾಳಿ ಒಪ್ಪಲು ಸಾಧ್ಯವಿಲ್ಲ, ಸಮುದ್ರ ಮಾರ್ಗಗಳ ಭದ್ರತೆ ಕಾಪಾಡಿ; ವಿಶ್ವಸಂಸ್ಥೆಯಲ್ಲಿ ಭಾರತ ಗುಡುಗು

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಇರಾನ್ ಮೇಲೆ ಮತ್ತೆ ಅಮೆರಿಕಾ ದಾಳಿ; ಟೆಹ್ರಾನ್ ಕಠಿಣ ಕ್ರಮ, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್..!

SCROLL FOR NEXT