ನೋಡಲು ತುಂಬಾ ಸ್ಪೈಲಿಶ್. ಓಡಿಸಲು ಕಂಫರ್ಟ್ ಇರುವಂತಹ ಸ್ಪೋರ್ಟ್ಸ್ ಬೈಕ್‌ನ ಹುಡುಕಾಟದಲ್ಲಿ ನೀವಿದ್ದೀರಾ?
ಹಾಗಾದರೆ ಒಮ್ಮೆ ಹೋಂಡಾ ಸಿಬಿಆರ್ 150ಆರ್ ಓಡಿಸಿ ನೋಡಿ. ಕ್ರೇಜಿ ಬೈಕ್ ಆ್ಯಂಡ್ ಕಂಫರ್ಟ್ ಅನುಭವ ನಿಮ್ಮದಾಗಬಹುದು.
ಹೋಂಡಾ ಸಿಬಿಆರ್ 250ಆರ್‌ನಂತೆಯೇ ಗ್ರಾಹಕರಿಗೆ ರೈಡಿಂಗ್ ಥ್ರಿಲ್ ನೀಡುವ ಮತ್ತು ಯಮಹಾ ಆರ್15ಗೆ ಪೈಪೋಟಿ ನೀಡುವ ಉದ್ದೇಶದಿಂದ ಹೋಂಡಾ ನೂತನವಾಗಿ ಸಿಬಿಆರ್ 150ಆರ್ ಬಿಡುಗಡೆ ಮಾಡಿದೆ. ಸಿಬಿಆರ್ 250ಆರ್‌ಗೆ ಹೋಲಿಕೆ ಮಾಡಿದರೆ, ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ಹಣದಲ್ಲಿ ಬೈಕ್ ಸಿಗಲಿದೆ.
ಎರಡು ಡಿಸ್ಕ್ ಬ್ರೇಕ್ ನಿಮ್ಮ ವೇಗದ ರೈಡಿಂಗ್‌ಗೆ ಉತ್ತಮವಾದ ಬ್ರೇಕ್ ನೀಡಲಿದೆ. ಬೈಕ್‌ನ ಮುಂಭಾಗದಲ್ಲಿರುವ ಕೌಲಿಂಗ್(ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲಿನ ಹೊದಿಕೆ) ರೇಸಿಂಗ್ ಬೈಕ್‌ನ ರೂಪ ನೀಡಿದೆ. ಕ್ರಿಸ್ಟಲ್ ಕ್ಲಿಯರ್ ಗ್ಲಾಸ್‌ನ ಹೆಡ್‌ಲೈಟ್, ಟ್ಯೂಬ್‌ಲೆಸ್ ಟಯರ್ ಹೊಂದಿದೆ. ಬೈಕ್ ಎಂಜಿನ್ ಕೂಲ್ ಮಾಡಲು ಲಿಕ್ವಿಡ್ ಕೂಲಿಂಗ್ ಅಳವಡಿಸಿದ್ದು, ಎಂಜಿನ್ ಬಿಸಿ ಆಗದಂತೆ ನೋಡಿಕೊಳ್ಳಲಿದೆ.
ಬಹುತೇಕ 150 ಸಿಸಿ ಬೈಕ್‌ಗಳಿಗೆ ಐದು ಗೇರ್ ಇರುವುದು ಸಾಮಾನ್ಯ. ಆದರೆ, ಈ ಸಿಬಿಆರ್ 150ಆರ್ ಬೈಕ್‌ಗೆ 6 ಗೇರ್‌ಗಳಿವೆ. ಇದರಿಂದ ಉತ್ತಮ ಸ್ಪೀಡ್ ರೈಡಿಂಗ್ ಗ್ರಾಹಕನಿಗೆ ಮತ್ತಷ್ಟು ವಿಶಿಷ್ಟ ಅನುಭವ ನೀಡಲಿದೆ.
ಸೀಟ್ ಸ್ಪೇಸ್
ಬೈಕ್‌ನಲ್ಲಿ ರೈಡಿಂಗ್ ಹೋಗುವ ಸಂದರ್ಭದಲ್ಲಿ ಬಳಸುವ ಕೈ ಚೀಲ ಮತ್ತು ಜಾಕೆಟ್ ಅನ್ನು ಬೈಕ್‌ನಲ್ಲೇ ಇಟ್ಟುಕೊಳ್ಳಬಹುದು. ಇದಕ್ಕಾಗಿ ಬೈಕಿನ ಸೀಟ್ ಅಡಿಯಲ್ಲಿ ಅಲ್ಪಮಟ್ಟದ ಜಾಗ ನೀಡಲಾಗಿದೆ. ಹೀಗಾಗಿ ನೀವು ಜಾಕೆಟ್ ಅವಶ್ಯ ಇಲ್ಲ ಎಂದಾಗ ಸುರಕ್ಷಿತವಾಗಿ ಅಡಗಿಸಿ ಇಡಬಹುದಾಗಿದೆ. ಇದಕ್ಕೆ ಲಾಕ್ ವ್ಯವಸ್ಥೆಯೂ ಇದೆ.
ಕಲರ್ ಕಲರ್
ಸಿಬಿಆರ್ 150ಆರ್ ನಾಲ್ಕು ಕಲರ್‌ಗಳಲ್ಲಿ ಲಭ್ಯವಿದೆ. ಸ್ಪೋರ್ಟ್ಸ್ ರೆಡ್, ಬ್ಲಾಕ್ ಆ್ಯಂಡ್ ಪರ್ಲ್ ಸನ್‌ಬೀಮ್ ವೈಟ್, ಬ್ಲಾಕ್ ಅಂಡ್ ಕ್ಯಾಂಡಿ ಪ್ಲಮ್ ಗ್ರೀನ್, ವೈಬ್ರೆಂಟ್ ಆರೆಂಜ್‌ಗಳಲ್ಲಿ ಲಭ್ಯವಿದೆ. ಬೈಕ್‌ನ ಮೇಲಿರುವ ಸ್ಟಿಕರಿಂಗ್ ಸಹ ರೇಸಿಂಗ್ ಥ್ರೀಲ್ ನೀಡಲಿದೆ.
- ದೇವರಾಜ್ ಎಲ್.
djtrupti@gmail.com