ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಹನ

ಸುಲಭದಲ್ಲಿ ವೋಲ್ವೊ?

Mainashree
Updated On : 22 Jan 2013, 4:47 am

ಭಾರತದಲ್ಲಿನ ಐಷಾರಾಮಿ ಬಸ್‌ಗಳನ್ನು ನೆನೆಸಿಕೊಂಡಾಗ ನೆನಪಾಗುವುದು ವೋಲ್ವೊ ಕಂಪನಿ. ಆದರೆ ವಿದೇಶದಲ್ಲಿ ವೋಲ್ವೊ ಕಂಪನಿಯು ಐಷಾರಾಮಿ ಕಾರುಗಳಿಂದಲೂ ಚಿರಪರಿಚಿತವಾಗಿದೆ.
ಭಾರತದಲ್ಲಿ ಈ ಕಾರುಗಳಿಗೆ ಮಾರುಕಟ್ಟೆಯಿದ್ದರೂ ಅಧಿಕ ಸೇವಾ ತೆರಿಗೆಯ ಕಾರಣದಿಂದ ಸಾಮಾನ್ಯ ಗ್ರಾಹಕರಿಗೆ ಗಗನ ಕುಸುಮವಾಗಿದೆ. ಇದೇ ಕಾರಣದಿಂದ ಬೆರಳೆಣಿಕೆಯ ವೋಲ್ವೊ ಕಾರುಗಳು ಮಾತ್ರ ರಸ್ತೆಯಲ್ಲಿ ಕಾಣುತ್ತವೆ. ಆದರೆ ಭಾರತೀಯ ಮಾರುಕಟ್ಟೆಯ ಬೂಮ್ ಅರಿತಿರುವ ವೋಲ್ವೊ ಕಂಪನಿಯು ದೇಶದಲ್ಲಿ ಕಾರು ತಯಾರಿಕೆ ಘಟಕ ಪ್ರಾರಂಭಿಸಲು ಮುಂದಾಗಿದೆ.ಭಾರತದ ತೆರಿಗೆ ನಿಯಮದ ಅನ್ವಯ ಸ್ವೀಡಿಷ್ ಮೂಲದ ಪ್ರತಿ ವೋಲ್ವೊ ಕಾರುಗಳ ಮೇಲೆ ಶೇ.108-ಶೇ.110 ಸೇವಾ ತೆರಿಗೆ ಹಾಕಲಾಗುತ್ತದೆ. ಇದರಿಂದ ಕಾರುಗಳ ಬೆಲೆ ದುಪ್ಪಟ್ಟಾಗುತ್ತದೆ. ಇದೇ ಕಾರಣದಿಂದ ಭಾರತದಲ್ಲಿನ ಗ್ರಾಹಕರು ವೋಲ್ವೊ ಕಾರುಗಳಿಂದ ದೂರವಾಗಿದ್ದಾರೆ. 2020ರ ವೇಳೆಗೆ ಕಾರು ಮಾರಾಟವನ್ನು ವಾರ್ಷಿಕ 4.40 ಲಕ್ಷದಿಂದ 8 ಲಕ್ಷಕ್ಕೆ ಏರಿಸಲು ಕಂಪನಿ ನಿರ್ಧರಿಸದೆ. ಭಾರತೀಯ ಗ್ರಾಹಕರು ಪ್ರತಿವರ್ಷ 20 ಸಾವಿರ ಕಾರುಗಳನ್ನು ಕೊಳ್ಳಲಿದ್ದಾರೆ ಎಂಬ ಆಶಾಭಾವನೆಯಲ್ಲಿ ಕಂಪನಿಯಿದೆ. ಭಾರತದಲ್ಲಿ ತಯಾರಿಕೆ ಘಟಕವಿಲ್ಲದಿದ್ದರೂ ಪ್ರತಿವರ್ಷ ಸುಮಾರು 820 ಕಾರುಗಳು ಮಾರಾಟವಾಗುತ್ತಿವೆ. ಕಾರು ತಯಾರಿಕೆ ಘಟಕವು ಕರ್ನಾಟಕ ಅಥವಾ ಗುಜರಾತ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments