ವಾಹನ

ವೀಲ್ ಕಮ್

ಕಾರು-ಬೈಕುಗಳಿಗೆ ಇದ್ದಿದ್ದು ರಿಮ್ ಮಾತ್ರ. ಆದರೆ ಮ್ಯಾಗ್‌ವೀಲ್ ಮತ್ತು ಅಲಾಯ್‌ವೀಲ್‌ಗಳು ಕಾಲಿಟ್ಟನಂತರ ಗ್ರಾಹಕರಿಗೆ ಸಾವಿರಾರು ಆಯ್ಕೆಗಳು. ಎಷ್ಟು ಎಂದರೆ ಮ್ಯಾಗ್‌ವೀಲ್-ಅಲಾಯ್‌ವೀಲ್‌ಗಳ ಅಂಗಡಿ ಹೊಕ್ಕರೆ ಗ್ರಾಹಕ ಕಕ್ಕಾಬಿಕ್ಕಿಯಾಗವಷ್ಟು!
ಈಗ ಸಾಮಾನ್ಯವಾಗಿ ಬುಹೇತಕ ಕಾರುಗಳ ಆರಂಭಿಕ ಮಾದರಿಗಳಿಗೆ ಮಾತ್ರ ರಿಮ್ ಬಳಸಲಾಗುತ್ತಿದೆ. ಆರಂಭಿಕ ಮಾದರಿಗಳನ್ನು ಖರೀದಿಸಿದವರು ಕೂಡ ಮ್ಯಾಗ್‌ವೀಲ್ -ಅಲಾಯ್‌ವೀಲ್‌ಗಳ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಕಾರು ಉತ್ಪಾದಕ ಸಂಸ್ಥೆಗರೂ ಮ್ಯಾಗ್‌ವೀಲ್-ಅಲಾಯ್‌ವೀಲ್‌ಗಳನ್ನು ಕಾರಿನ ಪ್ರಮುಖ ಆಕರ್ಷಣೆಯಾಗಿ ಬಳಸುತ್ತಿವೆ.
ಉಪಯೋಗ
ಹಾಗಾದರೆ ಮ್ಯಾಗ್‌ವೀಲ್-ಅಲಾಯ್‌ವೀಲ್‌ಗಳು ಅಂದಕ್ಕೆ ಮಾತ್ರಾನಾ?
ಕೇವಲ ಅಂದಕ್ಕೆ ಅಂತ ನೀವು ಅಂದುಕೊಂಡಿರಬಹುದು. ಆದರೆ ಅರಿವಿಗೇ ಬಾರದ ಕೆಲವು ಸಂಗತಿಗಳು ಅವುಗಳಲ್ಲಿವೆ.
ಸಾಮಾನ್ಯವಾದ ಕಬ್ಬಿಣದ ರಿಮ್‌ಗಳಿಗಿಂತ ಅಲಾಯ್‌ವೀಲ್‌ಗಳು ಹಗುರ ಮತ್ತು ಗಟ್ಟಿಯಾದ ಅಲ್ಯುಮಿನಿಯಂ ಮತ್ತು ಮ್ಯಾಗ್ನೇಶಿಯಂನಿಂದ ತಯಾರಾಗಿರುವುದರಿಂದ ಹೆಚ್ಚು ಬಾಳಿಕೆ ಬರುತ್ತವೆ. ಭಾರವೂ ಕಡಿಮೆ. ಈ ಕಾರಣಕ್ಕಾಗಿಯೇ ಇವು ನಿಮ್ಮ ಕಾರಿನ ಇಂಧನ ಕ್ಷಮತೆಯನ್ನು ಹೆಚ್ಚಿಸಬಲ್ಲವು. ಆದರೆ ಅಲಾಯ್‌ವೀಲ್ ಹಾಕಿಸೋದಿಕ್ಕೆ ಅದೊಂದೇ ಕಾರಣವಲ್ಲ.
ಅಲ್ಯುಮಿನಿಯಂ ಉತ್ತಮ ಉಷ್ಣ ವಾಹಕ. ಆದ್ದರಿಂದ ಅದು ಟಯರ್ ಮತ್ತು ರಸ್ತೆಯ ಘರ್ಷಣೆಯಿಂದ ಉಂಟಾಗುವ ಬಿಸಿಯನ್ನು ಬೇರೆಡೆಗೆ ವರ್ಗಾಯಿಸುವ ಸಾಧನವಾಗಿ ಕೆಲಸ ಮಾಡುತ್ತದೆ. ಹೀಗಾಗಿಯೇ ಬ್ರೇಕ್‌ಗಳು ಹೆಚ್ಚು ಬಿಸಿಯಾಗುವುದನ್ನು ಮತ್ತು ಆ ಮೂಲಕ ಸರಿಯಾಗಿ ಕೆಲಸ ಮಾಡದಿರುವುದನ್ನು ಇದು ತಡೆಯುತ್ತದೆ.
ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿ ಮ್ಯಾಗ್‌ವೀಲ್-ಅಲಾಯ್‌ವೀಲ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಸಾಲೇ ಇದೆ. ಅಲ್ಲಿ ಹೋಗೋದು ಕಷ್ಟ ಅಂದರೆ ಮ್ಯಾಗ್‌ವೀಲ್-ಅಲಾಯ್‌ವೀಲ್‌ಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗಳೂ ಕೂಡ ಇದೆ. www.changemytyre.com, www.alloywheelsindia.com, www.indiaalloywheels.com ಮುಂತಾದ ವೆಬ್‌ಸೈಟ್‌ಗಳು ಇವುಗಳನ್ನು ಮಾರಾಟ ಮಾಡುತ್ತಿವೆ. ವೆಬ್‌ಸೈಟ್‌ಗಳಲ್ಲಿ ಅಲಾಯ್‌ವೀಲ್‌ಗಳ ಬಗ್ಗೆ ಸಾಕಷ್ಟು ಮಾಹಿತಿಯೂ ಇದೆ. ಹೀಗಾಗಿ ಅಲಾಯ್‌ವೀಲ್‌ಗಳ ಬಗ್ಗೆ ಸಾಕಷ್ಟು ತಿಳಿದುಕೊಂಡ ನಂತರವೇ ಖರೀದಿಸಲು ಅವಕಾಶವಿದೆ.
ಅಂಗಡಿಗಳಲ್ಲಿ ಸೀಮಿತ ಶೈಲಿ-ವಿನ್ಯಾಸದ ಅಲಾಯ್‌ವೀಲ್‌ಗಳಿರುತ್ತವೆ. ವೆಬ್‌ಸೈಟ್‌ಗಳಲ್ಲಿ ಬೇಕಾದಷ್ಟು ವಿನ್ಯಾಸದ್ದಿವೆ. ನಿಮಗೆ ಪುರುಸೊತ್ತಿದ್ದಾಗೆಲ್ಲ ನೋಡಿ, ಇದ್ದುದರಲ್ಲಿ ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಒಂದೇ ಒಂದು ಎಂದರೆ ಬಾರ್ಗೇನ್ ಮಾಡಲು ಅವಕಾಶವಿಲ್ಲ. ಆದರೆ, ವೆಬ್‌ಸೈಟ್‌ಗಳಲ್ಲಿ ದರ ಕೊಂಚ ಕಡಿಮೆಯೇ ಇದೆ.
ವಿಶೇಷವಾಗಿ ಸಾಯಿ ಮ್ಯಾಗ್‌ವೀಲ್ಸ್ (www.alloywheelsindia.com) ವೆಬ್‌ಸೈಟ್‌ನಲ್ಲಿ ಫ್ರೀಮೆನ್, ಯೋಂಗಲ್, ಸ್ಟಾರ್ ರೇಸಿಂಗ್, ಹಿಜಾಯ್ನ್ ಮುಂತಾದ ಪ್ರಸಿದ್ಧ ಕಂಪನಿಗಳ ಅಲಾಯ್‌ವೀಲ್‌ಗಳು ಲಭ್ಯವಿವೆ. ಅಲಾಯ್‌ವೀಲ್‌ಗಳನ್ನು ಕೇವಲ ಚೆಂದ ನೋಡಿ ಖರೀದಿ ಮಾಡಿದರೆ ಸಾಲದು. ನೀವು ಹೆಚ್ಚಾಗಿ ನಗರ ಪ್ರದೇಶದಲ್ಲೇ ಓಡಾಡುವವರಾಗಿದ್ದರೆ ಕಡಿಮೆ ಸ್ಪೋಕ್ಸ್ ಇರುವ ಅಲಾಯ್‌ವೀಲ್‌ಗಳನ್ನು ಖರೀದಿಸಿ. ಅದೇ ನೀವು ಹೆಚ್ಚು ಹೆದ್ದಾರಿಯಲ್ಲಿ ಮತ್ತು ವೇಗವಾಗಿ ಚಲಿಸುವವರಾಗಿದ್ದರೆ ಹೆಚ್ಚು ಸ್ಪೋಕ್ಸ್ ಇರುವ ಅಲಾಯ್‌ವೀಲ್‌ಗಳನ್ನು ಹಾಕಿಸಿ.
ಗಾತ್ರದ ಬಗ್ಗೆ ಗಮನವಿಡಿ
ಅಲಾಯ್‌ವೀಲ್‌ಗಳನ್ನು ಅಳವಡಿಸುವಾಗ ಸಾಕಷ್ಟು ಜನ ದೊಡ್ಡ ಅಲಾಯ್‌ವೀಲ್‌ಗಳನ್ನು ಅಳವಡಿಸುತ್ತಾರೆ. ಕಂಪನಿಯವರು ಮೈಲೇಜ್ ಮತ್ತು ವಾಹನದ ಸಮತೋಲನಗಳನ್ನು ಗಮನದಲ್ಲಿಟ್ಟುಕೊಂಡು ರಿಮ್ ಮತ್ತು ಟಯರ್ ಗಾತ್ರವನ್ನು ನಿರ್ಧರಿಸಿರುತ್ತಾರೆ. ಆದ್ದರಿಂದ ಇದನ್ನು ಬದಲಾಯಿಸುವಾಗ ನೀವು ಕೂಡ ಅಷ್ಟೇ ಅಧ್ಯಯನ ಮಾಡುವುದು ಅಗತ್ಯ. ನೀವು ಏನೇ ಮಾಡಿದರೂ ಮೂಲ ಗಾತ್ರಕ್ಕಿಂತ ಶೇ.3ಕ್ಕಿಂತ ಹೆಚ್ಚಿನ ಗಾತ್ರದ ಅಲಾಯ್‌ವೀಲ್ ಅಳವಡಿಸಬೇಡಿ. ಇದು ವಾಹನದ ಅಂದ, ಮೈಲೇಜ್ ಮತ್ತು ಸಮತೋಲನವನ್ನು ಕೆಡಿಸುತ್ತದೆ ಎಂಬುದನ್ನು ನೆನಪಿಡಿ. ಅಲಾಯ್‌ವೀಲ್ ಗಾತ್ರ ಹೆಚ್ಚಿಸಿದಾಗ ಅದಕ್ಕೆ ಸಮಾನಾಂತರವಾಗಿ ಟಯರ್‌ನ ಗಾತ್ರವನ್ನೂ ಕೊಂಚ ಹೆಚ್ಚು ಕಡಿಮೆ ಮಾಡಬೇಕಾಗುತ್ತದೆ.

ಮ್ಯಾಗ್‌ವೀಲ್ ಅಲಾಯ್‌ವೀಲ್ ಎರಡೂ ಒಂದೇನಾ?
ನಿಮಗೆ ಮ್ಯಾಗ್‌ವೀಲ್-ಅಲಾಯ್‌ವೀಲ್ ಎಂದು ಯಾಕೆ ಎರಡನ್ನೂ ಬಳಸುತ್ತಿದ್ದಾರೆ? ಎರಡೂ ಒಂದೇ ಅಲ್ಲವೇ? ಎಂಬ ಅನುಮಾನ ಕಾಡುತ್ತಿರಬಹುದು. ಇವೆರಡರ ನಡುವೆ ವ್ಯತ್ಯಾಸ ಇರುವುದರಿಂದಲೇ ಹಾಗೆ ಬರೆದಿದ್ದು.
ಮ್ಯಾಗ್ನೇಶಿಯಂನಿಂದ ಮಾಡಿದ್ದು ಮ್ಯಾಗ್‌ವೀಲ್. ಅಲ್ಯೂಮಿನಿಯಂನಿಂದ ನಿರ್ಮಿಸಿದ್ದು ಅಲಾಯ್‌ವೀಲ್. ಇವೆರಡನ್ನೂ ಮಿಶ್ರಣಮಾಡಿ ನಿರ್ಮಿಸಿದ ಮ್ಯಾಗ್‌ವೀಲ್‌ಗಳೂ ಬರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಮ್ಯಾಗ್‌ವೀಲ್ ಅಥವಾ ಅಲಾಯ್‌ವೀಲ್ ಎಂದು ಕರೆಯಲಾಗುತ್ತದೆ.

-ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!