ವಾಹನ

ಹ್ಯಾಪಿ ಜರ್ನಿ

1. ಬೇಗ ಹೊರಡಿ
ಸಾರಿಗೆ ಸಂಸ್ಥೆಯಾ ಖಾಸಗಿ ಬಸ್, ರೈಲ್ವೆ, ವಿಮಾನ- ಯಾವುದರಲ್ಲೇ ನಿಮ್ಮ ಪ್ರಯಾಣ ಇರಲಿ. ಸಾಕಷ್ಟು ಬೇಗ ಮನೆಯಿಂದ ಹೊರಡಿ. ಕನಿಷ್ಠ ಅರ್ಧಗಂಟೆ ಮೊದಲು ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಇರಿ. ವಿಮಾನ ಯಾನವಾದರೆ (ದೇಶಿ) ಕಡೇಪಕ್ಷ ಒಂದು ಗಂಟೆ ಮೊದಲು ಏರ್‌ಪೋರ್ಟ್ ತಲುಪಿ. ಚೆಕ್ ಇನ್ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಿಕೊಂಡು ಬೋರ್ಡಿಂಗ್ ಪಾಸ್ ಪಡೆಯಲು ಸಿದ್ಧರಾಗಿ.

2. ಲಘು ತಿಂಡಿ ಇರಲಿ

ಅದು ನಾಲ್ಕೈದು ಗಂಟೆಗಳ ಪ್ರಯಾಣ ಇರಬಹುದು, ದೀರ್ಘ ಪ್ರಯಾಣ ಆಗಿರಬಹುದು. ನಿಮ್ಮ ಬ್ಯಾಗ್‌ನಲ್ಲಿ ಬಿಸ್ಕತ್, ಕೇಕ್‌ನಂತಹ ಸ್ನ್ಯಾಕ್ಸ್‌ಗಳು, ಏನಾದರೂ ಹಣ್ಣುಗಳನ್ನು ಇಟ್ಟುಕೊಂಡಿರಿ. ಹಸಿದ ಹೊಟ್ಟೆ ಇಟ್ಟುಕೊಂಡು ಪ್ರಯಾಣ ಮಾಡುವುದು ಒಳ್ಳೆಯದಲ್ಲ. ನಿಮಗೆ ಹಸಿವಾದಾಗಲೇ ವಾಹನ ನಿಲ್ಲುವುದಿಲ್ಲ ಅಲ್ಲವೆ? ನೀರಿನ ಬಾಟಲ್ ತಪ್ಪದೇ ಜತೆಯಲ್ಲಿ ಇಟ್ಟುಕೊಳ್ಳಿ.

3. ವಾಂತಿ ಮಾತ್ರೆ ಮರೆಯಬೇಡಿ
ಕೆಲವರಿಗೆ ಪ್ರಯಾಣ ಆರಂಭಿಸಿದ ತಕ್ಷಣ ವಾಂತಿ ಆಗುತ್ತದೆ. ಇನ್ನು ಕೆಲವರಿಗೆ ಹವಾನಿಯಂತ್ರಿತ ಬಸ್, ಬೋಗಿಗಳು ಆಗಿಬರುವುದಿಲ್ಲ. ಅಂಥವರು ಪ್ರಯಾಣ ಆರಂಭಕ್ಕೆ ಅರ್ಧ ಗಂಟೆ ಮೊದಲು ವಾಂತಿ ಮಾತ್ರೆ ತೆಗೆದುಕೊಳ್ಳುವುದು, ಬ್ಯಾಗ್‌ನಲ್ಲಿ ವಾಂತಿ ಮಾತ್ರೆಗಳನ್ನು ಇಟ್ಟುಕೊಳ್ಳುವುದು ಉತ್ತಮ.

4. ಜಾಸ್ತಿ ಕುಡಿಯಬೇಡಿ
ವಾಹನ ಏರುವ ಮುನ್ನ ಮಲ-ಮೂತ್ರ ವಿಸರ್ಜನೆಗಳನ್ನು ಮುಗಿಸಿಕೊಳ್ಳಿ. ಪ್ರಯಾಣ ಅವಧಿಯಲ್ಲಿ ಜಾಸ್ತಿ ನೀರು ಕುಡಿಯಬೇಡಿ. ಬಾಯಾರಿಕೆ ಆದರೂ ಅದನ್ನು ಇಂಗಿಸಲು ಎಷ್ಟು ಬೇಕೋ ಅಷ್ಟೇ ನೀರು ಕುಡಿಯಿರಿ. ಜಾಸ್ತಿ ನೀರು ಕುಡಿಯುವುದರಿಂದ ಪದೆಪದೇ ಮೂತ್ರ ವಿಸರ್ಜನೆಯ ಭಾದೆ ಕಾಡಬಹುದು.

5. ಸಂಗೀತ ಕೇಳಿ
ಪ್ರಯಾಣ ಕಾಲದಲ್ಲಿ ಪುಸ್ತಕಕ್ಕಿಂತ ಒಳ್ಳೆ ಸ್ನೇಹಿತ ಇಲ್ಲ. ಕೆಲವರಿಗೆ ಪ್ರಯಾಣಿಸುತ್ತಿರುವಾಗ ಓದುವುದು ಅಷ್ಟು ಆರಾಮ ಅನ್ನಿಸದೇ ಇರಬಹುದು. ಅಂಥವರು ತಮ್ಮ ಮೊಬೈಲ್‌ನಲ್ಲಿ ಇಷ್ಟದ ಹಾಡುಗಳನ್ನು ಹಾಕಿಟ್ಟುಕೊಳ್ಳಬಹುದು. ಐಪಾಡ್ ಕೂಡ ಒಳ್ಳೆ ಸಂಗಾತಿ.

ದಿ ಟ್ರಾವೆಲ್ ಅಂಡ್ ಟೂರಿಸಂ ಕಾಂಪಿಟೇಟಿವ್‌ನೆಸ್ ರಿಪೋರ್ಟ್ 2011ರ ಪ್ರಕಾರ ವಿಶ್ವ ಪ್ರವಾಸೋದ್ಯಮದಲ್ಲಿ ಭಾರತದ ಸ್ಥಾನ. 139 ದೇಶಗಳನ್ನು ಈ ವರದಿಗಾಗಿ ಪರಿಗಣಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!