ಎಲ್ಲೆಲ್ಲೂ ಸೌಂದರ್ಯವೇ...
ಹುಡುಕುವ ಕಣ್ಣಿದ್ದರೆ ಎಲ್ಲೆಲ್ಲೂ ಸೌಂದರ್ಯವನ್ನು ನೋಡಬಹುದು. ಕೇವಲ ಹುಲ್ಲೆಂದು ಅವಗಣನೆಗೆ ಒಳಗಾಗುವ ಹುಲ್ಲೂ ಚೆಲುವನ್ನು ತೋರಿಸಬಲ್ಲದು. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ-
ನಾನು ಹಸುಗಳಿಗೆಂದು ಒಂದಿಷ್ಟು ಸರಕಾರಿ ಹುಲ್ಲು ನಾಟಿ ಮಾಡಿದ್ದೆ. ಅವುಗಳಲ್ಲಿ ಕೆಲವನ್ನು ಕಡಿದು ಹಸುಗಳಿಗೆ ಹಾಕದೆ ಹಾಗೇ ಬಿಟ್ಟಿದ್ದೆ. ಹಾಗೆ ಬಿಟ್ಟ ಹುಲ್ಲುಗಳಲ್ಲಿ ಒಂದೊಂದೇ ತೆನೆಗಳು ಮೂಡುತ್ತಿದ್ದವು. ಅವು ಬಿಳಿ, ಕಂದು, ಕೆಂಪು ಮೊದಲಾದ ಬಣ್ಣಗಳಿಂದ ಕೂಡಿದ್ದವು. ಅವುಗಳಿಗೆ ಮರುಳಾದ ನಾನು ಅವುಗಳ ಸೌಂದರ್ಯವನ್ನು ನನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಿಕೊಂಡೆ. ಹಾಗೆ ಕ್ಲಿಕ್ಕಿಸಿಕೊಂಡ ಮುದ್ದಾದ ಚಿತ್ತಾರಗಳು ನೀವೂ ನೋಡಿ ಆನಂದಿಸಲಿ ಎಂಬ ಉದ್ದೇಶದಿಂದ ಇಲ್ಲಿವೆ.
- ಗಣಪತಿ ಬಾಳೆಗದ್ದೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.