ವಾಹನ

ಮಹೀಂದ್ರಾ ಮಿನಿ ಎಸ್‌ಯುವಿ

ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂದು ನಂಬುವುದು ಕಷ್ಟ. ಯಾಕೆಂದರೆ ಎಸ್‌ಯುವಿ ಕ್ಷೇತ್ರದಲ್ಲಿ ಪ್ರಸಿದ್ಧಿ ಗಳಿಸಿರುವ ಮಹೀಂದ್ರಾ ಕಂಪನಿ ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿ ಮುಗ್ಗರಿಸಿದೆ. ಮಹೀಂದ್ರಾ ಎಕ್ಸ್‌ಯುವಿ 500 ಮಾದರಿಯನ್ನೇ ಚಿಕ್ಕದುಗೊಳಿಸಿ ಮಾರುಕಟ್ಟೆಗೆ ಬಿಡಲಿದೆ ಎಂಬ ಸುದ್ದಿ ಇತ್ತು. ಮಹೀಂದ್ರಾ ಕಂಪನಿ ಕೊರಿಯನ್ ಕಂಪನಿಯಾದ ಸಂಗ್‌ಯಾಂಗ್ ಕಂಪನಿಯನ್ನು ಖರೀದಿಸಿದ್ದು, ಸಂಗ್‌ಯಾಂಗ್ ಕಂಪನಿ ಇತ್ತೀಚೆಗೆ ಆಸ್ಟ್ರೇಲಿಯಾದ ಮಾರುಕಟ್ಟೆಗೆ ಎಸ್‌ಐವಿ 1 ಎಂಬ ವಾಹನವನ್ನು ಬಿಡುಗಡೆ ಮಾಡಿದೆ. ಅದನ್ನು ನೋಡಿದರೆ ಭಾರತದಲ್ಲಿ ಮಹೀಂದ್ರಾ ಮಿನಿ ಎಸ್‌ಯುವಿ ಯಾವರೀತಿ ಇರಬಹುದು ಎಂಬ ಅಂದಾಜು ಮೂಡುತ್ತದೆ ಎನ್ನುವ ಮಾತುಗಳು ಉದ್ಯಮದಲ್ಲಿ ಹರಿದಾಡುತ್ತಿವೆ.  ಆದರೆ ಮಿನಿ ಎಸ್‌ಯುವಿ ದರಕ್ಕೆ ಎಸ್‌ಐವಿ 1 ಮಾದರಿಯ ಕಾರು ಮಾರುಕಟ್ಟೆಗೆ ಬಿಡುವುದು ಕಷ್ಟವೇನೋ ಎಂಬ ಅನುಮಾನ ಮೂಡುತ್ತದೆ. ಆದರೆ ವಾಹನದ ಶೈಲಿಯನ್ನು ಹಾಗೇ ಇರಿಸಿಕೊಂಡು ಆಂತರಿಕ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿದರೆ ಮಾತ್ರ ಇದು ಸಾಧ್ಯವಾಗಬಹುದು. ಈ ಬಗ್ಗೆ ಮಹೀಂದ್ರಾ ಕಂಪನಿ ಈ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲವಾದ್ದರಿಂದ, ಮಿನಿ ಎಸ್‌ಯುವಿ ಯೋಜನೆ ಯಾವ ಹಂತದಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮಹೀಂದ್ರಾ ಕಂಪನಿ ಪೈಪೋಟಿ ನೀಡುವ ದರ ನಿಗದಿಮಾಡುವಲ್ಲಿ ಪ್ರಸಿದ್ಧಿ ಗಳಿಸಿರುವುದರಿಂದ ಮಹೀಂದ್ರಾ ಮಿನಿ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಿದರೆ ದರ ಪೈಪೋಟಿ ಏರ್ಪಡಬಹುದು ಎಂಬ ನಿರೀಕ್ಷೆಯಿದೆ. ಆದರೆ ಮಹೀಂದ್ರಾ ಮಿನಿ ಎಸ್‌ಯುವಿ 2014ರ ಅಂತ್ಯಕ್ಕೆ ಮಾರುಕಟ್ಟೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಫೋರ್‌ವ್ಹೀಲ್ ಡ್ರೈವ್ ಮತ್ತು ಆಟೋಮ್ಯಾಟಿಕ್ ಗೇರ್ ಮಾದರಿಯ ವಾಹನಗಳು ಕೂಡ ಬರುವ ನಿರೀಕ್ಷೆಯಿದೆ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ