ವಾಹನ

ಹೊಸ ಎಸ್‌ಯುವಿ

ಮೊನ್ನೆ ಬೆಂಗಳೂರಿನ ಮೆಟ್ರೋ ಹಾಗೂ ಕಾವೇರಿ ಫೋರ್ಡ್ ಮೂಲಕ ನೂತನ ಎಸ್‌ಯುವಿಯನ್ನು ಗ್ರಾಹಕರಿಗೆ ಹಸ್ತಾಂತರಿಸಲಾಯಿತು. ನಿರ್ಮಲ್ ಹಾಗೂ ಗುಂಜನ್ ಅಭಿಷೇಕ್ ಎಂಬವರು ಸಿಲಿಕಾನ್ ವ್ಯಾಲಿಯ ಮೊದಲ ಇಕೋಸ್ಪೋರ್ಟ್ ಚಾಲಕರೆಂಬ ಹೆಮ್ಮೆಗೆ ಪಾತ್ರರಾದರು.
ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಆಕರ್ಷಕವಾಗಿ ಇಕೋಸ್ಪೋರ್ಟ್ ರೂಪುಗೊಂಡಿದೆ. ಕಾರಿನ ಮತ್ತೊಂದು ವಿಶೇಷವೆಂದರೆ, 10 ವಿಧಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಾರಿನ ಪ್ರಾರಂಭಿಕ ಬೆಲೆ ರು. 5.69 ಲಕ್ಷವಾಗಿದೆ. ಡಿಸೇಲ್ ಹಾಗೂ ಪೆಟ್ರೋಲ್‌ನಲ್ಲಿ ತಲಾ 5 ಮಾದರಿಗಳು ಮತ್ತು 7 ಬಣ್ಣಗಳು ಮಾರುಕಟ್ಟೆಯಲ್ಲಿವೆ. ಇದಲ್ಲದೆ 3 ಎಂಜಿನ್ ಮಾದರಿಯಲ್ಲಿ ಕಾರು ದೊರೆಯುತ್ತಿದೆ. 1.5 ಎಲ್‌ವಿಸಿಟಿ ಪೆಟ್ರೋಲ್, 1.5 ಟಿಡಿಸಿಐ ಡೀಸೆಲ್ ಹಾಗೂ 1.0 ಎಲ್ ಇಕೋಬೂಸ್ಟ್ ಎಂಜಿನ್ ಮಾದರಿಗಳಿವೆ. ಇದೇ ಮೊದಲ ಬಾರಿಗೆ ಮಧ್ಯಮ ಗ್ರಾಹಕರ ಕಾರುಗಳಲ್ಲಿ ತುರ್ತು ಸೇವೆ ಒದಗಿಸಲಾಗಿದೆ.  ಅಪಘಾತವಾದಾಗ ಮೈಕ್ರೋಸಾಫ್ಟ್‌ನ ಸಿಂಕ್ ವ್ಯವಸ್ಥೆಯಿಂದ ತುರ್ತು ಸೇವೆಗಾಗಿ ಕರೆ ಹೋಗುತ್ತದೆ. ಇದಲ್ಲದೇ ವೈಸ್ ಕಮಾಂಡ್ ಮೂಲಕ ಫೋನ್ ಕಾಲ್ ಕೂಡ ಮಾಡಬಹುದು.
ಪಾನಪ್ರಿಯರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ನಿಮ್ಮಿಷ್ಟದ ಪಾನೀಯಗಳನ್ನು ತಂಪು ಮಾಡಿಕೊಂಡು ಕುಡಿಯಲು ಇಲ್ಲಿ ವ್ಯವಸ್ಥೆಯಿದೆ. ಆರು ಬೆವರೇಜ್ ಕ್ಯಾನ್‌ಗಳನ್ನು ತಂಪಾಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಂದೆ ಕೆಲ ಕಾರುಗಳಲ್ಲಿದ್ದ ಸ್ಮಾರ್ಟ್ ಕೀಲೆಸ್ ಎಂಟ್ರಿಯನ್ನು ಇಕೋಸ್ಪೋರ್ಟ್‌ನಲ್ಲಿ ಒದಗಿಸಲಾಗಿದೆ.  ಇನ್ನು ಇಕೋಸ್ಪೋರ್ಟ್‌ಗೆ ಬಳಸಿರುವ ಇಕೋಬೂಸ್ಟ್ ಎಂಜಿನ್‌ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. 3 ಸಿಲಿಂಡರ್ ಶಕ್ತಿ ಹಾಗೂ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಎಂಜಿನ್, 1.60 ಲೀಟರ್ ಕಾರ್ಯಕ್ಷಮತೆಯ ಇತರ ಎಂಜಿನ್‌ನಂತೆ ವರ್ತಿಸುತ್ತದೆ. ಅಲ್ಲದೇ ಇಂಧನ ಕ್ಷಮತೆಯನ್ನು ಶೇ.20ರಷ್ಟು ಹೆಚ್ಚಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!