ಚಾರ್ಮೋಡಿ!
ಚಾರ್ಮಾಡಿ ಘಾಟಿಯ ಒಡಲಲ್ಲಿ ಹಲವು ಜಲಪಾತಗಳು ಧುಮ್ಮಿಕ್ಕುತ್ತವೆ. ಮಳೆಗಾಲದಲ್ಲಿ ಮಧ್ಯಾಹ್ನ 12 ಗಂಟೆಯಾದರೂ ಇಲ್ಲಿ ಮಂಜು ಕರಗುವುದಿಲ್ಲ. ಇಲ್ಲಿನ ಕಡಿದಾದ ರಸ್ತೆಗಳಿಗೆ ತಿಲಕವಿಟ್ಟಂತೆ ಈ ಬೆಳ್ನೊರೆಯ ಜಲಪಾತಗಳು ಕಂಗೊಳಿಸುತ್ತವೆ. ಇವುಗಳದ್ದು ಬಾನೆತ್ತರದ ನೋಟ. ದಟ್ಟ ಕಾನನದ ನಡುವೆ ಜುಳು ಜುಳು ನಾದದ ಸೊಬಗು. ಹಕ್ಕಿಗಳ ಕಲರವ ಬೆರೆತ ನೀರಿನ ಭೋರ್ಗರೆತ.
ಚಾರ್ಮಾಡಿ ಎಂಬ ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ರಸ್ತೆ ವ್ಯಾಪ್ತಿಯ ಅತ್ಯದ್ಭುತ ಘಾಟಿ ಇದು. ಚಾರ್ಮಾಡಿಯು ಕೊಟ್ಟಿಗೆಹಾರ ಮತ್ತು ಬಣಕಲ್ ಊರುಗಳಿಗೆ ಹತ್ತಿರವಿದೆ. ಉಜಿರೆಯಿಂದ 11 ಕಿ.ಮೀ.ನಿಂದ ಆರಂಭವಾಗಿ ಮೂಡಿಗೆರಿಯಿಂದ 14 ಕಿ.ಮೀ. ದೂರದ ಕೊಟ್ಟಿಗೆಹಾರದವರೆಗೆ ಚಾರ್ಮಾಡಿ ಘಾಟ್ನ ಅಂದ ಹರಡಿದೆ.
ನೀವು ಈ ಘಾಟಿಗೆ ಭೇಟಿ ಕೊಟ್ಟರೆ ಉಜಿರೆಯಿಂದ 9 ಕಿ.ಮೀ. ದೂರದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೂ ತೆರಳಬಹುದು. ಕೊಟ್ಟಿಗೆಹಾರ- ಕಳಸ ಮಾರ್ಗದಲ್ಲಿ ಸಾಗುವಾಗ ಸುಂಕಸಾಲೆಯಿಂದ 10 ಕಿ.ಮೀ. ಅಂತರದಲ್ಲಿ ಬೆಟ್ಟದ ಮೇಲಿನ ಬಳ್ಳರಾಯನದುರ್ಗ ಕೋಟೆಯನ್ನು ವೀಕ್ಷಿಸಬಹುದು.
- ಚಿತ್ರ-ಲೇಖನ: ಎಸ್.ಎಲ್. ರಾಘವೇಂದ್ರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.