ನವರಾತ್ರಿ ಗೊಂಬೆ ಹಬ್ಬ  
ಭಕ್ತಿ-ಜ್ಯೋತಿಷ್ಯ

ಬೊಂಬೆಗಳ ಹಿಂದೆ ಅಡಗಿರುವ ಕಥೆಗಳು: ನವರಾತ್ರಿ ಗೊಂಬೆಹಬ್ಬದ ವಿಶೇಷತೆ

ಗೊಂಬೆಗಳನ್ನು ಸಾಮಾನ್ಯವಾಗಿ ಒಂಬತ್ತು ಮೆಟ್ಟಿಲುಗಳಲ್ಲಿ (ಗೊಂಬೆ ಜಗಲಿ) ಜೋಡಿಸಲಾಗುತ್ತದೆ. ಇವು ನವರಾತ್ರಿಯ ಒಂಬತ್ತು ದಿನಗಳು ಮತ್ತು ನವಗ್ರಹಗಳನ್ನು ಸೂಚಿಸುತ್ತವೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ 'ಗೊಂಬೆ ಹಬ್ಬ' ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ಕೇವಲ ಮಣ್ಣು ಅಥವಾ ಮರದ ಬೊಂಬೆಗಳನ್ನು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಒಪ್ಪ ಓರಣವಾಗಿ ಅಲಂಕಾರಿಕವಾಗಿ ಜೋಡಿಸಿಡುವುದಷ್ಟೇ ಅಲ್ಲದೆ, ಪ್ರತಿಯೊಂದು ಗೊಂಬೆ ಜೋಡಣೆಯ ಹಿಂದೆ ಸುಂದರವಾದ ಪೌರಾಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಥೆಗಳು ಅಡಗಿರುತ್ತವೆ.

ತಮಿಳುನಾಡಿನಲ್ಲಿ ‘ಕೊಲು/ಗೊಲು’, ಕರ್ನಾಟಕದಲ್ಲಿ ‘ಬೊಂಬೆ ಹಬ್ಬ’ ಹಾಗೂ ಆಂಧ್ರಪ್ರದೇಶದಲ್ಲಿ ‘ಬೊಮ್ಮಲ ಕೊಲುವು’ ಎಂದು ಕರೆಯಲ್ಪಡುವ ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವೆಂದರೆ ಬೆಸ ಸಂಖ್ಯೆಯ ಮೆಟ್ಟಿಲುಗಳಲ್ಲಿ ವಿವಿಧ ಬಗೆಯ ಗೊಂಬೆಗಳು ಹಾಗೂ ಪ್ರತಿಮೆಗಳನ್ನು ಅಲಂಕರಿಸಿ ಪ್ರದರ್ಶನಕ್ಕೆ ಇಡುವುದು.

ನವರಾತ್ರಿ ಗೊಂಬೆಹಬ್ಬದ ಹಿಂದಿನ ಆಳವಾದ ಅರ್ಥಗಳು ಹೀಗಿದೆ:

ಗೊಂಬೆಗಳನ್ನು ಸಾಮಾನ್ಯವಾಗಿ ಒಂಬತ್ತು ಮೆಟ್ಟಿಲುಗಳಲ್ಲಿ (ಗೊಂಬೆ ಜಗಲಿ) ಜೋಡಿಸಲಾಗುತ್ತದೆ. ಇವು ನವರಾತ್ರಿಯ ಒಂಬತ್ತು ದಿನಗಳು ಮತ್ತು ನವಗ್ರಹಗಳನ್ನು ಸೂಚಿಸುತ್ತವೆ.

ಮೇಲಿನ ಮೆಟ್ಟಿಲುಗಳಲ್ಲಿ ದೇವತೆಗಳ ಮೂರ್ತಿಗಳನ್ನು ಇರಿಸಿದರೆ, ಕೆಳಗಿನ ಮೆಟ್ಟಿಲುಗಳಲ್ಲಿ ಮನುಷ್ಯರು, ಪ್ರಾಣಿ-ಪಕ್ಷಿಗಳು ಮತ್ತು ಮಾರುಕಟ್ಟೆಯ ದೃಶ್ಯಗಳನ್ನು ಇರಿಸಲಾಗುತ್ತದೆ.

ಇದು ಇಡೀ ಬ್ರಹ್ಮಾಂಡದ ವಿಕಾಸ ಮತ್ತು ಜೀವಜಗತ್ತಿನ ಪರಸ್ಪರ ಸಂಬಂಧವನ್ನು ನೆನಪಿಸುತ್ತದೆ.

ಪಟ್ಟದ ಬೊಂಬೆಗಳ ಜೋಡಣೆ

ಗೊಂಬೆ ಕೂರಿಸುವಾಗ 'ಪಟ್ಟದ ಗೊಂಬೆಗಳು' (ರಾಜ-ರಾಣಿಯ ಜೋಡಿ) ಅತ್ಯಂತ ಪ್ರಮುಖ ಸ್ಥಾನ ಪಡೆಯುತ್ತವೆ. ಇವುಗಳನ್ನು ಸಾಮಾನ್ಯವಾಗಿ ಶ್ರೀಗಂಧ ಅಥವಾ ಆಲದ ಮರದಿಂದ ತಯಾರಿಸಲಾಗುತ್ತದೆ.

ಗೊಂಬೆಗಳು ಗೃಹಸ್ಥಾಶ್ರಮದ ಗೌರವ ಮತ್ತು ದಾಂಪತ್ಯ ಜೀವನದ ಸಾಮರಸ್ಯವನ್ನು ಪ್ರತಿಬಿಂಬಿಸುತ್ತವೆ. ಹಿಂದೆ ಮದುವೆಯಾದ ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಪಟ್ಟದ ಬೊಂಬೆಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿತ್ತು. ಮೈಸೂರು ಅರಸರ ಸಂಪ್ರದಾಯದ ಗೌರವಾರ್ಥವಾಗಿಯೂ ಇವುಗಳನ್ನು ಪೂಜಿಸಲಾಗುತ್ತದೆ.

ಪೌರಾಣಿಕ ಕಥೆಗಳ ಅನಾವರಣ

ಗೊಂಬೆಗಳ ಜೋಡಣೆಯಲ್ಲಿ ರಾಮಾಯಣ, ಮಹಾಭಾರತ ಮತ್ತು ಭಾಗವತದಂತಹ ಪುರಾಣ ಕಥೆಗಳನ್ನು ದೃಶ್ಯೀಕರಿಸಲಾಗುತ್ತದೆ.

ದಶಾವತಾರ: ವಿಷ್ಣುವಿನ ಹತ್ತು ಅವತಾರಗಳ ಗೊಂಬೆಗಳನ್ನು ಸಾಲಾಗಿ ಜೋಡಿಸಿ, ಧರ್ಮದ ಸಂಸ್ಥಾಪನೆಯ ಕಥೆಯನ್ನು ಮಕ್ಕಳಿಗೆ ವಿವರಿಸಲಾಗುತ್ತದೆ.

ಶ್ರೀಕೃಷ್ಣ ಲೀಲೆ: ಕೃಷ್ಣ ಕಾಳಿಂಗ ಮರ್ದನ ಮಾಡುವುದು, ಗೋಪಿಕೆಯರ ವಸ್ತ್ರಾಪಹರಣ, ಅಥವಾ ಗೋವರ್ಧನ ಗಿರಿಯನ್ನು ಎತ್ತುವ ದೃಶ್ಯಗಳನ್ನು ಸಣ್ಣ ಬೊಂಬೆಗಳ ಮೂಲಕ ಮರುಸೃಷ್ಟಿಸಲಾಗುತ್ತದೆ.

ಕೃಷಿ ಮತ್ತು ಗ್ರಾಮೀಣ ಬದುಕಿನ ಚಿತ್ರಣ

ಗೊಂಬೆ ಹಬ್ಬದ ಮತ್ತೊಂದು ಆಕರ್ಷಣೆಯೆಂದರೆ 'ಗೊಂಬೆ ಸಂತೆ' ಅಥವಾ ಗ್ರಾಮೀಣ ಬದುಕಿನ ದೃಶ್ಯಗಳು.

  • ತರಕಾರಿ ಮಾರುವವರು, ಮಡಕೆ ಮಾಡುವ ಕುಂಬಾರರು, ಹೊಲ ಉಳುಮೆ ಮಾಡುವ ರೈತರು ಮತ್ತು ಮದುವೆ ಮೆರವಣಿಗೆಯ ಬೊಂಬೆಗಳನ್ನು ಇಡಲಾಗುತ್ತದೆ.

  • ಇದು ಸಮಾಜದಲ್ಲಿ ಪ್ರತಿಯೊಬ್ಬ ಶ್ರಮಿಕನೂ ಮುಖ್ಯ ಮತ್ತು ಎಲ್ಲರ ಸಹಬಾಳ್ವೆಯಿಂದಲೇ ಜಗತ್ತು ಸಾಗುತ್ತದೆ ಎಂಬ ಸತ್ಯವನ್ನು ಸಾರುತ್ತದೆ.

ಧಾರ್ಮಿಕ ಹಿನ್ನೆಲೆ

ದುರ್ಗೆಯ ಸೈನ್ಯ ಪೌರಾಣಿಕ ಕಥೆಗಳ ಪ್ರಕಾರ, ಮಹಿಷಾಸುರನನ್ನು ಸಂಹರಿಸಲು ಹೊರಟ ದುರ್ಗಾದೇವಿಗೆ ಬ್ರಹ್ಮ, ವಿಷ್ಣು, ಮಹೇಶ್ವರ ಸೇರಿದಂತೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆ ಎರೆದರು. ಆ ಸಮಯದಲ್ಲಿ ದೇವತೆಗಳೆಲ್ಲರೂ ಶಕ್ತಿಹೀನರಾಗಿ ನಿರ್ಜೀವ ಮೂರ್ತಿಗಳಂತೆ ನಿಂತಿದ್ದರಂತೆ. ಆ ದೇವತೆಗಳ ತ್ಯಾಗವನ್ನು ಸ್ಮರಿಸಲು ನವರಾತ್ರಿಯ ದಿನಗಳಲ್ಲಿ ಗೊಂಬೆಗಳನ್ನು ಇಟ್ಟು ಪೂಜಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು